ಮಹಿಳೆಯರ ಗುಣಲಕ್ಷಣಗಳು ಹೀಗಿರುತ್ತೆ

0

ಗಂಡ ಹೆಂಡತಿಯ ಸಂಬಂಧ, ಒಂದು ಸುಂದರ ಅನುಬಂಧ, ಇಬ್ಬರು ಸಂಸಾರವನ್ನು ಸರಿಸಮನಾಗಿ ನಡೆಸಿಕೊಂಡು ಬಾಳಿದರೆ ಅದೇ ಸ್ವರ್ಗ. ಅದೇ, ಎತ್ತು  ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎನ್ನುವಂತೆ ಆದರೆ ಮನಸ್ಸುಗಳು ಒಡೆದು ದೂರ ಆಗುತ್ತವೆ.

ಹೆಣ್ಣು ಸಹನೆಯ ಪ್ರತಿ ರೂಪ ಅವಳು ಮಾಡುವ ಕೆಲವು ತಪ್ಪುಗಳು ಅವಳ ಜೀವನವನ್ನೇ ನರಕ ಮಾಡುವ ಸಾಧ್ಯತೆ ಇದೆ. ಗಂಡಸರಿಗೆ ನೂರೆಂಟು ಕೆಲಸ, ಜವಾಬ್ದಾರಿ, ತಾಳ್ಮೆ ಕಡಿಮೆ ಹೆಣ್ಣು ಮಕ್ಕಳು ಮನೆ ಮತ್ತು ಕೆಲಸವನ್ನು ಸರಿದೂಗಿಸಿಕೊಂಡು ಹೋಗಬೇಕು ಅದಕ್ಕೆ ಅವಳನ್ನು ಭೂಮಿ ತಾಯಿಗೆ ಹೋಲಿಕೆ ಮಾಡುವುದು. ಮೂರ್ಖ ಮಹಿಳೆ ಅವಳ ಗಂಡನನ್ನು ಗುಲಾಮನಾಗಿ ಮಾಡಿಕೊಂಡು ಅವಳು ಗುಲಾಮನ ಹೆಂಡತಿಯಾಗಿ ಇರುತ್ತಾಳೆ. ಅದೇ, ಬುದ್ದಿವಂತ ಮಹಿಳೆ ಗಂಡನನ್ನು ಅರಸನಾಗಿ ನೋಡಿಕೊಂಡು ಅವಳು ರಾಣಿಯಂತೆ ಬಾಳುವಳು.

ಮೂರ್ಖ ಮಹಿಳೆ ಅವಳ ಗಂಡನನ್ನು ಬುಗುರಿ ತರ ಕುಣಿಸುವಳು. ಬೇರೆ ಮನೆ ಮಾಡೋಣ ಎಂದು ರಚ್ಚೆ ಹಿಡಿಯುವಳು. ಅವಳಿಗೆ, ಗಂಡನ ಮನೆಯವರ ಜೊತೆ ಕೂಡಿ ಬಾಳಲು ಇಷ್ಟ ಇರುವುದಿಲ್ಲ. ಅದೇ, ಬುದ್ದಿವಂತ ಮಹಿಳೆ ಸಂಸಾರದಲ್ಲಿ ಯಾವುದೇ ರೀತಿಯ ಕಷ್ಟ ಎದುರಾದರು. ಅದಕ್ಕೆ, ಹೊಂದಿಕೊಂಡು ಪರಿಸ್ಥಿತಿಯನ್ನು ದಿನ ಅರ್ಥಮಾಡಿಕೊಂಡು ಎಲ್ಲರ ಜೊತೆಗೆ ಕೂಡಿ ಬಾಳುವ ಆಸಕ್ತಿ ಹೊಂದಿರುವಳು.

ಮೂರ್ಖ ಮಹಿಳೆಯರು ಅವಳ ಮಕ್ಕಳು ಏನಾದರೂ ತಪ್ಪು ಮಾಡಿದರೆ ಎಲ್ಲರ ಮುಂದೆ ಬಾಯಿಗೆ ಬಂದಂತೆ ಬೈದು ಹೊಡೆದು ಮಕ್ಕಳಿಗೆ ಪಾಠ ಕಲಿಸುವಳು. ಬುದ್ಧಿವಂತ ಮಹಿಳೆ ಮಕ್ಕಳು ಏನೇ ತಪ್ಪು ಮಾಡಿದರು. ಅದನ್ನು, ಸಮಾಧಾನವಾಗಿ ತಾಳ್ಮೆಯಿಂದ ತಿಳಿಸಿ ಬುದ್ಧಿ ಮಾತು ಹೇಳುವಳು.

ಭಾವನೆಗಳೇ ಇಲ್ಲದ ಹೆಣ್ಣಿನ ಮನಸ್ಸು ಹೂವೇ ಇಲ್ಲದೆ ಬರಿದಾಗಿ ಹೋಗಿರುವ ಅತೀ ದೊಡ್ಡ ತೋಟದಂತೆ ಕೇವಲ, ನಾಮಕಾವಸ್ತೆಗೆ ಮಾತ್ರ ಅದು, ದೊಡ್ಡದಾದ ತೋಟ. ಆದರೆ, ಯಾವುದಕ್ಕೂ ಅದು ಪ್ರಯೋಜನಕ್ಕೆ ಬರುವುದಿಲ್ಲ.

ಮೂರ್ಖ ಮಹಿಳೆ ಕುಟುಂಬ ಮತ್ತು ಗಂಡನ ಸ್ನೇಹಿತರ ಜೊತೆ ಅಸಭ್ಯವಾಗಿ ವರ್ತಿಸುತ್ತಾಳೆ. ಪತಿ ಮನೆಗೆ ದಣಿದು ಬಂದಾಗ ನಗುಮುಖದ ಬದಲು ಮುಖ ಸಿಂಡರಿಸಿ ಸ್ವಾಗತ ಮಾಡುತ್ತಾಳೆ. ಸಭ್ಯತೆ ಹೊಂದಿರುವ ಮಹಿಳೆ ಯಾವಾಗಲೂ, ಪ್ರೀತಿಯಿಂದ ಮಾತನಾಡುತ್ತಾಳೆ. ಬೇರೆಯವರ ಮುಂದೆ ಅಥವಾ ಮನೆಯಲ್ಲಿ ಗಂಡನಿಗೆ ಗೌರವ ನೀಡುತ್ತಾಳೆ.

ಬುದ್ದಿವಂತ ಹೆಣ್ಣಿಗೆ ಸಹನೆ ಇರುತ್ತದೆ. ಎಲ್ಲರ ಜೊತೆ ಹೊಂದಿಕೊಂಡು ಹೋಗುವ ಗುಣ ಇರುತ್ತದೆ. ಆದರೆ, ಸ್ವಾರ್ಥ ಮನೋಭಾವನೆ ಇರುವ ಹೆಣ್ಣಿಗೆ, ಊಟ – ತಿಂಡಿ, ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು, ಪ್ರತಿ ಒಂದರಲ್ಲಿ ನನ್ನದು ಎಂಬ ಸ್ವಾರ್ಥ ಹಾಗು ಅಹಂ ಭಾವ ತುಂಬಿರುತ್ತದೆ. ಅವರು ಯಾವತ್ತಿಗೂ ಖುಷಿಯಾಗಿ ಇರಲು ಸಾಧ್ಯ ಇಲ್ಲ.

ಹೆಂಡತಿ ಅವನ ಪತಿಯನ್ನು ರಾಜನಂತೆ ನೋಡಿಕೊಳ್ಳಲು ಬಯಸಿದರೆ, ಅವಳ ಗಂಡ ಸಹ ಅವಳನ್ನು ರಾಣಿಯಂತೆ ನೋಡಿಕೊಳ್ಳಬೇಕು. ತಾಳಿಯನ್ನು ಬಾರ ಎಂದು ಭಾವಿಸುವ ಯಾವುದೇ ಹೆಣ್ಣಿಗೆ ಸಂಸಾರ ನಡೆಸಲು ಅರ್ಹತೆ ಇರುವುದಿಲ್ಲ.

ಹೆಣ್ಣು ಅವನ ಮನೆಯ ಆಳು ಎಂದು ಭಾವಿಸುವ ಯಾವುದೇ ಗಂಡನಿಗೆ ಸಂಸಾರಿಯಾಗಿ ಬಾಳಲು ಅರ್ಹತೆ ಇರುವುದಿಲ್ಲ. ಗಂಡ ಮತ್ತು ಹೆಂಡತಿ ಇಬ್ಬರು ಹೊಂದಿಕೊಂಡು ಬಾಳಬೇಕು. ಯಾರು ಮೇಲು ಅಲ್ಲ, ಯಾರು ಕೀಳು ಅಲ್ಲ. ತಂದೆ ತಾಯಿ ಬಿಟ್ಟು ಬರುವ ಹೆಣ್ಣಿಗೆ ಗಂಡನ ಹೆತ್ತವರೇ ತಂದೆ ತಾಯಿಯಾಗಿ ಇರಬೇಕು. ಅವಳನ್ನು ಸೊಸೆಯಾಗಿ ಇಲ್ಲ ಮಗಳಾಗಿ ಕಂಡರೆ ಅವಳಿಗೆ ಅವಳ ಹೆತ್ತವರ ಎಂದಿಗೂ ನೆನಪೇ ಆಗುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: