ಕರಾವಳಿ ಜನರ ಆರಾಧ್ಯ ದೈವ ಕೊರಗಜ್ಜನನ್ನು ಭಕ್ತಾದಿಗಳು ಅಷ್ಟೊಂದು ಇಷ್ಟ ಪಡೋದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ

0

ತುಳು ನಾಡು ಸಂಸ್ಕೃತಿ ಹಾಗೂ ಆಚರಣೆಗಳ ತವರೂರು ಎಷ್ಟೆ ದೂರ ಇದ್ದರೂ ದೈವಾರಾಧನೆ ಮಾಡುವುದನ್ನು ಬಿಡುವುದಿಲ್ಲ ದೈವಾರಾಧನೆಯ ಒಂದು ಬದುಕಾಗಿದೆ ತುಳು ನಾಡಿನ ಜನತೆ ಬಹಳ ಶ್ರದ್ದಾ ಭಕ್ತಿಯಿಂದ ಕೊರಗಜ್ಜನನ್ನು ಆರಾಧನೆ ಮಾಡುತ್ತಾರೆ ಕೊರಗಜ್ಜ ನನ್ನು ಎಷ್ಟೇ ಕಷ್ಟದಲ್ಲಿ ಇದ್ದರು ಭಕ್ತಿಯಿಂದ ಆರಾಧನೆ ಮಾಡಿದರೆ ಸಮಸ್ಯೆ ನಿವಾರಣೆ ಆಗುತ್ತದೆ ತುಳು ನಾಡಿನ ಜನತೆ ಯಾವುದಾದರೂ ವಸ್ತು ಕಾಣೆ ಆದರೆ ಮೊದಲು ಪೊಲೀಸ್ ಠಾಣೆ ಗೆ ಹೋಗಿ ಕಂಪ್ಲೇಂಟ್ ಕೊಡುವುದು ಇಲ್ಲ ಬದಲಾಗಿ ಕೊರಗಜ್ಜನಲ್ಲಿ ಹರಕೆ ಮಾಡಿಕೊಳ್ಳುತ್ತಾರೆ ಅಥವಾ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ

ಹೀಗೆ ಕೊರಗಜ್ಜನ ಮೊರೆ ಹೋದರೆ ಕಳೆದುಕೊಂಡ ವಸ್ತುಗಳು ಕೈ ಸೇರುತ್ತದೆ ಹಾಗೆಯೇ ಕಷ್ಟಗಳು ಬಂದಾಗ ಕೊರಗಜ್ಜನ ಆರಾಧನೆ ಮಾಡಿದರೆ ಎಲ್ಲ ಕಷ್ಟಗಳು ನಿವಾರಣೆ ಆಗುತ್ತದೆ ಎನ್ನುವ ಅಚಲವಾದ ನಂಬಿಕೆ ಇದೆ .ಕೊರಗಜ್ಜನ ಕಟ್ಟೆಯ ಬಳಿ ರಾತ್ರಿ ಹೊತ್ತು ಬೆಳಕು ಹಾಕುವಂತಿಲ್ಲ ಹಾಗೆಯೇ ಕೊರಗಜ್ಜನ ಭಕ್ತಾದಿಗಳು ಕೋಲ ಸೇವೆ ಹಾಗೂ ಅಗುಲ ಸೇವೆಯನ್ನು ಮಾಡುತ್ತಾರೆ ನಾವು ಈ ಲೇಖನದ ಮೂಲಕ ಕೊರಗಜ್ಜನ ಬಿವಿಗೆ ತಿಳಿದುಕೊಳ್ಳೋಣ.

ತುಳು ನಾಡು ಸಂಸ್ಕೃತಿ ಆಚರಣೆಗಳ ತವರೂರು ಪ್ರಾಕೃತಿಕ ವಾಗಿ ಎಷ್ಟು ಸುಂದರವಾಗಿ ಇದೆಯೋ ಸಂಸ್ಕೃತಿಯ ಆಚರಣೆಯಲ್ಲಿ ಸಹ ಅಷ್ಟೇ ಶ್ರೀಮಂತವಾಗಿದೆ ಈ ಭಾಗದ ಜನರು ಎಷ್ಟೆ ಶ್ರೀಮಂತಿಕೆಗೆ ಹೋಗಿದ್ದರು ಸಹ ತಮ್ಮ ಆಚರಣೆಯನ್ನು ಇಂದಿಗೂ ಸಹ ಮರೆತಿಲ್ಲ ಭೂತ ಕೋಲ ಹಾಗೂ ದೈವಾರಾಧನೆ ಮಾಡುವ ಸಂದರ್ಭದಲ್ಲಿ ತಮ್ಮ ಹುಟ್ಟೂರಿಗೆ ಎಲ್ಲೆ ಇದ್ದರು ಬರುತ್ತಾರೆ ದೈವದ ಆರಾಧನೆಯನ್ನು ಮಾಡುತ್ತಾರೆ ಕಾಂತಾರ ಸಿನಿಮಾ ಬಂದ ಮೇಲೆ ತುಳು ನಾಡಿನ ಬಗ್ಗೆ ಕುತೂಹಲ ಕಂಡುಬಂದಿದೆ. ದೈವ ಅಂದರೆ ಜೀವನದ ಒಂದು ಭಾಗವಾಗಿದೆ ಕೊರಗಜ್ಜ ಅಂದರೆ ಅಲ್ಲಿನ ಜನರಿಗೆ ವಿಶೇಷವಾದ ಪ್ರೀತಿ ಇದೆ

ಪ್ರತಿ ಕಷ್ಟಗಳಿಗು ಮೊದಲು ನೆನಪು ಮಾಡಿಕೊಳ್ಳುವುದು ಕೊರಗಜ್ಜನನ್ನು ಹಾಗೆಯೇ ಕೊರಗಜ್ಜನ ವಿಷಯದಲ್ಲಿ ಪ್ರತಿಯೊಂದು ಜಾತಿಯವರು ಧರ್ಮದವರು ಸಹ ಆರಾಧನೆ ಮಾಡುತ್ತಾರೆ ಓಡಿ ಮತ್ತು ಅಚ್ಚುಮೈರದಿ ಎನ್ನುವ ಕೊರಗ ದಂಪತಿಗಳಿಗೆ ಒಂದು ಮುದ್ದಾಗ ಮಗು ಜನಿಸುತ್ತದೆ ತನಿಯ ಕೊರಗ ಎಂದು ಪ್ರೀತಿಯಿಂದ ಹೆಸರು ಇಡುತ್ತಾರೆ ಆದರೆ ತನಿಯ ಕೊರಗ ತನ್ನ ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿ ಕಳೆದುಕೊಂಡು ಅನಾಥ ನಾಗುತ್ತಾನೆ ಅಲ್ಲಿಯ ಬೈದರೆ ಜನಾಂಗದ ಮೈರಕ್ಕ ಬೈದದಿ ಎನ್ನುವ ಮಹಿಳೆ ಆತನನ್ನು ಸಾಕುತ್ತಾಳೆ ಬೈದರೆ ಜನಾಂಗದ ಕುಲ ಕಸುಬು ಸೆಂದು ತಯಾರಿಸಿ ಮಾರುವುದು ಆಗಿರುತ್ತದೆ .

ತನಿಯ ಕೊರಗ ಸಹ ಬಾಲ್ಯದಿಂದಲೆ ಅದೆಲ್ಲವನ್ನೂ ಕರಗತ ಮಾಡಿಕೊಳ್ಳುತ್ತಾನೆ ಹಾಗೆಯೇ ಸಾಮಾನ್ಯ ಮನುಷ್ಯರಿಗಿಂತ ಹೆಚ್ಚಿನ ಶಕ್ತಿ ಇರುತ್ತದೆ ಎಲ್ಲ ಕೆಲಸವನ್ನು ಪಟ ಪಟ ಮಾಡಿ ಮುಗಿಸುವ ಶಕ್ತಿ ಇರುತ್ತದೆ ಎಲ್ಲರೂ ಸಹ ಈತನನ್ನು ನೋಡಿ ಆಶ್ಚರ್ಯಕ್ಕೆ ಒಳಗಾಗುತ್ತಾರೆ ಒಂದು ಪ್ರತೀತಿಯ ಪ್ರಕಾರ ಒಮ್ಮೆ ಸೇಂದಿ ತಯಾರಿಸಲು ಹಣ್ಣನ್ನು ತರಬೇಕು ಎಂದು ಹೋದ ಸಂದರ್ಭದಲ್ಲಿ ಆಚನಕವಾಗಿ ಮಾಯ ಆಗುತ್ತಾನೆ ಅದಾದ ನಂತರ ಅಲ್ಲೇ ಕಲ್ಲಾಗಿ ಹೋಗುತ್ತಾನೆ ಅಂದಿನಿಂದ ಜನ ಪ್ರೀತಿಯಿಂದ ಕೊರಗಜ್ಜ ಎಂದು ಹೇಳುತ್ತಾರೆ.

ಯಾವುದಾದರೂ ಒಂದು ವಸ್ತು ಕಳೆದುಹೋಯಿತು ಎಂದರೆ ಕೊರಗಜ್ಜನಿಗೆ ಹರಕೆಯನ್ನು ಹೊತ್ತು ಕೊಳ್ಳುತ್ತಾರೆ ಆಗ ಆ ವಸ್ತುಗಳು ಸಿಗುತ್ತದೆ ಎನ್ನುವ ನಂಬಿಕೆ ಸಾಕಷ್ಟು ಜನರಿಗೆ ಇದೆ ಅದೇ ರೀತಿಯಾಗಿ ಸಾಕಷ್ಟು ಘಟನೆಗಳು ನಡೆದಿವೆ ದಕ್ಷಿಣ ಕನ್ನಡದಲ್ಲಿ ಕೊರಗಜ್ಜನ ಹಲವಾರು ದೇವಾಲಯ ಇದೆ ಪರಶಿವನ ಅವತಾರವಾದ ಹಾಗೆಯೇ ಕೊರಗಜ್ಜನಿಗೆ ತಾಂಬೂಲವನ್ನು ಕೊಡುತ್ತಾರೆ ಬೀಡಿಯನ್ನು ಕೊಡುತ್ತಾರೆ ಸೇಂದಿ ಮಧ್ಯ ಇವೆಲ್ಲವನ್ನೂ ನೈವೇದ್ಯಕ್ಕೆ ಇಡುತ್ತಾರೆ ಹರಕೆ ರೂಪದಲ್ಲಿ ಇಡುತ್ತಾರೆ.

ಅಗಲು ಸೇವೆಯನ್ನು ನೀಡುತ್ತಾರೆ ಇದು ಜನರು ಸಾಮಾನ್ಯವಾಗಿ ಬಳಸುವ ಪದರ್ಥವಾಗಿರುತ್ತದೆ ಹಾಗೆಯೇ ಹುರುಳಿ ಬಸಳೆ ಮೀನು ಕೋಳಿ ಉಪ್ಪಿನಕಾಯಿ ಚಕ್ಲಿ ಸೇಂದಿ ಇವೆಲ್ಲವನ್ನೂ ಅಗಲು ಸೇವೆಯ ಸಂದರ್ಭದಲ್ಲಿ ಬಾಳೆ ಎಲೆಯನ್ನು ಹಾಕಿ ನೈವೇದ್ಯವಾಗಿ ಇಡುತ್ತಾರೆ ಕೊರಗಜ್ಜ ಎಂದರೆ ನಮ್ಮ ನಿಮ್ಮ ನಡುವೆ ಇರುವ ದೈವವಾಗಿದೆ ಇನ್ನೊಂದು ಸೇವೆ ಎಂದರೆ ಭೂತ ಕೋಲ ಅಥವಾ ಕೋಲ ಸೇವೆ ಅಲ್ಲಿ ಕೊರಗಜ್ಜನ ವೇಷವನ್ನು ಧರಿಸಲಾಗುತ್ತದೆ ಕಪ್ಪು ಬಣ್ಣವನ್ನು ಮೈ ತುಂಬಾ ಬಳಿದುಕೊಳುತ್ತಾರೆ

ಹಾಳೆಯಿಂದ ಮಾಡಿದ ಟೋಪಿಯನ್ನು ಧರಿಸುತ್ತಾರೆ ಸೊಂಟಕ್ಕೆ ಕವಚವನ್ನು ಧರಿಸುತ್ತಾರೆ ಕೈ ಅಲ್ಲಿ ಬೆತ್ತವನ್ನು ಹಿಡಿದು ತಾಳಕ್ಕೆ ತಕ್ಕಂತೆ ಕುಣಿತ ಹೋಗುತ್ತಾರೆ .ಆಗ ಜನರ ಕಷ್ಟವನ್ನು ಕೊರಗಜ್ಜ ಕೇಳುತ್ತಾನೆ ಕೊರಗಜ್ಜನ ವೇಷ ಹಾಕುವರು ನಲಿಕೆ ಸಮಾಜಕ್ಕೆ ಸೇರಿದಂತವರು ಕೊರಗಜ್ಜನಿಗೆ ಆಗಲು ಸೇವೆ ಮತ್ತು ಕೋಲ ಸೇವೆಯನ್ನು ಮಾಡಲಾಗುತ್ತದೆ ಮೂಲ ದೈವ ಸ್ಥಾನ ಇರುವುದು ಮಂಗಳೂರು ಭಾಗದ ಕುತ್ತಾರಿನಲ್ಲಿ ಅಲ್ಲಿ ಅಜ್ಜನ ಸ್ಥಳ ಎಂದು ಎಲ್ಲರೂ ಹೋಗುತ್ತಾರೆ ಅಲ್ಲಿ ಬರುವ ಭಕ್ತಾದಿಗಳು ರಾತ್ರಿ ಸಮಯದಲ್ಲಿ ಹೆಡ್ ಲೈಟ್ ಹಾಕಿಕೊಂಡು ಬರುವುದು ಇಲ್ಲ

ಕೊಲ್ ಸೇವೆಯಲ್ಲಿ ಸಹ ಅಗರಬತ್ತಿ ಬೆಳಕನ್ನು ಸಹ ಹಚ್ಚುವುದು ಇಲ್ಲ ಬೆಳಕಿನಲ್ಲಿ ಯಾವುದೇ ರೀತಿಯ ಸೇವೆಯನ್ನು ಮಾಡಲಾಗುವುದು ಇಲ್ಲ ರಾತ್ರಿ ಏಳು ಗಂಟೆಯ ನಂತರ ಅಜ್ಜನ ಕಟ್ಟೆಯ ಪ್ರವೇಶ ಇರುವುದು ಇಲ್ಲ ಈ ಭಾಗದ ಜನ ಎಲ್ಲೆ ಇದ್ದರು ಸಹ ತಮ್ಮದೇ ಅದ ಸೇವೆಯನ್ನು ಸಲ್ಲಿಸುತ್ತಾರೆ ಕೊರಗಜ್ಜ ನಾನಾ ರೀತಿಯ ಅಗ್ನಿ ಪರೀಕ್ಷೆಗೆ ಒಳಗಾಗಿದ್ದಾನೆ ಒಬ್ಬ ಯುವಕ ಸಾಮಾಜಿಕ ಜಾಲ ತಾಣದಲ್ಲಿ ಅಸಭ್ಯವಾಗಿ ಹೇಳಿದ್ದನು ಬರೆದ ಸ್ವಲ್ಪ ದಿನದಲ್ಲಿ ತಾಯಿ ಅನಾರೋಗ್ಯಕ್ಕೆ ಒಳಗಾಗುತ್ತಾಳೆ ನಂತರ ಯುವಕ ಕೊರಗಜ್ಜನ ದೈವಸ್ಥಾನಕ್ಕೆ ಬಂದು ತಪ್ಪಾಯಿತು ಎಂದು ಕೇಳುತ್ತಾನೆ

ಆ ನಂತರ ಅವರ ತಾಯಿಗೆ ಸರಿ ಆಯಿತು. ಅನ್ಯ ಧರ್ಮದ ಯುವಕರು ಕೊರಗಜ್ಜನನ್ನು ಪರೀಕ್ಷಿಸಲು ಕಾಣಿಕೆ ಡಬ್ಬದಲ್ಲಿ ಕಾಂಡೊಮ್ ಹಾಕಿದ್ದರು ಹಾಗೆಯೇ ಕಾಣಿಕೆ ಡಬ್ಬದಲ್ಲಿ ಇದ್ದ ಹಣವನ್ನು ಎತ್ತುಕೊಂಡು ಹೋಗಿದ್ದರು ಇದನ್ನು ನೋಡಿದ ಭಕ್ತರಿಗೆ ಶಾಕ್ ಆಗಿತ್ತದೆ ಹಾಗಾಗಿ ಕೊರಗಜ್ಜನಿಗೆ ಮನವಿ ಮಾಡಿದ್ದರು ಸಲ್ಪ ದಿನದ ನಂತರ ಬಂದ ಯುವಕರು ಕಿಡ್ನಿಯ ಸಮಸ್ಯೆಹೀಗೆ ಬೇರೆ ಬೇರೆ ಸಮಸ್ಯೆ ಕಂಡು ಬಂದಿತ್ತು ಹಾಗಾಗಿ ಯುವಕರು ಅಜ್ಜನ ಕಟ್ಟೆಯ ಬಳಿ ಕ್ಷಮೆ ಕೇಳಲು ಬಂದಿದ್ದರೂ ಕೊರಗಜ್ಜ ತನ್ನ ನಂಬಿದವರಿಗೆ ಜೀವನವನ್ನು ಕೊಟ್ಟಿದ್ದಾನೆ ಜಯದ ಮೇಲೆ ಜಯ ಸಿಗುವಂತೆ ಮಾಡಿದ್ದಾನೆ ಕಷ್ಟ ಅಂತ ಬಂದವರಿಗೆ ಕಷ್ಟಗಳನ್ನು ದೂರ ಮಾಡಿದ್ದಾನೆ.

Leave A Reply

Your email address will not be published.

error: Content is protected !!
Footer code: