WhatsApp Group Join Now
Telegram Group Join Now

Upendra: ವಿವಾದಗಳ ಸೆರೆಮಾಲೆಯೊಳಗೆ ಸಿಲುಕಿಕೊಂಡಿದಂತಹ ಉಪೇಂದ್ರ (Upendra) ಎಲ್ಲವನ್ನು ಬಗೆಹರಿಸಿಕೊಂಡು ಶೂಟಿಂಗ್ ಕೆಲಸಗಳಿಂದ ಕೊಂಚ ಬ್ರೇಕ್ ಪಡೆದು ಹೆಂಡತಿ ಮಕ್ಕಳೊಂದಿಗೆ ವಿದೇಶ ಪ್ರವಾಸಕ್ಕೆ ಹಾರಿದ್ದಾರೆ. ಹೌದು ಗೆಳೆಯರೇ ಥೈಲ್ಯಾಂಡ್ ನ ರಸ್ತೆ ಬೀದಿಯಲ್ಲಿ ನಿಂತು ಉಪೇಂದ್ರ, ಪ್ರಿಯಾಂಕ ಉಪೇಂದ್ರ (Priyanka Upendra) ಹಾಗೂ ಇಬ್ಬರು ಮುದ್ದಾದ ಮಕ್ಕಳು ಫೋಟೋಗೆ ಫೋಸ್ ನೀಡಿದ್ದು ಈ ಕೆಲವು ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಹೌದು ಸ್ನೇಹಿತರೆ ಬುದ್ಧಿವಂತ ಟು, ತ್ರಿಶೂಲಂ, UI, ಉಪೇಂದ್ರ 54 ಸೇರಿದಂತೆ ಸಾಲು ಸಾಲು ಸಿನಿಮಾಗಳ ಶೂಟಿಂಗ್ ಕೆಲಸದಲ್ಲಿ ಬ್ಯುಸಿ ಇದ್ದಂತಹ ಉಪ್ಪಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ ವಿದೇಶಿ ಪ್ರವಾಸವನ್ನು ಹಲವು ದಿನಗಳಿಂದ ಪ್ಲಾನ್ ಮಾಡುತ್ತಿದ್ದರಂತೆ. ಆದರೆ ಈಗ ಅದಕ್ಕೆ ಸಮಯ ಕೂಡಿ ಬಂದಿದ್ದು, ತಮ್ಮ ಹೆಂಡತಿ ಹಾಗೂ ಇಬ್ಬರು ಮುದ್ದಿನ ಮಕ್ಕಳನ್ನು ಕರೆದುಕೊಂಡು ವಿಮಾನದಲ್ಲಿ ಬೆಂಗಳೂರಿನಿಂದ ಥೈಲ್ಯಾಂಡ್(Thailand) ಗೆ ಹಾರಿದ್ದಾರೆ.

ಫ್ಲೈಟ್ ಥೈಲ್ಯಾಂಡ್ ನಲ್ಲಿ ಲ್ಯಾಂಡ್ ಆದ ಬಳಿಕ ಏರೋಪ್ಲೇನ್ ಮುಂದೆ ನಿಂತು ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಹಾಗೂ ಅವರಿಬ್ಬರ ಮುದ್ದಿನ ಮಕ್ಕಳಾದ ಐಶ್ವರ್ಯ (Aishwarya) ಹಾಗೂ ಆಯುಷ್(Ayush) ಉಪೇಂದ್ರ ಸೆಲ್ಫಿ ಕ್ಲಿಕಿಸಿಕೊಂಡಿದ್ದು ಆ ಕೆಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಬಹಳ ಸಿಂಪಲ್ಲಾಗಿ ಟೀಶರ್ಟ್ ಜಾಕೆಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿ ಫೋಟೋಗೆ ಬಹಳ ಸ್ಟೈಲಿಶ್ ಆಗಿ ಫೋಟೋಗೆ ಪೋಸ್ ನೀಡಿದರೆ

ಪ್ರಿಯಾಂಕಾ ಉಪೇಂದ್ರ ಅವರು ಹಳದಿ ಬಣ್ಣದ ಗೌನ್ ಧರಿಸಿ ಬಹಳ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಥೈಲ್ಯಾಂಡ್ (Thailand) ನ ವಿಶೇಷ ಸ್ಥಳಗಳನ್ನು ವೀಕ್ಷಿಸಿ ಮಾಲ್ ಒಂದಕ್ಕೆ ದಂಪತಿಗಳು ಪ್ರವೇಶಿಸಿದ್ದು ಇಬ್ಬರು, ಮಾಡ್ರನ್ ಲುಕ್ ನಲ್ಲಿ ಮುದ್ದಾದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಕನ್ಯಾ ರಾಶಿಯ ಜನರ ವಿಶೇಷವಾದ ಗುಣಲಕ್ಷಣಗಳು ಹೇಗಿರತ್ತೆ ತಿಳಿದುಕೊಳ್ಳಿ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: