Nikhil Kumaraswamy: ಬಾರಿ ವೈರಲ್ ಆಗ್ತಿದೆ ದೊಡ್ಮನೆಯಾ ಮುದ್ದಾದ ಬಾಲಕೃಷ್ಣನ ಫೋಟೋಸ್, ಮಗನಿಗೆ ಕೃಷ್ಣನ ವೇಷ ಹಾಕಿಸಿ ಸಂತಸ ಪಟ್ಟ ನಿಖಿಲ್ ಕುಮಾರಸ್ವಾಮಿ ದಂಪತಿಗಳು!

0

ಸ್ನೇಹಿತರೆ, ಕಳೆದ ಕೆಳಗಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ರಾಜಕಾರಣಿ ಕಮ್ ನಟ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ಆಗಾಗ ತಮ್ಮ ಹೆಂಡತಿ ಮತ್ತು ಮಗನೊಂದಿಗಿನ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ಬಾರಿ ವೈರಲ್ ಆಗುತ್ತಾರೆ. ಹೀಗಿರುವಾಗ ನಿನ್ನೆಯ ಕೃಷ್ಣ ಜನ್ಮಾಷ್ಟಮಿ(Krishna Janmashtami) ಹಬ್ಬದ ಪ್ರಯುಕ್ತ ಮಗನಿಗೆ ಬಾಲಕೃಷ್ಣನ ವೇಷ ಹಾಕಿಸಿ ಅದನ್ನು ಮುದ್ದಾದ ಫೋಟೋಗಳನ್ನು ಸೆರೆಹಿಡಿದು ತಮ್ಮ

ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಸಿಕೊಂಡು ಸಂತಸಾ‌ ವ್ಯಕ್ತ ಪಡಿಸಿದ್ದಾರೆ. ಹೌದು ಗೆಳೆಯರೇ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ಏಪ್ರಿಲ್ 17,2020 ರಂದು ತಮ್ಮ ಬಹುಕಾಲದ ಗೆಳತಿ ರೇವತಿ(Revathi)ಯವರನ್ನು ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಅದ್ದೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ 2021 ಸೆಪ್ಟೆಂಬರ್ 24ನೇ ತಾರೀಕಿನಂದು ಅವ್ಯಾನ ದೇವ್ ಎಂಬ ಮುದ್ದಾದ ಗಂಡು ಮಗ ಜನಿಸಿದ್ದು,

ಆಗಾಗ ತಮ್ಮ ಮಗನೊಂದಿಗಿನ ಫೋಟೋಗಳನ್ನು ನಿಖಿಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಂತೆ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಗನಿಗೆ ಬಾಲಕೃಷ್ಣನ ವೇಷ ಹಾಕಿಸಿ ಕೈಗೆ ಕೊಳಲನ್ನು ನೀಡಿ ತಲೆಗೆ ನವಿಲುಗರಿ ಹಾಕಿ ಆತನ ಮುದ್ದಾದ ಫೋಟೋಗಳನ್ನು ಸೆರೆ ಹಿಡಿದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಹಾಗೂ ರೇವತಿ ಇಬ್ಬರೂ ತಮ್ಮ ಮಗನ ಬಾಲಕೃಷ್ಣನ ಅವತಾರಕ್ಕೆ ಮನಸ್ಸೋತು ಅಭಿಮಾನಿಗಳೊಟ್ಟಿಗೆ ಈ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು,

ಕೃಷ್ಣಂ ವಂದೇ ಜಗದ್ಗುರುಂ ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ(Krishna Janmashtami) ಹಬ್ಬದ ಶುಭಾಶಯಗಳು ಆ ಕೃಷ್ಣ ಪರಮಾತ್ಮನು ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂಬ ಕ್ಯಾಪ್ಷನ್ ಬರೆದು ಶ್ರೀ ಕೃಷ್ಣ ಜನ್ಮಾಷ್ಟಮಿ(Krishna Janmashtami) ಎಂಬ ಹಾಷ್ಟ್ಯಾಗ್ ಹಾಕಿದ್ದಾರೆ. ಸದ್ಯ ಈ ಫೋಟೋ ನೆಟ್ಟಿಗರ ಗಮನ ಸೆಳೆದಿದ್ದು ಫೋಟೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ 43000ಕ್ಕೂ ಅಧಿಕ ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬಂದಿದೆ.

Leave A Reply

Your email address will not be published.

error: Content is protected !!
Footer code: