Rishab Shetty : ಹುಟ್ಟು ಹಬ್ಬದ ಅಂಗವಾಗಿ ಪತ್ನಿಯೊಂದಿಗೆ ದೇವಸ್ಥಾನಕ್ಕೆ ತೆರಳಿ, ದೇವರ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ!!

0

Rishab Shetty : ನಿನ್ನೆಯಷ್ಟೇ ಅಂದ್ರೆ ಜೂನ್ 7ನೇ ತಾರೀಕಿನಂದು ನಟ ರಿಷಬ್ ಶೆಟ್ಟಿ (Rishab Shetty) ತಮ್ಮ ಕುಟುಂಬಸ್ತರ ಸ್ನೇಹಿತರು ಹಾಗೂ ಅಭಿಮಾನಿಗಳೊಂದಿಗೆ 40ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಅಭಿಮಾನಿಗಳೊಡನೆ ಮಳೆಯಲ್ಲಿ ನೆನೆದು ಕೇಕ್ ಕತ್ತರಿಸುವ ಮೂಲಕ ಬರ್ತಡೇ ಸೆಲೆಬ್ರೇಶನ್ ಅನ್ನು ಜೋರಾಗಿ ಮಾಡಿಕೊಂಡ ರಿಷಬ್ ಶೆಟ್ಟಿ (Rishab Shetty) ಬೆಳ್ಳಂ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ.

ಹೌದು ಗೆಳೆಯರೇ ಯಾವುದೇ ಬ್ಯಾಗ್ರೌಂಡ್ (Background) ಇಲ್ಲದೆ ತಮ್ಮ ಪ್ರತಿಭೆಯ ಮೂಲಕವೇ ಹಲವಾರು ವರ್ಷಗಳ ಸತತ ಪ್ರಯತ್ನದಿಂದ ಇದೀಗ ಪ್ಯಾನ್ ಇಂಡಿಯಾ ಸ್ಟಾರ್(Pan India Star) ಆಗಿ ಹೊರಹೊಮ್ಮಿರುವಂತಹ ರಿಷಬ್ ಶೆಟ್ಟಿಯವರಿಗೆ ಕಾಂತರಾ ಸಿನಿಮಾದ ಯಶಸ್ಸು ಬಹುದೊಡ್ಡ ನೇಮ್ ಫೇಮನ್ನು ತಂದುಕೊಡುತ್ತದೆ.

Rishab Shetty Birthday Special

ಈ ಹಿಂದೆ ಕೇವಲ ಬೆರಳುಣಿಕೆಯಷ್ಟು ಸಿನಿಮಾಗಳನ್ನು ಮಾಡುತ್ತ ಕನ್ನಡ ಚಿತ್ರರಂಗದ ಸಾಮಾನ್ಯ ನಟನಾಗಿದ್ದಂತಹ ರಿಶಬ್ ಶೆಟ್ಟಿ (Rishab Shetty) ಇಂದು ಮಲ್ಟಿ ನ್ಯಾಷನಲ್ ಸ್ಟಾರ್(MultiNational star) ಆಗಿ ಹೊರಹೊಮ್ಮಿದ್ದಾರೆ. ಇದರ ಜೊತೆಗೆ ತಮ್ಮ ಅದ್ಭುತವಾದ ಡೈರೆಕ್ಷನ್, ಚಾಕಚಕ್ಯತೆಯಿಂದಲೂ ಕನ್ನಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಇವರು ರಿಕ್ಕಿ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು.

ಹಾಗೂ ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಗಳಿಸಿಕೊಂಡಂತಹ ಕಾಂತರಾ ಚಿತ್ರದ ನಿರ್ದೇಶಕರಾಗಿಯೂ ಗುರುತಿಸಿಕೊಂಡರು. ಸದ್ಯ ತಮ್ಮ ಕಾಂತರಾ ಪಾರ್ಟ್ 2(Kantara 2) ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿರುವ ರಿಷಬ್ ಶೆಟ್ಟಿ (Rishab Shetty) ಈ ಸಿನಿಮಾಗಾಗಿಯೇ ಕುದುರೆ ಸವಾರಿ ಹಾಗೂ ಕಲರಿ ಪಟ್ಟುರಂತಹ ಕಲೆಗಳನ್ನು ಕಲಿಯುತ್ತಾ ಸಿನಿಮಾದ ಅದ್ಭುತ ಯಶಸ್ಸನ್ನು ನಿರೀಕ್ಷಿಸುತ್ತಿದ್ದಾರೆ.

ಹೀಗಿರುವಾಗ ನೆನ್ನೆಯಷ್ಟೇ ನಟ ರಿಷಬ್ ಶೆಟ್ಟಿ (Rishab Shetty) ಅವರು ತಮ್ಮ 40ರ ವಸಂತಕ್ಕೆ ಕಾಲಿಟ್ಟಿದ್ದು, ಪತ್ನಿಯೊಂದಿಗೆ ದೇವಸ್ಥಾನಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದ ನಂತರ ನಂದಿ ಲಿಂಕ್ ಗ್ರೌಂಡ್(Nandhi Link Grand) ನಲ್ಲಿ ಅಭಿಮಾನಿಗಳು ಒಟ್ಟಿಗೆ ಕೇಕ್ ಕತ್ತರಿಸಿ ಅದ್ದೂರಿಯಾಗಿ ತಮ್ಮ ಬರ್ತಡೆ ಸೆಲೆಬ್ರೇಶನ್ ಮಾಡಿಕೊಂಡರು.

Leave A Reply

Your email address will not be published.

error: Content is protected !!