ಬೇಸಿಗೆಯಲ್ಲಿ ಈ ಹಣ್ಣುಗಳನ್ನು ತಿನ್ನುವುದರಿಂದ ಶರೀರಕ್ಕೆ ಸಂಜೀವಿನಿಯಾಗಿ ಕೆಲಸ ಮಾಡುತ್ತೆ

0

ಈಗ ಬೇಸಿಗೆ ಬರುತ್ತಿದೆ ಎಲ್ಲಾ ಕಡೆಗಳಲ್ಲಿಯೂ ರಣರಣ ಬಿಸಿಲು ಈ ಸಮಯದಲ್ಲಿ ಪಿತ್ತಪ್ರಕೋಪ ವಾಗುವಂತಹ ವಾತಾವರಣ ಪ್ರಕೃತಿಯಲ್ಲಿ ಕಂಡುಬರುತ್ತದೆ. ಯಾವಾಗ ವಾತಾವರಣದಲ್ಲಿ ಪಿತ್ತಪ್ರಕೋಪವಾಗುತ್ತವೆ ಅದರ ಪರಿಣಾಮ ಮನುಷ್ಯನ ದೇಹದ ಮೇಲೆ ಉಂಟಾಗುತ್ತದೆ ಮನುಷ್ಯನು ಪ್ರಕೃತಿಯ ಒಂದು ಭಾಗ. ಪ್ರಕೃತಿಯಲ್ಲಿ ಉಂಟಾಗುವಂತಹ ಎಲ್ಲಾ ವ್ಯತ್ಯಯಗಳು ಜೀವಸಂಕುಲದ ಮೇಲೆ ಉಂಟಾಗುತ್ತದೆ.

ಪ್ರಕೃತಿಯಲ್ಲಿ ಉಂಟಾಗುವಂತಹ ವ್ಯತ್ಯಯಗಳನ್ನು ಸರಿ ಮಾಡುವುದಕ್ಕೆ ಪ್ರಕೃತಿಯೇ ಆಯಾ ಕಾಲಗಳಿಗೆ ತಕ್ಕಹಾಗೆ ಹೂವುಗಳನ್ನು ಹಣ್ಣುಗಳನ್ನು ತರಕಾರಿಗಳನ್ನು ಒದಗಿಸಿಕೊಡುತ್ತದೆ. ನಾವಿಂದು ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಹಣ್ಣನ್ನು ಯಾರು ಮತ್ತು ಹೇಗೆ ಬಳಸಬೇಕು ಅದರಿಂದ ಯಾವೆಲ್ಲಾ ಪ್ರಯೋಜನಗಳು ಉಂಟಾಗುತ್ತದೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.

ಬೇಸಿಗೆ ಸಮಯದಲ್ಲಿ ಎಲ್ಲಾ ಕಡೆಗಳಲ್ಲಿ ಕಲ್ಲಂಗಡಿಹಣ್ಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಇದನ್ನು ಯಾವ ರೀತಿಯಾಗಿ ಸೇವನೆ ಮಾಡಿದರೆ ಪ್ರಯೋಜನಗಳು ದೊರೆಯುತ್ತವೆ ಎಂಬುದರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ ಕಲ್ಲಂಗಡಿ ಹಣ್ಣು ಶೀತ ವೀರ್ಯ ದ್ರವ್ಯವಾಗಿದೆ ಮತ್ತು ಮಧುರ ರಸವನ್ನು ಹೊಂದಿದೆ ಕಲ್ಲಂಗಡಿ ಹಣ್ಣನ್ನು ಬೆಳಿಗ್ಗೆ ಮತ್ತು ಸೂರ್ಯ ಮುಳುಗಿದ ನಂತರ ಬಳಕೆ ಮಾಡಬಾರದು. ಏಕೆಂದರೆ ಸೂರ್ಯ ಯಾವಾಗ ಪ್ರಕೃತಿಯಲ್ಲಿ ಇರುವುದಿಲ್ಲ ಆ ಸಮಯದಲ್ಲಿ ವಾತಾವರಣ ಶೀತವಾಗಿರುತ್ತದೆ ಹಾಗಾಗಿ ಶೀತ ಪ್ರಕೃತಿ ಇರುವಂತವರು ಶೀತದ ವಾತಾವರಣದಲ್ಲಿ ಶೀತ ವೀರ್ಯ ದ್ರವ್ಯವಾಗಿರುವಂತಹ ಕಲ್ಲಂಗಡಿಯನ್ನು ಸೇವಿಸಬಾರದು. ಮಧ್ಯಾಹ್ನದ ಸಮಯದಲ್ಲಿ ಅಥವಾ ಸೂರ್ಯ ವಾತಾವರಣದಲ್ಲಿ ಇದ್ದಾಗ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು.

