WhatsApp Group Join Now
Telegram Group Join Now

ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಸಿನಿಮಾ ಹಾಗೂ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ತುಂಬು ಹೃದಯದ ಪ್ರೀತಿಯನ್ನು ಪ್ರಾಣಿ, ಪಕ್ಷಿ ಪರಿಸರ ಹಾಗೂ ವನ್ಯಜೀವಿಗಳ ಮೇಲು ತೋರುತ್ತಾರೆ. ಹೀಗಾಗಿ ತಮ್ಮ ಫಾರ್ಮ್ ಹೌಸ್ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಾ ಬಿಡುವು ಸಿಕ್ಕಾಗಲೆಲ್ಲ ಅವುಗಳ ಹಾರೈಕೆಯಲ್ಲಿ ಡಿ ಬಾಸ್ ತೊಡಗಿಕೊಂಡಿರುತ್ತಾರೆ.

ಇನ್ನು ಶೂಟಿಂಗ್ ಸಮಯಗಳ ನಡುವೆ ಬ್ರೇಕ್ ತಗೊಂಡು ಸ್ನೇಹಿತರೊಂದಿಗೆ ಸಫಾರಿಗೆ ಹೋಗುವಂತಹ ಡಿ ಬಾಸ್(D Boss) ಸದ್ಯ ತಮ್ಮ ಪುತ್ರ ವಿನೇಶ್(Vineesh) ಅವರನ್ನು ಜೊತೆ ಮಾಡಿಕೊಂಡು ವಿರಾಜ್ ಪೇಟೆ ಕಾಡನ್ನು ಸುತ್ತಿದ್ದಾರೆ. ಮಗನೊಂದಿಗೆ ಅರಣ್ಯಕ್ಕೆ ಜಾಲಿ ರೈಡ್ ಹೋಗಿ ಪ್ರಾಣಿ ಹಾಗೂ ಪರಿಸರದ ಕುರಿತು ಮಗನಿಗೆ ಅರಿವು ಮೂಡಿಸುತ್ತಿರುವ ದರ್ಶನ್ ಅವರ ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ರೀತಿ ಸಾಹಸಯಾತ್ರೆಗೆ ಹೋಗುವುದು ಮೊದಲೇನಲ್ಲ ಆದರೆ ಈ ಬಾರಿ ತಮ್ಮ ಪುತ್ರನನ್ನು ಆಫ್ ರೋಡ್ ಟ್ರಿಪ್(Off Road Trip) ಗೆ ಕರೆದುಕೊಂಡು ಹೋಗಿ ದಟ್ಟ ಕಾಡಿನ ಮಧ್ಯೆ ಟೆಂಟ್ ಹಾಕಿಕೊಂಡು ಅಚ್ಚ ಹಸಿರಿನಿಂದ ಕೂಡಿರುವ ಪರಿಸರದ ಮಧ್ಯೆ ಸಮಯ ಕಳೆಯುವುದರ ಜೊತೆಗೆ ತಮ್ಮ ಪುತ್ರ ವಿನೇಶ್ ಅವರಿಗೆ ಅಲ್ಲಿನ ಪ್ರಾಣಿ, ಪಕ್ಷಿ ಹಾಗೂ ಗಿಡ ಮರಗಳ ಕುರಿತು ಕೆಲ ಮಾಹಿತಿಯನ್ನು ತುಂಬುವ ಪ್ರಯತ್ನ, ಕಾಟೇರ ಚಿತ್ರದ ಬಿಸಿ ಷೆಡ್ಯೂಲ್ ನಡುವೆಯೂ

ದರ್ಶನ್ ತಮ್ಮ ಹಾಗೂ ಸ್ನೇಹಿತರ ಜೊತೆಗೆ ಜೀಪ್ ನಲ್ಲಿ ಟ್ರಿಪ್ ಗೆ ಹೋಗಿ ನೇಚರ್ ಫೋಟೋಗ್ರಾಫಿ(Nature Photography) ಮಾಡುವುದರ ಜೊತೆಗೆ ಸಾಹಸಮಯ ಕೆಲಸಗಳನ್ನು ಮಾಡಿದ್ದಾರೆ. ಫೋಟೋದಲ್ಲಿ ದರ್ಶನವರು ಕೆಂಪು ಬಣ್ಣದ ಟೀ ಶರ್ಟ್ ಧರಿಸಿ ಬಹಳ ಫಿಟ್ ಅಂಡ್ ಫೈನ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ದರ್ಶನ್ ಅವರ ಲುಕ್ಕುಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಅದಲ್ಲದೆ ಒಂದೇ ಫ್ರೇಮ್ನಲ್ಲಿ ಡಿ ಬಾಸ್ ಹಾಗೂ ಮರಿ ಡಿ ಬಾಸ್ರನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಥೈಲ್ಯಾಂಡ್ನಲ್ಲಿ ಮೋಜು ಮಸ್ತಿ ಮಾಡುತ್ತಿರುವ ಉಪ್ಪಿ ಫ್ಯಾಮಿಲಿ! ವೈರಲ್ ಫೋಟೋಸ್ ಇಲ್ಲಿದೆ ನೋಡಿ!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: