ಕೇಂದ್ರ ಸರ್ಕಾರದಿಂದ ಹೊಸ ಪೆನ್ಶನ್ ಯೋಜನೆ, ಪ್ರತಿ ತಿಂಗಳು ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 10 ಸಾವಿರ

0

ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರವು ಜನರಿಗೆ ಅನುಕೂಲ ಅಗುವಂಥ ಹಲವು ಒಳ್ಳೆಯ ಯೋಜನೆಗಳನ್ನು ಜಾರಿಗೆ ತರುತ್ತದೆ. ನಮ್ಮ ದೇಶದ ಎಲ್ಲಾ ಜನರಿಗೆ ಅನುಕೂಲ ಅಗುವಂಥ ಸಹಸ್ರಾರು ಯೋಜನೆಗಳು ಈಗಾಗಲೇ ಜಾರಿಗೆ ಬಂದಿದೆ. ನಮ್ಮಲ್ಲಿ ಆರ್ಥಿಕವಾಗಿ ಕಷ್ಟದಲ್ಲಿ ಇರುವವರು, ರೈತರು, ಮಕ್ಕಳು, ಮಹಿಳೆಯರು ಹೀಗೆ ಎಲ್ಲರಿಗೂ ಅನುಕೂಲ ಆಗುವಂಥ ಯೋಜನೆಗಳು ಇವೆ. ವೃದ್ದಾಪ್ಯ ಬರುವ ಕಾಲಕ್ಕೆ ಬದುಕು ಕಷ್ಟವಾಗದ ಹಾಗೆ ಕಾಪಾಡುವ ಸಾಕಷ್ಟು ಯೋಜನೆಗಳು ಕೂಡ ಜಾರಿಗೆ ಬಂದಿದೆ.

ಈ ಮೊದಲು ಸರ್ಕಾರಿ ಕೆಲಸ ಹೊಂದಿರುವವರಿಗೆ ಮಾತ್ರ ಪೆನ್ಶನ್ ಸಿಗುತ್ತಿತ್ತು, ಆದರೆ ಈಗ ಆ ರೀತಿ ಇಲ್ಲ. ಒಂದು ವೇಳೆ ನೀವು ಚೆನ್ನಾಗಿ ಸಂಪಾದನೆ ಮಾಡುತ್ತಿದ್ದರೆ, ಈಗಿನಿಂದಲೇ ಹಣವನ್ನು ಹೂಡಿಕೆ ಮಾಡಿ ನಿಮ್ಮ ವೃದ್ಧಾಪ್ಯ ಚೆನ್ನಾಗಿರುವ ಹಾಗೆ ರೂಪಿಸಿಕೊಳ್ಳಬಹುದು. ಇಂಥ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ವಯಸ್ಸಾದ ಮೇಲೆ ಮತ್ತೊಬ್ಬರ ಮೇಲೆ ಅವಲಂಬಿಸಿ ಇರಬಾರದು, ತಮ್ಮ ಖರ್ಚನ್ನು ತಾವು ನೋಡಿಕೊಳ್ಳಬೇಕು ಎಂದುಕೊಂಡಿರುವವರು, ಈಗಿನಿಂದ ಹಣ ಉಳಿತಾಯ ಮಾಡುತ್ತಾ ಬಂದರೆ, ವೃದ್ಧಾಪ್ಯದ ವೇಳೆ ಸಹಾಯ ಆಗುತ್ತದೆ.

ಹೀಗೆ ಜನರಿಗೆ ವೃದ್ಧಾಪ್ಯದಲ್ಲಿ ಸಹಾಯ ಆಗುವ ಹಾಗೆ ಮಾಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಅಟಲ್ ಪಿಂಚಣಿ ಯೋಜನೆ (ಪ್ರಧಾನಮಂತ್ರಿ ಅಟಲ್ ಪೆನ್ಶನ್ ಸ್ಕೀಮ್). ಇದು ದೇಶದ ಜನರಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2005 ರಲ್ಲಿ ಜಾರಿಗೆ ತಂದಿರುವ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಉಳಿತಾಯ ಮಾಡುತ್ತಾ ಬಂದು, ಪ್ರತಿ ತಿಂಗಳು ಇಂತಿಷ್ಟು ಎಂದು ಪೆನ್ಶನ್ ಪಡೆಯಬಹುದು.

ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿದುಕೊಳ್ಳೋಣ. ಈ ಯೋಜನೆಯನ್ನು ಶುರು ಮಾಡಲು ಬೇಕಾಗುವ ಪ್ರಮುಖ ಅರ್ಹತೆಗಳು..
ಅರ್ಜಿ ಹಾಕುವವರು ಭಾರತದ ಪ್ರಜೆಯೇ ಆಗಿರಬೇಕು.
ಅರ್ಜಿದಾರರ ವಯಸ್ಸು 18 ರಿಂದ 40 ವರ್ಷಗಳ ಒಳಗೆ ಇರಬೇಕು.
ಮೊಬೈಲ್ ನಂಬರ್ ಜೊತೆಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕಾರ್ಡ್ ಇರಬೇಕು. ನೀವು ಎಷ್ಟು ಹಣ ಹೂಡಿಕೆ ಮಾಡುತ್ತೀರೋ ಅದರ ಮೇಲೆ ತಿಂಗಳಿಗೆ ಎಷ್ಟು ಹಣ ನಿಮಗೆ ಪೆನ್ಶನ್ ರೂಪದಲ್ಲಿ ಬರುತ್ತದೆ ಎನ್ನುವುದನ್ನು ಸರ್ಕಾರ ನಿರ್ಧಾರ ಮಾಡುತ್ತದೆ.

ಈ ಯೋಜನೆಯಲ್ಲಿ ಪೆನ್ಶನ್ ಪಡೆಯುವವರಿಗೆ ಕಾನೂನಿನ ಸೆಕ್ಷನ್ 80ಸಿಸಿ ಪ್ರಕಾರ ತೆರಿಗೆ ವಿನಾಯಿತಿ ಸಿಗುತ್ತದೆ. ನಿಮಗೆ 60 ವರ್ಷ ವಯಸ್ಸಾಗುವವರೆಗೂ ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತ ಬರಬಹುದು. ಒಂದು ದಿನಕ್ಕೆ 42 ರೂಪಾಯಿ ಇಂದ ಹಿಡಿದು, ತಿಂಗಳಿಗೆ ₹5000 ರೂಪಾಯಿಯವರೆಗು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ನೀವು ಎಷ್ಟು ಹೂಡಿಕೆ ಮಾಡುತ್ತೀರೋ ಅದರ ಆಧಾರದ ಮೇಲೆ ನಿಮಗೆ ಹಣ ಸಿಗುತ್ತದೆ.

ಈ ಯೋಜನೆಯಲ್ಲಿ ನಿಮಗೆ ತಿಂಗಳಿಗೆ 1000 ಇಂದ 5000 ವರೆಗು ಪೆನ್ಶನ್ ಸಿಗುವ ಆಯ್ಕೆ ಇರುತ್ತದೆ. ಒಂದು ವೇಳೆ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರು ಸೇರಿ ಈ ಯೋಜನೆಯಲ್ಲಿ ಖಾತೆ ತೆರೆದರೆ, ತಿಂಗಳಿಗೆ ₹10,000 ವರೆಗು ಪೆನ್ಶನ್ ಪಡೆಯಬಹುದು. ಹೂಡಿಕೆ ಮಾಡಿದ ಬಳಿಕ ಅರ್ಧದಲ್ಲೇ ನೀವು ವಿಧಿವಶರಾದರೆ ನೀವು ಹೂಡಿಕೆ ಮಾಡಿರುವ ಹಣದ ಪ್ರಯೋಜನವನ್ನು ನಿಮ್ಮ ಸಂಗಾತಿ ಪಡೆಯಬಹುದು, ಅಥವಾ ಅವರು ಹೂಡಿಕೆಯ ಅವಧಿಯನ್ನು ಪೂರ್ತಿಗೊಳಿಸಬಹುದು.

ಈ ಯೋಜನೆಯಲ್ಲಿ ನಾಮಿನಿ ಮಾಡುವ ಆಯ್ಕೆ ಕೂಡ ಇದೆ, ಹಾಗಾಗಿ ನಿಮ್ಮ ಸಂಗಾತಿಯ ಸಮಯ ಮುಗಿದ ಬಳಿಕ ನಾಮಿನಿ ಮಾಡಿರುವವರಿಗೆ ಹಣ ಸಲ್ಲುತ್ತದೆ. ನೀವು ಈ ಯೋಜನೆಯಲ್ಲಿ ಖಾತೆ ತೆರೆಯಲು ಬಯಸಿದರೆ, ಯಾವುದೇ ಬ್ಯಾಂಕ್ ನಲ್ಲಿ ಅಥವಾ ಪೋಸ್ಟ್ ಆಫೀಸ್ ನಲ್ಲಿ ಅಕೌಂಟ್ ಓಪನ್ ಮಾಡಬಹುದು.

Leave A Reply

Your email address will not be published.

error: Content is protected !!