ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕೂಡ ನಡೆಯಿತು ಅದ್ದೂರಿ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ!

0

ಸ್ನೇಹಿತರೆ ಕಾಂತರಾ ಚಿತ್ರದ ಮೂಲಕ ಇಂದು ಫ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವಂತಹ ನಟ ರಿಷಬ್ ಶೆಟ್ಟಿ (Rishab Shetty) ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ವಿಚಾರವಾಗಿ ಸದಾ ಸದ್ದು ಮಾಡುತ್ತಿರುತ್ತಾರೆ. ಹೌದು ಯಾವುದೇ ಹಬ್ಬ ಹರಿದಿನಗಳು ಬಂದರೂ ಅದನ್ನು ಮನೆಯವರ ಜೊತೆ ಸೇರಿ ಬಹಳ ಅರ್ಥಪೂರ್ಣವಾಗಿ ಆಚರಿಸುವಂತಹ ಈ ನಟ ನೆನ್ನೆ ತಮ್ಮ ಹೆಂಡತಿ ಮಕ್ಕಳಿಗೂ ರಾಧಾ ಕೃಷ್ಣ ಹಾಗೂ ಯಶೋದೆಯ(Yashode) ವೇಷ ಹಾಕಿಸಿ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ.

ಸದ್ಯ ಈ ಫೋಟೋಗಳೆಲ್ಲವೂ ನೆಟ್ಟಿಗರ ಗಮನ ಸೆಳೆದಿದ್ದು ಯಶೋಧೆಯಾಗಿ ಪ್ರಗತಿ ಶೆಟ್ಟಿ ಅವರು ತಮ್ಮ ಇಬ್ಬರೂ ಮಕ್ಕಳನ್ನು ಲಾಲನೆ ಮಾಡುತ್ತಿರುವ ಹಾಗೆ ಕ್ಯಾಮೆರಾದ ಕಣ್ಣಿಗೆ ಫೋಸ್ ನೀಡಿದ್ದಾರೆ. ಅದರಂತೆ ರಿಷಬ್(Rishab) ಮನೆಯ ಮುದ್ದಾದ ರಾಧಾ ಹಾಗೂ ಕೃಷ್ಣ ಇಬ್ಬರಿಗೂ ವೇಷ ಹಾಕಿಸಿ ಅವರ ಸುಂದರ ಕ್ಷಣಗಳನ್ನು ಕ್ಯಾಪ್ಚರ್ ಮಾಡಿ ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೌದು ಗೆಳೆಯರೇ “ನಮ್ಮ ಮನೆಯ ಕೃಷ್ಣ ರಾಧೆಯರಿಂದ ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು” ಎಂಬ ಕ್ಯಾಪ್ಶನ್ ಬರೆದು ಪ್ರಗತಿಯವರು ಸಾಲು ಸಾಲು ಫೋಟೋಗಳನ್ನು ತಮ್ಮ instagram ನಲ್ಲಿ ಶೇರ್ ಮಾಡಿದ್ದಾರೆ. ಹಳದಿ ಬಣ್ಣದ ಲಂಗ ದಾವಣಿ ಧರಿಸಿ ಮಗಳು ರಾಧ್ಯಾ ಶೆಟ್ಟಿ(Raadhya Shetty) ಕೈಯಲ್ಲಿ ಹೂವಿನ ಬುಟ್ಟಿ ಹಿಡಿದು ಕೃಷ್ಣನಿಗಾಗಿ ಹುಡುಕಾಡಿದರೆ ಅತ್ತ ಕೃಷ್ಣನಾಗಿ ರಣ್ವಿತ್ ಶೆಟ್ಟಿ(Ranvit Shetty) ಕೊಳಲಿಡಿದು ಜೋಕಾಲಿಯ ಮೇಲೆ ಕುಳಿತಿರುವ ಹಾಗೆ ಬಹಳ ಸುಂದರ ಫೋಟೋಗಳನ್ನು ತಗೆಸಿದ್ದಾರೆ.

ಸದ್ಯ ಈ ಫೋಟೋಗಳೆಲ್ಲ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಲ್ಲಿ ಭಾರೀ ವೈರಲ್ ಆಗುತ್ತಿದ್ದು, ರಿಷಬ್ ಶೆಟ್ಟಿಯ (Rishab Shetty) ಸುಂದರ ಕುಟುಂಬ ಕಂಡಂತಹ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಪ್ರೀತಿಯ ಸುರಿಮಳೆ ಹರಿಸುತ್ತಿದ್ದಾರೆ.

Leave A Reply

Your email address will not be published.

error: Content is protected !!