ಯಾರಿಗೆ ಕಫ ಪ್ರಕೃತಿ ಇರುತ್ತದೆ ಪದೇ ಪದೇ ಅಲರ್ಜಿ ಆಗುತ್ತಿರುತ್ತದೆ ಮೂಗು ಸೋರುತ್ತಿರುತ್ತದೆ ಕೆಮ್ಮು ಬರುತ್ತಿರುತ್ತದೆ ಸೀನು ಬರುತ್ತದೆ ಅಸ್ತಮ ಇದೆ ಎನ್ನುವವರು ಕಲ್ಲಂಗಡಿ ಹಣ್ಣನ್ನು ಮಿತವಾಗಿ ಬಳಸಬೇಕು. ಉಳಿದವರು ಬೇಸಿಗೆಯಲ್ಲಿ ಕಲ್ಲಂಗಡಿಯನ್ನು ಹೇರಳವಾಗಿ ಬಳಸಬಹುದು. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಗಳು ಹೇರಳವಾಗಿದೆ ಕಲ್ಲಂಗಡಿ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ಗಳು ಖನಿಜಗಳು ಮತ್ತು ವಿಟಮಿನ್ ಸಿ ಮತ್ತು ಡಿ ಗಳು ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ.

ಆದ್ದರಿಂದ ಇದನ್ನು ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯ ಎಂದು ಪರಿಗಣಿಸಲಾಗಿದೆ ಕಲ್ಲಂಗಡಿ ಹಣ್ಣಿನ ಬಳಕೆಯಿಂದ ಮನಸ್ಸು ಶಾಂತವಾಗಿ ದೇಹಕ್ಕೆ ಶಕ್ತಿ ಸಿಗುತ್ತದೆ. ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆ ಇರಬಾರದು ಏಕೆಂದರೆ ನೀರಿನ ಪ್ರಮಾಣ ಕಡಿಮೆಯಾದ ಕೂಡಲೇ ಅನಾರೋಗ್ಯಕ್ಕೆ ಒಳಗಾಗಬಹುದು ಆದ್ದರಿಂದ ದೇಹವನ್ನು ಹೈಡ್ರೇಟ್ ಆಗಿರಲು ಕಲ್ಲಂಗಡಿ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ.

ಕಲ್ಲಂಗಡಿ ಹಣ್ಣಿನ ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾಗಿರುವ ನೀರಿನಂಶವನ್ನು ಒದಗಿಸುವುದರ ಜೊತೆಗೆ ಶೀತ ಮಟ್ಟವನ್ನು ಹೆಚ್ಚಿಸುತ್ತದೆ ಬೇಸಿಗೆಯ ತಾಪಮಾನವನ್ನು ಕಡಿಮೆ ಮಾಡಿ ಅಗತ್ಯ ಪೋಷಕಾಂಶಗಳನ್ನು ಈ ರಸಬರಿತ ಹೆಣ್ಣು ನಿಮಗೆ ನೀಡುತ್ತದೆ. ಕಲ್ಲಂಗಡಿ ಹಣ್ಣನ್ನು ಕಟ್ ಮಾಡಿ ಅಥವಾ ಜ್ಯೂಸ್ ಮಾಡಿ ಸೇವಿಸಬಹುದು ಈ ರೀತಿಯಾಗಿ ನೀವು ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ಮಾಡುವುದರಿಂದ ದೇಹಕ್ಕೆ ತಂಪು ನೀಡುವುದಲ್ಲದೆ ಶಕ್ತಿಯನ್ನು ಕೂಡ ತುಂಬುತ್ತದೆ. ಇದರಿಂದ ನಿಮಗೆ ಆಯಾಸ ಉಂಟಾಗುವುದಿಲ್ಲ ನೀವು ಕೂಡ ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆಯನ್ನು ಮಾಡುವುದರ ಮೂಲಕ ನಿಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗು ಸ್ನೇಹಿತರೊಂದಿಗೆ ಹಂಚಿಕೊಳ್ಳಿ

Leave A Reply

Your email address will not be published.

error: Content is protected !!
Footer code: