ಮೈಸೂರು ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಭಕ್ತಿಯಲ್ಲಿ ಮುಳುಗಿದ ನಟ ಸಂಜಯ್ ದತ್! ಇಲ್ಲಿದೆ ನೋಡಿ ಫೋಟೋಸ್!!
ಕೆಜಿಎಫ್ ಸಿನಿಮಾದ ಕಡಕ ವಿಲ್ಲನ್ ಆಗಿ ಅದೀರನ ಪಾತ್ರದ ಮೂಲಕ ಕನ್ನಡಿಗರ ಮನಸನ್ನು ಗೆಲ್ಲುವಲ್ಲಿ ಯಶಸ್ವಿಯಾದಂತಹ ನಟ ಸಂಜಯ್ ದತ್ ಇದೀಗ ಮತ್ತೆ ಧ್ರುವ ಸರ್ಜಾ (Dhruva Sarja) ಅವರ ಕೇಡಿ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದು, ಈ ಸಿನಿಮಾದ ನಿರ್ದೇಶಕರಾದಂತಹ ಜೋಗಿ ಪ್ರೇಮ್ ಅವರೊಂದಿಗೆ ಚಾಮುಂಡೇಶ್ವರಿ ದೇವಿಯ(Chamundeshwari) ದರ್ಶನ ಪಡೆಯಲು ಮೈಸೂರಿಗೆ ತೆರಳಿದ್ದಾರೆ.
ಹೌದು ಗೆಳೆಯರೇ ಬಾಲಿವುಡ್ನ ಪೀಕ್ ನಲ್ಲಿ ಇದ್ದಂತಹ ನಟ ಸಂಜಯ್ ದತ್(Sanjay Dutt), ಪ್ರಶಾಂತ ರಾಕಿಂಗ್ ಸ್ಟಾರ್ ಯಶ್ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಕೆಜಿಎಫ್(KGF) ಸಿನಿಮಾದ ಮೂಲಕ ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ದಿನೇ ದಿನೇ ತಮ್ಮ ಬೇಡಿಕೆಯನ್ನು ಏರಿಸಿಕೊಳ್ಳುತ್ತಲೇ ಇದ್ದಾರೆ. ಹೌದು ಗೆಳೆಯರೇ ಕೆಜಿಎಫ್ ಚಿತ್ರದಲ್ಲಿ ಅದೀರನಾಗಿ ಮಿಂಚಿದ ಸಂಜೆ ಇದೀಗ ನಿರ್ದೇಶಕ ಪ್ರೇಮ್ ಅವರ ಆಕ್ಷನ್ ಕಟ್ನಲ್ಲಿ ಮೂಡಿ ಬರುತ್ತಿರುವ ಕೆಡಿ ಸಿನಿಮಾದಲ್ಲಿಯೂ ಖಳನಟನಾಗಿ ಅಭಿನಯಿಸುತ್ತಿರುವ ಮಾಹಿತಿ ತಿಳಿದು ಬಂದಿದೆ.
ಈ ಜೋಡಿಗಳೀಗ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ತಮ್ಮ ಸಿನಿಮಾದ ಕುರಿತು ದೇವಿಯಲ್ಲಿ ಕೋರಿಕೆ ಇಟ್ಟಿದ್ದಾರೆ. ಈ ಕುರಿತು ಮಾಧ್ಯಮದ ಮುಂದೆ ಮಾತನಾಡಿದ ಸಂಜಯ್ ದತ್(Sanjay Dutt) ಮೈಸೂರು(Mysore) ನನಗೇನು ಹೊಸದಲ್ಲ, ಆದರೆ ತಾಯಿಯ ದರ್ಶನ ಪಡೆಯಲು ಅಡೆತಡೆಗಳು ಎದುರಾಗುತ್ತಲೇ ಇದ್ದವು. ಆದರೆ ಈ ಬಾರಿ ಸ್ವತಃ ದೇವಿಯೇ ನಮ್ಮನ್ನು ಕರೆಸಿಕೊಂಡಳು ಎಂದರು.

ಯಾವುದೇ ಪ್ಲಾನಿಂಗ್ ಇಲ್ಲದೆ ದೇವರ ದರ್ಶನ ಮಾಡಲು ಬಂದಿದ್ದು ಬಹಳ ಖುಷಿಯಾಗ್ತಿದೆ. ಇನ್ನು ಮತ್ತೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿರುವುದು ಅದರಲ್ಲೂ ಡೈರೆಕ್ಟ್ ಮತ್ತು ಧ್ರುವ ಸರ್ಜಾ ಅವರೊಡನೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ ಎಂದಿದ್ದಾರೆ. ಇನ್ನು ಮಾತನಾಡುವಾಗ ಬಾಲಿವುಡ್ ನಟ ಸಂಜಯ್ ದತ್(Sanjay Datt) ತಕ್ಕಮಟ್ಟದ ಕನ್ನಡ ಬಳಸಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ಫಿದಾ ಆಗಿ ಹೋದರು.