ರಾಮ ಮಂದಿರ ನಿರ್ಮಾಣಕ್ಕೆ ಕೋಟಿ ಕೋಟಿ ಹಣ ಕೊಟ್ಟ 76 ವರ್ಷದ ಅಜ್ಜ, ಇವರ ಹಿನ್ನಲೆ ಕೇಳಿದ್ರೆ ಇರೋ ಜಾಗದಲ್ಲೇ ಬೆವರುತ್ತೀರಾ..

0

ಜನವರಿ 22 ನೇ ತಾರೀಖು ಅಯೋಧ್ಯೆಯಲ್ಲಿ ಬಾಲ ರಾಮಮಂದಿರ ಉದ್ಘಾಟನೆ ಹಾಗೂ ಬಲರಾಮನ ಪ್ರತಿಷ್ಠಾಪನೆ ಆಯಿತು. ರಾಮಮಂದಿರ ನಿರ್ಮಾಣಕ್ಕಾಗಿ ಸಿನಿಮಾ ತಾರೆಯರು, ಉದ್ಯಮಿಗಳು, ಕ್ರಿಕೆಟಿಗರು ಹೀಗೆ ಜನಸಾಮಾನ್ಯರು ದೇಣಿಗೆ ನೀಡಿದರು. ಸಾವಿರಾರು ಕೋಟಿ ರೂಪಾಯಿ ಹಣ ರಾಮಮಂದಿರ ನಿರ್ಮಾಣಕ್ಕಾಗಿ ಹರಿದುಬಂದಿದೆ. ಹೀಗೆ ದೇಣಿಗೆ ಕೊಟ್ಟವರಲ್ಲಿ ಹೆಚ್ಚು ದೇಣಿಗೆ ಕೊಟ್ಟ ಇಬ್ಬರು ವ್ಯಕ್ತಿಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಿಸರ್ವ್ ಮುಖ್ಯಸ್ಥರು ಹೇಳಿರುವ ಪ್ರಕಾರ ಸದ್ಯಕ್ಕೆ ಸಾವಿರದ ನೂರು ಕೋಟಿಗೂ ಅಧಿಕ ಹಣ ಖರ್ಚು ಮಾಡಿ ರಾಮಮಂದಿರ ನಿರ್ಮಾಣ ಮಾಡಲಾಗಿದೆ, ಇನ್ನೂ ರಾಮಮಂದಿರದ ಸಾಕಷ್ಟು ಕೆಲಸಗಳು ಇವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ ಇನ್ನೂ ಕೆಲವೆ ದಿನಗಳಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟ್ಟವರಲ್ಲಿ ಅತಿ ಹೆಚ್ಚು ದೇಣಿಗೆ ಕೊಟ್ಟವರು ಮುರಾರಿ ಬಾಬು ಇವರನ್ನು ಮುರಾರಿ ತಾತ ಹಾಗೂ ರಾಮಾಯಣ ತಾತ ಎಂದೆ ಕರೆಯುತ್ತಾರೆ. ಮುರಾರಿ ಬಾಬು ಅವರು ಗುಜರಾತ ರಾಜ್ಯದ ಆಧ್ಯಾತ್ಮಿಕ ನಾಯಕರು ಹಾಗೂ ರಾಮಕಥಾ ನಿರೂಪಕರು, ಇಂದಿನವರೆಗೂ ಇವರು ದುಡ್ಡು ನೋಡಿಲ್ಲ ಹುಟ್ಟಿದಾಗಿನಿಂದ ರಾಮನ ಹೆಸರು ಹೇಳಿಕೊಂಡು ಜೀವನ ಮಾಡುತ್ತಿದ್ದಾರೆ.

ಕೋಟ್ಯಾಂತರ ಅಭಿಮಾನಿಗಳು ಮುರಾರಿ ತಾತ ಅವರಿಗಿದ್ದಾರೆ, ಸುಮಾರು 6ದಶಕಗಳಿಂದ ರಾಮಾಯಣ ಕಥೆಯನ್ನು ಪ್ರಪಂಚದಾದ್ಯಂತ ಹರಡುತ್ತಾ ಇದ್ದಾರೆ. ಇವರು ಹೇಳುವ ರಾಮಾಯಣ ಕಥೆಯನ್ನು ಹೇಳಲು ಜನರು ತಂಡವಾಗಿ ಬರುತ್ತಾರೆ ಮಂತ್ರಮುಗ್ಧರಾಗಿ ಕೇಳುತ್ತಾರೆ. ಇವರು 6ದಶಕಗಳಿಂದ ಬಿಳಿ ಶರ್ಟ್ ಬಿಳಿ ಪಂಚೆ ಹಾಗೂ ಹೆಗಲಿಗೆ ಒಂದು ಕಪ್ಪು ಶಾಲು ಇಷ್ಟನ್ನೆ ಧರಿಸುತ್ತಿದ್ದಾರೆ.

ಇವರು ಒಂದು ರೂಪಾಯಿ ನಾಣ್ಯವನ್ನು ಸಹ ಮುಟ್ಟಿಲ್ಲ. ಸಾಕಷ್ಟು ಸಂಖ್ಯೆಯ ವಿದೇಶಿಗರು ಮುರಾರಿ ತಾತನ ರಾಮಾಯಣ ಕಥೆಯನ್ನು ಕೇಳುತ್ತಾರೆ, ಇವರ ಪ್ರವಚನವನ್ನು ಕೇಳುತ್ತಿದ್ದಾರೆ ಎಂತವರಾದರೂ ರಾಮಾಯಣ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಮುರಾರಿ ತಾತ ಅವರನ್ನು ಲೆಜೆಂಡ್ ಆಫ್ ರಾಮಾಯಣ ಕಥಾ ಎಂದು ಕರೆಯುತ್ತಾರೆ. ಇವರು ರಾಮಮಂದಿರ ನಿರ್ಮಾಣಕ್ಕಾಗಿ 18 ಕೋಟಿ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ ಎಂದು ರಾಮ ಜನ್ಮ ಭೂಮಿ ಟ್ರಸ್ಟ್ ಹೇಳಿದೆ.

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡಲು ಮುರಾರಿ ಅವರು ರಾಮಕಥಾ ಆಂದೋಲನ ಪ್ರಾರಂಭಿಸುತ್ತಾರೆ ಭಾರತ ದೇಶದ ಸಾಕಷ್ಟು ಹಳ್ಳಿ ನಗರಗಳಿಗೆ ಹೋಗಿ ರಾಮಾಯಣ ಪ್ರವಚನ ಮಾಡಿ ಭಕ್ತರಿಂದ ಹಣವನ್ನು ಸಂಗ್ರಹ ಮಾಡುತ್ತಾರೆ ಭಾರತ ದೇಶದ ಎಲ್ಲಾ ಮೂಲೆಗೆ ಹೋಗಿ ಇವರು ಹನ್ನೊಂದು ಕೋಟಿ ಮೂವತ್ತು ಲಕ್ಷ ರೂಪಾಯಿ ನಂತರ ಯುರೋಪ್ ಹಾಗೂ ಇಂಗ್ಲೆಂಡ್ ಅಮೆರಿಕ ಇನ್ನಿತರ ದೇಶಕ್ಕೆ ಹೋಗಿ ಅಲ್ಲಿಯೂ ರಾಮಕಥಾ ಪ್ರವಚನ ಮಾಡಿ 7 ಕೋಟಿ ರೂಪಾಯಿ ಸಂಗ್ರಹ ಮಾಡಿ ನೇರವಾಗಿ ರಾಮಮಂದಿರ ಟ್ರಸ್ಟ್ ಗೆ ಹೋಗುವ ವ್ಯವಸ್ಥೆ ಮಾಡಿದ್ದಾರೆ.

ಮುರಾರಿ ಅವರೆ ಹೆಚ್ಚು ದೇಣಿಗೆ ನೀಡಿದ್ದಾರೆ ಎಂದು ಟ್ರಸ್ಟ್ ಹೇಳಿದೆ. ಇವರು ರಾಮಮಂದಿರ ಉದ್ಘಾಟನೆ ಆಗುತ್ತಿದ್ದಂತೆ ನನ್ನ ಹೃದಯ ಸಂತೋಷದಿಂದ ತೇಲಾಡುತ್ತಿದೆ ಎಂದು ಹೇಳಿದ್ದಾರೆ. ಮುರಾರಿ ಅವರು ಮಾರ್ಚ್ 2, 1946ರಲ್ಲಿ ಗುಜರಾತಿನ ಒಂದು ಹಳ್ಳಿಯಲ್ಲಿ ಜನಿಸುತ್ತಾರೆ. ಹುಟ್ಟಿನಿಂದಲೂ ಕಡು ಬಡತನ ಸಣ್ಣ ವಯಸ್ಸಿನಿಂದಲೂ ರಾಮಾಯಣ ಓದುತ್ತಾ ರಾಮನ ಭಕ್ತರಾಗುತ್ತಾರೆ. ರಾಮ ದೇವರನ್ನು ಇಡಿ ಜಗತ್ತಿಗೆ ತೋರಿಸಬೇಕು ಎಂದು ನಿರ್ಧಾರ ಮಾಡಿ ರಾಮಕಥಾ ಎಂಬ ಹೊಸ ಅಧ್ಯಾಯ ಪ್ರಾರಂಭಿಸುತ್ತಾರೆ.

ತಮ್ಮ 14 ನೇ ವಯಸ್ಸಿನಲ್ಲಿ ತಮ್ಮ ಊರಿನ ಆಲದ ಮರದ ಕೆಳಗೆ ಜನರನ್ನು ಸೇರಿಸಿ ರಾಮಾಯಣದ ಪ್ರವಚನ ಕೊಡುತ್ತಾರೆ ಹೀಗೆ ನಾನಾ ಕಡೆ ಪ್ರವಚನ ಮಾಡುತ್ತಾರೆ ಇವರ ಪ್ರವಚನಕ್ಕೆ ಸೋತ ಮುರಾರಿ ಅವರ ಬಗ್ಗೆ ಜನರು ನಾನಾ ಕಡೆ ಹರಡುತ್ತಾರೆ, ಕೀನ್ಯಾ ದೇಶಕ್ಕೆ ಹೋಗಿ ರಾಮಾಯಣ ಪ್ರವಚನ ಕೊಡುತ್ತಾರೆ. ಮುರಾರಿ ಅವರು ವಿಶ್ವದಾದ್ಯಂತ 930 ಬಾರಿ ರಾಮಾಯಣ ಕಥಾ ಪ್ರವಚನ ಮಾಡಿದ್ದಾರೆ. ಇವರ ವಯಸ್ಸು 77 ವರ್ಷ. ಮುರಾರಿ ಅವರಂತೆ ಇನ್ನೊಬ್ಬ ವ್ಯಕ್ತಿ ರಾಮಮಂದಿರ ನಿರ್ಮಾಣಕ್ಕಾಗಿ ಹೆಚ್ಚಿನ ರೀತಿಯಲ್ಲಿ ದೇಣಿಗೆ ನೀಡಿದ್ದಾರೆ.

ಗುಜರಾತಿನ ಸೂರತ್ ನ ಡೈಮಂಡ್ ಮರ್ಚೆಂಟ್ ದಿಲೀಪ್ ಕುಮಾರ್ ಅವರು 101 ಕೆಜಿ ಬಂಗಾರವನ್ನು ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ ಈಗಿನ ಕಾಲದಲ್ಲಿ ಸುಮಾರು 68 ಕೋಟಿ ರೂಪಾಯಿ ಮೌಲ್ಯದ ಬಂಗಾರವನ್ನು ಕೊಟ್ಟಿದ್ದಾರೆ. ದಿಲೀಪ್ ಕುಮಾರ್ ಅವರು ರಾಮನ ಭಕ್ತರಾಗಿದ್ದು ರಾಮಮಂದಿರ ನಿರ್ಮಾಣವಾದರೆ ಬಂಗಾರ ಕೊಡುವ ಕನಸು ಕಂಡಿದ್ದರು. ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಕೊಟ್ಟ ಈ ಇಬ್ಬರು ವ್ಯಕ್ತಿಗಳಿಗೆ ರಾಮ ದೇವರು ಒಳ್ಳೆಯದನ್ನು ಮಾಡಲಿ ಹಾಗೂ ನಮ್ಮೆಲ್ಲರಿಗೂ ದೇವರು ಆಶೀರ್ವಾದ ಮಾಡಲಿ ಎಂದು ಆಶೀರ್ವಾದ ಮಾಡಲಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!