ರಾಜ್ಯ ಸರ್ಕಾರದ ರೈತರಿಗೆ ಸರ್ಕಾರದಿಂದ ಸಿಗುವ ಬೆಳೆ ಪರಿಹಾರ ಇತ್ಯಾದಿ ಸೌಲಭ್ಯಗಳು ಮುಂದೆಯೂ ಸಿಗಬೇಕೆಂದರೆ ಜುಲೈ 31ರ ಒಳಗೆ ರೈತರು ಒಂದು ಕೆಲಸ ಮಾಡಬೇಕು ಹಾಗಾದರೆ ರೈತರು ಮಾಡಬೇಕಾದ ಕೆಲಸಗಳೇನು ಒಂದು ವೇಳೆ ರೈತರು ಈ ಕೆಲಸ ಮಾಡದೆ ಇದ್ದರೆ ಏನಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಕರ್ನಾಟಕ ರಾಜ್ಯದ ರೈತರು ಇದೆ ಜುಲೈ 31ರ ಒಳಗೆ ಈ ಕೆಲಸವನ್ನು ಮಾಡುವುದು ಅನಿವಾರ್ಯವಾಗಿದೆ ಒಂದು ವೇಳೆ ರೈತರು ಈ ಕೆಲಸ ಮಾಡದೆ ಇದ್ದಲ್ಲಿ ಸರ್ಕಾರದ ಯಾವ ಸೌಲಭ್ಯಗಳು ರೈತರಿಗೆ ಸಿಗುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ಜಮೀನಿನ ಮಾಲೀಕರು ಅಂದರೆ ಜಮೀನಿನ ಪಹಣಿಯಲ್ಲಿ ಯಾರ ಹೆಸರು ಇರುತ್ತದೆಯೊ ಅಂತಹ ರೈತರಿಗೆ ಈ ಕೆಲಸವನ್ನು ಮಾಡಲು ಕಡ್ಡಾಯವಾಗಿ ತಿಳಿಸಲಾಗಿದೆ. ಕರ್ನಾಟಕ ರಾಜ್ಯದ ಜಮೀನಿನ ಮಾಲೀಕರು ಜುಲೈ 31ನೆ ತಾರೀಖಿನ ಒಳಗಡೆ ಈ ಕೆಲಸ ಮಾಡದೆ ಇದ್ದರೆ ಸರ್ಕಾರದಿಂದ ದೊರೆಯುವ ಬೆಳೆ ಪರಿಹಾರ, ಬರ ಪರಿಹಾರ, ಸಬ್ಸಿಡಿ ಕೃಷಿ ಉಪಕರಣಗಳು ಪ್ರಧಾನಮಂತ್ರಿ ಕೃಷಿ ಸಮ್ಮಾನ ಹಣ ಕೃಷಿ ಜಮೀನಿಗೆ ಸಬ್ಸಿಡಿ ಬೀಜ ಹಾಗೂ ಇತರೆ ಸೌಲಭ್ಯಗಳು ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್ ಸೇರಿದಂತೆ ಸರ್ಕಾರದ ರೈತರಿಗೆ ಸಿಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿತು.
ಜಮೀನಿನ ಪಹಣಿಯಲ್ಲಿ ಇರುವ ಹೆಸರಿನ ರೈತರು ಕಡ್ಡಾಯವಾಗಿ ಈ ಕೆಲಸವನ್ನು ಮಾಡಲೆಬೇಕು. ರಾಜ್ಯದಲ್ಲಿ ಕೆಲವು ಕಡೆ ಅಕ್ರಮ ಜಮೀನಿನ ಮಾರಾಟ ನಡೆಯುತ್ತಿದೆ ಹೀಗಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಆರ್ ಟಿಸಿಗಳನ್ನು ಆಧಾರ್ ಗೆ ಲಿಂಕ್ ಮಾಡುವಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಸೂಚಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ಬೈರೇಗೌಡ ಅವರು ರಾಜ್ಯದಲ್ಲಿ ಸುಮಾರು ನಾಲ್ಕು ಕೋಟಿ ಆರ್ ಟಿಸಿ ಮಾಲೀಕರಿದ್ದಾರೆ ಈ ಪೈಕಿ 1.92 ಕೋಟಿ ಆರ್ ಟಿಸಿದಾರರನ್ನು ಸಂಪರ್ಕಿಸಿ ಆ ಪೈಕಿ 1.20 ಕೋಟಿ ಆರ್‌ಟಿಸಿಗಳನ್ನು ಓಟಿಪಿ ಒನ್ ಟೈಮ್ ಪಾಸ್ವರ್ಡ್ ಮೂಲಕ ಈಕೆವೈಸಿ ಮಾಡಲಾಗುತ್ತದೆ. ಇದೆ ಜುಲೈ 31ರೊಳಗೆ ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇಕಡ 90ರಷ್ಟು ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದ್ದಾರೆ.
ಆರ್ ಟಿಸಿಗಳನ್ನು ಆಧಾರ್ ಗೆ ಲಿಂಕ್ ಮಾಡುವ ಮೂಲಕ ಯಾರದ್ದೋ ಜಮೀನನ್ನು ಇನ್ಯಾರೊ ಮಾರಾಟ ಮಾಡುವ ವಂಚನೆಗಳನ್ನು ತಡೆಯಬಹುದು ಹಾಗೂ ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ತಲುಪಿಸಲು ಹಾಗೂ ಮ್ಯೂಟೇಷನ್ ಇನಪುಟ್ ಸಬ್ಸಿಡಿ ನೀಡುವುದಕ್ಕೂ ಇದು ಸಹಕಾರಿಯಾಗಿದೆ ಹೀಗಾಗಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯ ರೈತರನ್ನು ಒಪ್ಪಿಸಿ ಆಧಾರ್ ಜೋಡಣೆ ಮಾಡಿಸಬೇಕು. ಸಾರ್ವಜನಿಕರಿಗೂ ಇದು ತಮ್ಮ ಜಮೀನಿನ ಮಾಲಿಕತ್ವಕ್ಕೆ ಭದ್ರತೆ ಅಗತ್ಯವೆಂದು ತಿಳಿದುಕೊಂಡು ಅಭಿಯಾನಕ್ಕೆ ರೈತರು ಸಹಕಾರ ನೀಡಬೇಕು ಈ ಮೂಲಕ ಜಮೀನಿನ ನಕಲಿ ವ್ಯವಹಾರವನ್ನು ಜಮೀನಿನ ಮಾಲೀಕತ್ವಕ್ಕೆ ನೆಮ್ಮದಿಯ ಗ್ಯಾರೆಂಟಿ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಎಲ್ಲಾ ರೈತರಿಗೆ ತಿಳಿಸಿ.