ಹೆಣ್ಮಕ್ಕಿಗೆ ಈ ಸಮಸ್ಯೆ ಕಾಡೋದೇಕೆ

0

ಮಹಿಳೆಯರಲ್ಲಿ ಸ್ತನಗಳ ನೋವು ಕಂಡು ಬರಲು ಕಾರಣವೇನು. ಇತ್ತೀಚಿನ ಕಾಲಮಾನದಲ್ಲಿ ಕ್ಯಾನ್ಸರ್ ಎನ್ನುವುದು ಎಲ್ಲಾ ದೇಹದ ಅಂಗಗಳನ್ನು ಆವರಿಸುತ್ತಿದೆ ಮತ್ತು ಸರ್ವೇ ಸಾಮಾನ್ಯವಾಗಿದೆ.

ಅದರಲ್ಲಿ, ಸ್ತನ ಕ್ಯಾನ್ಸರ್ ಕೂಡ ಒಂದು. ಒಂದು ವೇಳೆ ಸ್ತನಗಳಲ್ಲಿ ನೋವು ಕಾಣಿಸಿಕೊಂಡರೆ ಅದು ಕ್ಯಾನ್ಸರ್ ಇರಬಹುದು ಎನ್ನುವ ಸಂದೇಹ ಎಲ್ಲಾ ಮಹಿಳೆಯರಲ್ಲೂ ಉಂಟಾಗುತ್ತದೆ. ಮಹಿಳೆಯರಲ್ಲಿ ಸ್ತನ ನೋವು ಕಾಣಿಸುವುದು ಸಾಮಾನ್ಯ ಸಮಸ್ಯೆ. ಇನ್ನು ಮುಟ್ಟಿನ 2-3 ದಿನಗಳ ಮುಂಚಿತವಾಗಿ ಮಹಿಳೆಯರು ನೋವು ಅನುಭವಿಸುವುದು ಕೂಡ ಸಾಮಾನ್ಯ. ಕೆಲವೊಮ್ಮೆ ನೋವು 5 ದಿನಗಳ ಮೇಲೆ ಕೂಡ ಇರುತ್ತದೆ.

ಕೆಲವು ಮಹಿಳೆಯರಿಗೆ ಮುಟ್ಟು ಶುರುವಾಗುವ ಮುನ್ನ ಈ ನೋವು ಕಾಣಿಸುತ್ತದೆ. ಆದರೆ, ಈ ರೀತಿ ಸಮಸ್ಯೆ ತಕ್ಷಣ ಕಂಡುಬಂದರೆ ಮಹಿಳೆಯರು ಹೆಚ್ಚು ಎದರುವರು. ಆದರೆ, ಇದರ ಕುರಿತು ಆರೋಗ್ಯ ತಜ್ಞರು ಮಾಹಿತಿ ನೀಡಿರುವ ಪ್ರಕಾರ.ಈ ತೊಂದರೆಯ ಕುರಿತು ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಮೊದಲು ಈ ತೊಂದರೆಯ ಮೂಲವನ್ನು ಹುಡುಕಿ ಅದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು.

ಸ್ತನಗಳ ನೋವಿಗೆ ಬೇರೆ ಬೇರೆ ಕಾರಣಗಳನ್ನು ತಿಳಿಯೋಣ ಬನ್ನಿ :-
*ಹಾರ್ಮೋನ್’ಗಳ ವ್ಯತ್ಯಾಸ ( Hormonal changes ) :-ಹೌದು ಸ್ತನಗಳ ನೋವು ದೇಹದಲ್ಲಿ ಹಾರ್ಮೋನ್’ಗಳ ಏರುಪೇರಿನಿಂದ ಬರುತ್ತದೆ. ಋತುಚಕ್ರ/ ಮುಟ್ಟು ಅಥವಾ ಋತುಬಂಧದ ವೇಳೆಯಲ್ಲಿ ಬದಲಾಗುವ ಹಾರ್ಮೋನ್’ಗಳ ಕಾರಣದಿಂದ ಈ ನೀವು ಕಾಣಬಹುದು.

*ಹುಡುಗಿ ವಯಸ್ಸಿಗೆ ಬಂದ ಸಮಯ :-ಈ ಸಮಯದಲ್ಲಿ ಋತುಚಕ್ರ ಶುರುವಾಗುವ ಕಾರಣ ಸ್ತನಗಳ ನೋವು ಸಹಜ, ಸ್ತನಗಳ ಗಾತ್ರ ಮತ್ತು ಆಕರ ಹೆಚ್ಚಾಗುವ ಸಂದರ್ಭ ಹೆಚ್ಚಿನ ಹುಡುಗಿಯರು ವೈದ್ಯರ ಬಳಿ ಸ್ತನಗಳ ನೋವು ಜಾಸ್ತಿ ಇದೆ ಎಂದು ಕೂಡ ಹೇಳುವರು. ಆದರೆ, ಇದರಿಂದ ಯಾವ ವಿಧವಾದ ಸಮಸ್ಯೆ ಕೂಡ ಎದುರಾಗುವುದಿಲ್ಲ.

*ಗರ್ಭಾವಸ್ಥೆ :-ಗರ್ಭಾವಸ್ಥೆ ವೇಳೆಯಲ್ಲಿ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ತಾಯಿಯಾದ ಮಹಿಳೆಗೆ ಮಗುವಿಗೆ ಹಾಲು ಕೊಡುವ ಸಮಯದಲ್ಲಿ ಸಹ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸ್ತನಗಳಲ್ಲಿ ಹಾಲು ಉತ್ಪಾದನೆ ಹೆಚ್ಚಾದಂತೆ ಅದು, ಬಿಗಿಯಾಗುತ್ತದೆ. ಇದನ್ನು, ತಪ್ಪಿಸಲು ಮಗುವಿಗೆ ಪ್ರತಿ ಎರಡು ಗಂಟೆಗಳಿಗೆ ಒಂದು ಬಾರಿ ಹಾಲು ಕುಡಿಸುವುದು ಉತ್ತಮ ಆಯ್ಕೆ.

*ಟೈಟ್ ಬ್ರಾ ಧಾರಣೆ ಮಾಡುವುದು :-ದಿನ ಪೂರ ಟೈಟ್ ಒಳ ಉಡುಪು ಧರಿಸುವ ಕಾರಣ ಈ ತೊಂದರೆ ಉಂಟಾಗುತ್ತದೆ. ಅದರಿಂದ, ಅವರ ಸ್ತನಗಳ ಗಾತ್ರಕ್ಕೆ ತಕ್ಕಂತೆ ಸರಿಯಾದ ರೀತಿಯ ಮತ್ತು ಸರಿಯಾದ ಗಾತ್ರದ ಒಳ ಉಡುಪು ಧರಿಸುವುದು ಒಳ್ಳೆಯದು.

*ಧೂಮಪಾನ ಮತ್ತು ಮದ್ಯಪಾನ ಮಾಡುವ ಮಹಿಳೆಯರು :-
ಹೆಚ್ಚು ಧೂಮಪಾನ ಮತ್ತು ಮದ್ಯಪಾನ ಮಾಡುವ ಮಹಿಳೆಯರಿಗೆ ಹೆಚ್ಚು ಸ್ತನಗಳ ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಇದು ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಉಡುಗೆ ಧರಿಸಲು ಸಹ ಕಷ್ಟ ಆಗಬಹುದು. ಈ ಪೈಕಿ ಸುಮಾರು 8% ಮಹಿಳೆಯರಲ್ಲಿ ನೋವು ತೀವ್ರವಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ, ಅವರಿಗೆ ದಿನನಿತ್ಯದ ಚಟುವಟಿಕೆಗಳಿಗೂ ಸಮಸ್ಯೆ ಎದುರಾಗಬಹುದು.

ಸ್ಥಾನ ನೋವು ಇದ್ದವರು ಏನು ಮಾಡಬೇಕು ?.
ಸಂಪೂರ್ಣ ಸ್ತನ ಪರೀಕ್ಷೆ ಮಾಡಿ, ಒತ್ತಡವನ್ನು ಕಡಿಮೆ ಮಾಡಿಕೊಂಡು ವಿಶ್ರಾಂತಿ ಪಡೆಯಬೇಕು. ಪ್ರತಿದಿನ ವ್ಯಾಯಾಮ ಮಾಡಿ ದೈಹಿಕ ಚಟುವಟಿಕೆಯನ್ನು ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು. ಎಣ್ಣೆ ಪದಾರ್ಥಗಳು, ಹೆಚ್ಚು ಉಪ್ಪು ಮತ್ತು ಹೆಚ್ಚು ಸಕ್ಕರೆ ಪದಾರ್ಥಗಳನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು. ಒಂದು ವೇಳೆ ನೋವು ತುಂಬಾ ಹೆಚ್ಚಾಗಿ ಇದ್ದರೆ. ವೈದ್ಯರನ್ನು ಭೇಟಿ ಮಾಡಿ ಅದಕ್ಕೆ ಸೂಕ್ತವಾದ ಪರಿಹಾರವನ್ನು ಪಡೆದುಕೊಳ್ಳುವುದು ಉತ್ತಮ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: