ಸುಲಭವಾಗಿ ಬೋರ್ವೆಲ್ ಪಾಯಿಂಟ್, ನೀರು ಎಲ್ಲಿದೆ ಅಂತ ಕಂಡು ಹಿಡಿಯುತ್ತಾರೆ

0

ರೈತರು ತಮ್ಮ ಜಮೀನಿನಲ್ಲಿ ನೀರಿಗಾಗಿ ಬೋರ್ವೆಲ್ ಕೊರೆಸುತ್ತಾರೆ ಬೋರ್ವೆಲ್ ಕೊರೆಸಲು ಹಲವು ಪರಿಕರ ಹಾಗೂ ಜನರು ಸಿಗುತ್ತಾರೆ ಆದರೆ ಬೋರ್ ಪಾಯಿಂಟ್ ಎಲ್ಲಿದೆ ಎಂದು ನೀರು ಎಲ್ಲಿ ಸಿಗುತ್ತದೆ ಎಂದು ಎಲ್ಲರಿಂದಲೂ ಹೇಳಲು ಸಾಧ್ಯವಿಲ್ಲ. ಬೆಂಗಳೂರಿನ ರಮೇಶ್ ಗೌಡ ಎನ್ನುವವರು ಬೋರ್ ಪಾಯಿಂಟ್ ಅನ್ನು ಟೆಕ್ನಾಲಜಿ ಮೂಲಕ ತಿಳಿಸಿ ಕೊಡುತ್ತಾರೆ ಹಾಗಾದರೆ ಅವರ ಟೆಕ್ನಾಲಜಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ರಮೇಶ್ ಗೌಡ ಎನ್ನುವವರು ಬಹಳ ವರ್ಷಗಳಿಂದ ನೀರಿನ ಪಾಯಿಂಟ್ ಕಂಡುಹಿಡಿಯುವ ಬಿಸಿನೆಸ್ ಮಾಡಿಕೊಂಡು ಬರುತ್ತಿದ್ದಾರೆ. ಲೋರನ್ ಮ್ಯಾಕ್ಸ್ 750 ಎಂಬ ಹೊಸ ಟೆಕ್ನಾಲಜಿ ಬಂದಿದೆ ಇದರ ಮೂಲಕ ಮನೆ ಹತ್ತಿರ, ತೋಟದಲ್ಲಿ ಎಲ್ಲಿ ಬೇಕಾದರೂ ಬೋರ್ ವೆಲ್ ಪಾಯಿಂಟ್ ಮಾಡಿಕೊಡುತ್ತಾರೆ. ಅವರು ರೈತರಾಗಿದ್ದು ಹಳ್ಳಿಯಲ್ಲಿ ಜೀವನ ಮಾಡುತ್ತಿರುವುದರಿಂದ ಕಡಿಮೆ ಬೆಲೆಯಲ್ಲಿ ಕೆಲಸ ಮಾಡಿ ಕೊಡುತ್ತಾರೆ. ಅವರು ಸುಮ್ಮನೆ ಬಾಯಿಗೆ ಬಂದಿದ್ದು ಅಲ್ಲಿ ನೀರು ಬರುತ್ತದೆ ಇಲ್ಲಿ ನೀರು ಬರುತ್ತದೆ ಎಂದು ಹೇಳುವುದಿಲ್ಲ. ಇದುವರೆಗೂ ಅವರು ಕೊಟ್ಟಿರುವ ಪಾಯಿಂಟ್ ಯಾವುದು ಫೇಲ್ ಆಗಿದ್ದಿಲ್ಲ. ಅವರು ಹೇಳಿರುವ ಜಾಗದಲ್ಲೆ ಪಾಯಿಂಟ್ ಮಾಡಿಕೊಂಡು ಅಲ್ಲೆ ಬೋರ್ವೆಲ್ ಕೊರೆಸಬೇಕು ಅರ್ಧ ಅಡಿ ಜಾಗ ಹೆಚ್ಚು ಕಡಿಮೆಯಾದರೂ ನೀರು ಬರುವುದಿಲ್ಲ.

ಅವರು ಬಳಸುವ ಮಷೀನ್ ಅಮೆರಿಕದ ಟೆಕ್ನಾಲಜಿಯಾಗಿದೆ, ಕಡ್ಡಿ ದಾರ ಬಳಸಿಕೊಂಡು ಗಿಮಿಕ್ ಮಾಡುವ ಅವಶ್ಯಕತೆ ಇಲ್ಲ. ಮೊದಲಿಗೆ ಈ ಮಷೀನ್ ಅನ್ನು ಆನ್ ಮಾಡಿಕೊಳ್ಳಬೇಕು ನಂತರ ಸೆಟ್ ಮಾಡಬೇಕು ಟುಬೆಲ್ ಎಂದರೆ ಬೋರ್ ಪಾಯಿಂಟ್, ಓಪನ್ ಬೆಲ್ ಎಂದರೆ ಬಾವಿ ಎಂದು ಅರ್ಥ ಟುಬೆಲ್ ಸೆಟ್ ಮಾಡಿಕೊಂಡು ಫ್ರಂಟ್ ಜೋನ್ ಸೆಲೆಕ್ಟ ಮಾಡಿಕೊಂಡು ಆಟೊ ಮಾಡಿಕೊಳ್ಳಬೇಕು. ನಂತರ ಎಷ್ಟು ಮೀಟರ್ ಬೇಕು ಎಂದು ಸೆಟ್ ಮಾಡಿಕೊಂಡರೆ ಅಷ್ಟು ವಿಸ್ತಾರದವರೆಗೆ ಸ್ಕ್ಯಾನ್ ಮಾಡುತ್ತದೆ ಸೆಟ್ ಮಾಡಿದರೆ ಆಟೋಮೆಟಿಕ್ ಸ್ಕ್ಯಾನ್ ಮಾಡುತ್ತದೆ. ನಂತರ ಮಷೀನ್ ಅನ್ನು ನೇರವಾಗಿ ಹಿಡಿದುಕೊಂಡು ನಿಧಾನವಾಗಿ ನಡೆಯಬೇಕು ಮಷಿನ್ ಗೆ ಎರಡು ಎಂಟೆನಾ ರೀತಿಯಲ್ಲಿ ಇರುತ್ತದೆ ಅದು ತೋರಿಸುವ ದಿಕ್ಕಿಗೆ ನಿಧಾನವಾಗಿ ಹೋಗಬೇಕು ಬೋರ್ ಪಾಯಿಂಟ್ ಇದ್ದಲ್ಲಿ ಆಂಟೆನಾ ನೈಂಟಿ ಡಿಗ್ರಿ ತಿರುಗುತ್ತದೆ ಅದು ತಿರುಗಿದ ಪಾಯಿಂಟ್ ಬೋರ್ ಪಾಯಿಂಟ್ ಆಗಿರುತ್ತದೆ.

ಈ ಮಷೀನ್ ಮೂಲಕ ಸಾವಿರ ಒಂದುವರೆ ಸಾವಿರ ಅಡಿಯಲ್ಲಿರುವ ವಾಟರ್ ಲೆವೆಲ್ ಗಳನ್ನು ಗುರುತಿಸಬಹುದು, ಸ್ಯಾಟಲೈಟ್ ಇಂದ ನಮಗೆ ತಿಳಿಯುತ್ತದೆ ಮೊಬೈಲ್ ಸಿಗ್ನಲ್ ರೀತಿಯ ವ್ಯವಸ್ಥೆ ಇದರಲ್ಲಿಯೂ ಇರುತ್ತದೆ. ಈ ಮಷಿನ್ 90 ಡಿಗ್ರಿ ತಿರುಗಿದ ಜಾಗದಲ್ಲಿ ಪ್ರೊಫೈಲರ್ ಎಂದು ಇನ್ನೊಂದು ಮಷಿನ್ ಇರುತ್ತದೆ ಅದನ್ನು ಸೆಟ್ ಮಾಡಿಕೊಳ್ಳಲಾಗುತ್ತದೆ ಇದು 10 ಮೀಟರ್ ಇಂದ 10 ಮೀಟರ್ ಗೆ ಭೂಮಿಯನ್ನು ಸ್ಕ್ಯಾನ್ ಮಾಡುತ್ತದೆ. 90 ಡಿಗ್ರಿ ತಿರುಗಿದ ಜಾಗದಲ್ಲಿ ಎರಡು ಕಡೆಯಿಂದ ಹತ್ತು ಮೀಟರ್ ಸ್ಕ್ಯಾನ್ ಮಾಡಿದಾಗ ನೀರಿನ ವೆರಿಯೇಷನ್ ಗೊತ್ತಾಗುತ್ತದೆ. ನಂತರ ಟ್ಯಾಬ್ ನಲ್ಲಿ 300 ಮೀಟರ್ ಅಥವಾ 500 ಮೀಟರ್ ಎಂದು ಸೆಲೆಕ್ಷನ್ ಮಾಡಿಕೊಳ್ಳಬೇಕು ನಂತರ ಟ್ಯಾಬ್ ಸ್ಕ್ಯಾನ್ ಮಾಡುತ್ತದೆ ಸ್ಕ್ಯಾನ್ ಆದ ನಂತರ ಒಂದು ಮೀಟರ್ ಆ ಕಡೆ ಒಂದು ಮೀಟರ್ ಈ ಕಡೆ ಸ್ಕ್ಯಾನ್ ಮಾಡಲಾಗುತ್ತದೆ ಹೀಗೆ ಹತ್ತು ಮೀಟರ್ ವರೆಗೂ ಸ್ಕ್ಯಾನ್ ಮಾಡಲಾಗುತ್ತದೆ ಒಂದೊಂದು ಮೀಟರ್ ಸ್ಕ್ಯಾನ್ ಮಾಡಿದಾಗ ನೀರಿನ ಪಾಯಿಂಟ್ ಇದ್ದರೆ ತಿಳಿಯುತ್ತದೆ.

ಫೈನಲ್ ಆಗಿ ಐಪಿ ಎಂದು ಚೆಕ್ ಮಾಡಲಾಗುತ್ತದೆ ಇದು ಗುರುತಿಸಿದ ಪಾಯಿಂಟ್ ನಲ್ಲಿ 1650 ಅಡಿ ಸ್ಕ್ಯಾನ್ ಮಾಡುತ್ತದೆ ನಂತರ ಇಷ್ಟೆ ಅಡಿಗೆ ನೀರು ಸಿಗುತ್ತದೆ ಎಂದು ಇದು ತಿಳಿಸುತ್ತದೆ. ರಮೇಶ್ ಅವರನ್ನು ಸಂಪರ್ಕ ಮಾಡಿದರೆ ಅವರು ಮೂರರಿಂದ ನಾಲ್ಕು ಜನ ಬಂದು ಪಾಯಿಂಟ್ ಗುರುತಿಸಿ ಕೊಡುತ್ತಾರೆ, ಎರಡು ತಾಸಿನಲ್ಲಿ ಇವರು ನೀರಿನ ಪಾಯಿಂಟ್ ಗುರುತಿಸಿ ಕೊಡುತ್ತಾರೆ ಇವರು ಕೊಟ್ಟಿರುವ ರಿಪೋರ್ಟ್ ಇಲ್ಲಿಯವರೆಗೂ ಫೇಲಾಗಿದ್ದಿಲ್ಲ. ಇವರು ಕರ್ನಾಟಕದ ಯಾವುದೇ ಭಾಗಕ್ಕಾದರೂ ಹೋಗುತ್ತಾರೆ. ಫೈನಲ್ ಆಗಿ ಅವರು ಗ್ರಾಫ್ ತ್ರಿಡಿ ರಿಪೋರ್ಟ್ ಕೊಡುತ್ತಾರೆ. ರಿಪೋರ್ಟ್ ಮೂಲಕ ಅವರು ನೀರು ಎಷ್ಟು ಅಡಿಗೆ ಸಿಗುತ್ತದೆ ಮಣ್ಣಿದೆಯೊ ಬಂಡೆ ಇದೆಯೊ ಎಲ್ಲವನ್ನು ತಿಳಿಸುತ್ತಾರೆ. ಅವರು ಇಷ್ಟು ಅಡಿಗೆ ಡ್ರಿಲ್ ಮಾಡಿಸಿ ಎಂದು ಹೇಳುತ್ತಾರೆ ನೀರು ಬಂದಿಲ್ಲವಾದರೆ ದುಡ್ಡು ವಾಪಸ್ ಕೊಡುತ್ತೇವೆ ಎಂದು ಅವರು ಹೇಳುತ್ತಾರೆ. ಅವರು ಡಿಸ್ಟೆನ್ಸ್ ಮೇಲೆ ಚಾರ್ಜ್ ಹಾಕುತ್ತಾರೆ, ಅವರನ್ನು 9880626035 ಈ ನಂಬರಿಗೆ ಕರೆ ಮಾಡಿ ಸಂಪರ್ಕಿಸಬಹುದು.

Leave A Reply

Your email address will not be published.

error: Content is protected !!
Footer code: