ಶಿವನಿಗೆ 24 ಅಭಿಷೇಕ್ ಮಾಡುವುದರಿಂದ ಏನೆಲ್ಲಾ ಆಗುತ್ತೆ

0

ಶಿವ ಮೃತ್ಯುಂಜಯ ಸದಾ ಬೇಡಿದ ವರವನ್ನು ಕೊಡುವ, ಎಲ್ಲರ ಇಷ್ಟ ದೈವ. ಶಿವ ಲಿಂಗಕ್ಕೆ ಹಲವಾರು ರೀತಿಯ ಅಭಿಷೇಕ ಮಾಡುವರು. ಒಂದೊಂದು ಕಡೆ ಒಂದೊಂದು ರೀತಿಯ ವಿಶೇಷತೆ ಆಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿವ ಲಿಂಗಕ್ಕೆ ಇರುತ್ತದೆ.

ಶಿವನಿಗೆ ಅಭಿಷೇಕ ಎಂದರೆ ಹೆಚ್ಚು ಅಚ್ಚು ಮೆಚ್ಚು. ಗಂಗಾ ಜಲದಿಂದ ಅಭಿಷೇಕ ಮಾಡಿದರೆ ಅವನು ಭಾವಪರವಶನಾಗುವನು. ” ವಿಷ್ಣೋಃ ಅಲಂಕಾರ ಪ್ರಿಯಃ, ಶಿವ ಅಭಿಷೇಕ ಪ್ರಿಯಃ. ” ಎಂದು ಶಾಸ್ತ್ರಗಳು ಹೇಳುತ್ತವೆ.

ಶಿವನಿಗೆ ಅಭಿಷೇಕ ಮಾಡಿದರೆ ಅದಕ್ಕೆ ಶಿವ ಅತಿ ವೇಗವಾಗಿ ಪ್ರಸನ್ನರಾಗಬಹುದು. ಶಿವನಿಗೆ ಅಭಿಷೇಕವನ್ನು ಭಕ್ತಿಯಿಂದ ಸಮರ್ಪಿಸಬೇಕು. ಭೂಮಿಯ ಪ್ರತಿ ಅಣು ರೇಣುವಿನಲ್ಲಿ ಕೂಡ ಶಿವ ವಾಸ ಮಾಡುವನು. ಮಹಾ ಮಸ್ತಕಾಭಿಷೇಕ ಮಾಡುವಾಗ ಶಿವನಿಗೆ ಕೊಟ್ಟದ್ದನ್ನು ಭಕ್ತಿಯಿಂದ ಅರ್ಪಣೆ ಮಾಡುತ್ತಿದ್ದೇವೆ ಎನ್ನುವ ಭಾವನೆ ಮಾತ್ರ ಇರಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಶಾಸ್ತ್ರದ ಪ್ರಕಾರ ಶಿವನಿಗೆ ಹಲವು ವಸ್ತುಗಳಿಂದ ಅಭಿಷೇಕ ಮಾಡಬಹುದು. ಈ ದ್ರವ್ಯಗಳಿಂದ ಅಭಿಷೇಕ  ಮಾಡುವಾಗ ಭಕ್ತಿ ಶ್ರದ್ಧೆ ಮುಖ್ಯವಾಗಿ ಇರಬೇಕು. ಆಡಂಬರದಿಂದ ಮಾಡುವ ಪೂಜೆ ಮತ್ತು ಅಭಿಷೇಕಕ್ಕಿಂದ. ಭಕ್ತಿಯಿಂದ ಆರಾಧನೆ ಮಾಡುವುದು ಹೆಚ್ಚು ಶ್ರೇಷ್ಠ.

ಶಿವನಿಗೆ ಯಾವ ಅಭಿಷೇಕ ಸಮರ್ಪಣೆ ಮಾಡಿದರೆ ಏನು ಫಲ ಎಂದು ನೋಡೋಣ.
1 ಗರಿಕೆ ನೀರಿನಿಂದ ಶಿವನಿಗೆ ಅಭಿಷೇಕ ಮಾಡುವುದರಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ. ಗರಿಕೆ ನೀರಿನಿಂದ ಶಿವನಿಗೆ ಅಭಿಷೇಕ ಮಾಡಿದರೆ ಕಳೆದು ಹೋದ ಹಣ ಮರಳಿ ಸಿಗುತ್ತದೆ.

2  ಎಳ್ಳಿನ ಎಣ್ಣೆಯಿಂದ ಅಭಿಷೇಕ ಮಾಡುವುದರಿಂದ ಅಪಮೃತ್ಯು ನಿವಾರಣೆ ಆಗುತ್ತದೆ.

3 ಹಸುವಿನ ಹಾಲಿನಿಂದ ಮಾಡಿದ ಅಭಿಷೇಕ ಸಕಲ ಸೌಕರ್ಯಗಳನ್ನು ನೀಡುತ್ತದೆ.

4 ಮೊಸರಿನಿಂದ ಮಾಡಿದ ಅಭಿಷೇಕವು ಶಕ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತಂದು ಕೊಡುತ್ತದೆ.

5 ಹಸುವಿನ ತುಪ್ಪದಿಂದ ಅಭಿಷೇಕ ಮಾಡಿಸಿದರೆ ಸಂಪತ್ತು ಪ್ರಾಪ್ತಿ ಆಗುತ್ತದೆ.

6 ಕಬ್ಬಿನ ರಸದಿಂದ ಅಭಿಷೇಕ ಮಾಡಿದರೆ ಸಂಪತ್ತು ವೃದ್ಧಿ ಆಗುತ್ತದೆ.

7 ಮೃದುವಾದ ಸಕ್ಕರೆಯಿಂದ ಅಭಿಷೇಕ ಮಾಡಿದರೆ ದುಃಖವೂ ನಾಶವಾಗುತ್ತದೆ.

8 ಬಿಲ್ವ ದಳದ ನೀರಿನಿಂದ ಅಭಿಷೇಕ ಮಾಡಿದರೆ ಅದು ಬದುಕಿಗೆ ಸಂತಸ ತರುತ್ತದೆ.

9 ಜೇನು ತುಪ್ಪದಿಂದ ಅಭಿಷೇಕ ಮಾಡಿದರೆ ಚೈತನ್ಯ ಹೆಚ್ಚಾಗುತ್ತದೆ.

10 ಪುಷ್ಪೋದಕದಿಂದ ಅಭಿಷೇಕ ಮಾಡಿದರೆ ಭೂಮಿ ಸಿಗುತ್ತದೆ.

11 ಎಳನೀರಿನಿಂದ ಅಭಿಷೇಕ ಮಾಡಿದರೆ ಸಕಲ ಸಂಪತ್ತು ಸಿಗುತ್ತದೆ.

12 ರುದ್ರಾಕ್ಷ ಜಲಾಭಿಷೇಕವು ಸಕಲ ಸಂಪತ್ತನ್ನು ನೀಡುತ್ತದೆ.

13 ಭಸ್ಮದಿಂದ ಅಭಿಷೇಕ ಮಾಡಿದರೆ ಪಾಪಗಳು ನಾಶವಾಗುತ್ತದೆ.

14 ಗಂದೋಧಕದಿಂದ ಅಭಿಷೇಕ ಮಾಡಿದರೆ ಸತ್ಪುತ್ರ ಪ್ರಾಪ್ತಿ ಆಗುತ್ತದೆ.

15 ಚಿನ್ನದ ನೀರಿನಿಂದ ಅಭಿಷೇಕ ಮಾಡಿದರೆ ಕಡು ಬಡತನ ದೂರವಾಗುತ್ತದೆ.

16 ನೀರಿನಿಂದ ಅಭಿಷೇಕ ಮಾಡಿದರೆ ಕಳೆದುಕೊಂಡಿದ್ದು ಮರಳಿ ಸಿಗುತ್ತದೆ.

17 ಅನ್ನದಿಂದ ಅಭಿಷೇಕ ಮಾಡಿದರೆ ಮೋಕ್ಷ ಹಾಗು ದೀರ್ಘಾ ಆಯುಷ್ಯವನ್ನು ಪಡೆಯುವನು.

ಶಿವ ಪೂಜೆಯಲ್ಲಿ ಲಿಂಗ ಅರ್ಚನೆಗೆ ವೈಶಿಷ್ಟ್ಯವಾದ ಮಹತ್ವ ಇದೆ. ಮೊಸರು ಬೆರೆಸಿದ ಅನ್ನವನ್ನು ಲಿಂಗಕ್ಕೆ ಹಚ್ಚಿ ಪೂಜೆ ಮಾಡಲಾಗುತ್ತದೆ. ನಂತರ ಅದನ್ನು ಪ್ರಸಾದವಾಗಿ ಕೊಡಲಾಗುತ್ತದೆ. ಅನ್ನದಿಂದ ಮಾಡಿದ ಲಿಂಗ ಅರ್ಚನೆ ನೋಡಲು ತುಂಬ ಸೊಗಸಾಗಿ ಇರುತ್ತದೆ.

18 ದ್ರಾಕ್ಷಿ ರಸದಿಂದ ಅಭಿಷೇಕ ಮಾಡುವುದರಿಂದ ಎಲ್ಲದರಲ್ಲೂ ಗೆಲುವು ದೊರೆಯುತ್ತದೆ.

19 ಖರ್ಜೂರದ ರಸದಿಂದ ಅಭಿಷೇಕ ಮಾಡಿದರೆ ಶತ್ರು ಹಾನಿ ದೂರ ಆಗುತ್ತದೆ.

20 ಏಪ್ರಿಕಾಟ್ ರಸದಿಂದ ಅಭಿಷೇಕ ಮಾಡಿದರೆ ವೈರಾಗ್ಯ ಸಿದ್ದಿ ಆಗುತ್ತದೆ.

21 ಕಸ್ತೂರಿ ಮಿಶ್ರಿತ ನೀರಿನಿಂದ ಅಭಿಷೇಕ ಮಾಡಿದರೆ ಕೀರ್ತಿ ಸಿಗುತ್ತದೆ.

22 ನವರತ್ನೋದಕದೊಂದಿಗೆ ಮಾಡಿದ ಅಭಿಷೇಕದಿಂದ ಧಾನ್ಯ,ಮನೆ ಹಾಗು ದನಗಳ ಬೆಳವಣಿಗೆಯನ್ನು ನೋಡಬಹುದು.

23 ಮಾವಿನ ರಸದಿಂದ ಅಭಿಷೇಕ ಮಾಡಿದರೆ ಧೀರ್ಘ ಕಾಲದ ಖಾಯಿಲೆಗಳು ಗುಣ ಆಗುತ್ತವೆ.

  1. ಅರಿಶಿಣ ನೀರಿನಿಂದ ಅಭಿಷೇಕ ಮಾಡಿದರೆ ಒಳ್ಳೆಯ ವಿಷಯ ನಡೆಯುತ್ತದೆ.

ಈ ವಸ್ತುಗಳಿಂದ ಅಭಿಷೇಕ ಮಾಡಿದರೆ ಹೆಚ್ಚು ಒಳ್ಳೆಯದು. ಆದರೆ, ಈ ವಸ್ತುಗಳು ಸಿಗದವರು, ಈ ವಸ್ತುಗಳಿಂದ ಅಭಿಷೇಕ ಮಾಡಲು ಸಾಧ್ಯ ಇಲ್ಲದೆ ಇರುವವರು.

ಪಂಚಾಮೃತದಿಂದ ಅಭಿಷೇಕ ಮಾಡಬಹುದು, ಹಸುವಿನ ಹಾಲಿನಿಂದ ಮಾಡಬಹುದು, ಜೇನು ತುಪ್ಪದಿಂದ ಮಾಡಬಹುದು, ಹಸುವಿನ ತುಪ್ಪದಿಂದ, ತೆಂಗಿನ ನೀರು, ಮೊಸರು ಇತ್ಯಾದಿಗಳಿಂದ ಶಿವನ ಪೂಜೆ ಮಾಡುವುದು ಮಂಗಳಕರ. ಇದು ಕೂಡ ಸಾಧ್ಯವಾಗದೆ ಇದ್ದರೆ ಗಂಗಾ ಜಲದಿಂದ ಅಭಿಷೇಕ ಮಾಡಬಹುದು. ಅದು ಕೂಡ ದೇವರಿಗೆ ಪ್ರಿಯವಾದುದ್ದೆ. ದೇವರನ್ನು ನಂಬಿ ಒಳ್ಳೆ ಮನಸಿನಿಂದ ಪೂಜೆ ಮಾಡಿದರೆ ಸಾಕು ಅವರ ಕೋರಿಕೆಗಳು ಈಡೇರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: