ಹಿರಿಯ ನಟ ಜೈ ಜಗದೀಶ್ ಅವರ 3 ಹೆಣ್ಣು ಮಕ್ಕಳಿರುವ ಸೊಗಸಾದ ಕುಟುಂಬದ ಫೋಟೋಸ್ ಇಲ್ಲಿದೆ ನೋಡಿ

0

ಸ್ನೇಹಿತರೆ, ಯಾವುದೇ ಪಾತ್ರ ನೀಡಿದರು ಅದ್ಭುತವಾಗಿ ಅಭಿನಯಿಸುತ್ತ ಪಾತ್ರವೇ ತಾವಾಗುವಂತಹ ನಟನಾಗಿ ಹಲವು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಯಶಸ್ವಿ ಚಿತ್ರಗಳ ಮೂಲಕ ಅಭಿಮಾನಿ ಬಳಗವನ್ನು ರಂಜಿಸುತ್ತಾ ಬಂದಿರುವ ಜೈ ಜಗದೀಶ್(Jai Jagadeesh) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ? ಡಾಕ್ಟರ್ ವಿಷ್ಣುವರ್ಧನ್ (Vishnuvardhan) ಅವರ ಕಾಲದಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ನಟ ಜೈ ಜಗದೀಶ್(Jai Jagadeesh) ಇಂದಿಗೂ ಕೂಡ ಯಶಸ್ವಿ ಸೀರಿಯಲ್ ಗಳಲ್ಲಿ ಹಾಗೂ ಸಿನಿಮಾಗಳ ಪೋಷಕ ಪಾತ್ರದಲ್ಲಿ ಅಭಿನಯಿಸುತ್ತ ಬಣ್ಣದ ಬದುಕಿನಲ್ಲಿ ತೊಡಗಿಕೊಂಡಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿಬರುವಂತಹ ಬಿಗ್ ಬಾಸ್ ಸೀಸನ್ ಏಳರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿ ಪ್ರಬಲ ಆಟಗಾರಿಕೆ, ವರ್ಚಸ್ಸು ಹಾಗೂ ನಡುವಳಿಕೆಯಿಂದ ವೀಕ್ಷಕರ ಮನಸ್ಸನ್ನು ಗೆದ್ದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಐದನೇ ಆವೃತ್ತಿಯ 19ನೇ ಸಾಧಕರಾಗಿ ಕೆಂಪು ಕುರ್ಚಿಯ ಮೇಲೆ ಕುಳಿತು ತಮ್ಮ ಬದುಕಿನ ಪಯಣವನ್ನು ಮೆಲುಕು ಹಾಕಿ ನೋಡಿದ ಜೈ ಜಗದೀಶ್ ಅವರು ಪ್ರಪ್ರಥಮ ಬಾರಿಗೆ ತಮ್ಮ ಮೂವರು ಹೆಣ್ಣು ಮಕ್ಕಳನ್ನು ವೇದಿಕೆಯ ಮೇಲೆ ಕರೆತಂದು ಪರಿಶೀಲಿಸಿದರು.

ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಜೈ ಜಗದೀಶ್(Jai Jagadeesh) ಅವರು ರೂಪ ಎಂಬುವರೊಂದಿಗೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ವಿಚ್ಛೇ-ದನ ಪಡೆದು ದೂರಾದ ನಂತರ ನಟಿ ವಿಜಯಲಕ್ಷ್ಮಿ ಸಿಂಗ್ ಅವರೊಂದಿಗೆ ತಮ್ಮ ಎರಡನೇ ದಾಂಪತ್ಯ ಜೀವನವನ್ನು ಪ್ರಾರಂಭಿಸುತ್ತಾರೆ. ಈ ದಂಪತಿಗಳಿಗೆ ವೈದೇಹಿ(Vaidehi), ವೈಸಿರಿ (Vaisiri) ಮತ್ತು ವೈನಿಧಿ (Vinidhi) ಎಂಬ ಮೂರು ಹೆಣ್ಣು ಮಕ್ಕಳಿದ್ದು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸುಂದರ ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ.

ಅಲ್ಲದೆ ಹೆಣ್ಣು ಮಕ್ಕಳೊಂದಿಗೆ ಬಹಳ ಸಲುಗೆಯಿಂದ ಇರುವ ಜೈ ಜಗದೀಶ್(Jai Jagadeesh) ಮತ್ತು ವಿಜಯಲಕ್ಷ್ಮಿ, ಸಿಂಗ್ರವರು ಆಗಾಗ ಅವರು ಮಕ್ಕಳೊಂದಿಗೆ ಪನ್ನಿ ವಿಡಿಯೋಗಳನ್ನು ಮಾಡುತ್ತಾ ವೈರಲ್ ಆಗುತ್ತಿರುತ್ತಾರೆ. ಮೂವರು ಹೆಣ್ಣು ಮಕ್ಕಳು ಕೂಡ ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಯಾವ ಬಾಲಿವುಡ್ ಹೀರೋಯಿನ್ಗಳಿಗೂ ಕಡಿಮೆ ಇಲ್ಲದಷ್ಟು ರೂಪವತಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ತಂದೆ ತಾಯಿಯಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಜೈ ಜಗದೀಶ್ ಅವರ ಮಕ್ಕಳು ಕೂಡ ಸದ್ದು ಮಾಡಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.

error: Content is protected !!
Footer code: