Druva Sarja: ಅಣ್ಣನ ಸಮಾಧಿಯ ಪಕ್ಕದಲ್ಲೇ ರಾತ್ರಿಯಿಡಿ ಮಲಗಿದ್ದ ದ್ರುವ ಸರ್ಜಾ! ವೈರಲ್ ಆಯ್ತು ವಿಡಿಯೋ

0

ಸ್ನೇಹಿತರೆ, ನಿನ್ನೆ ಅಣ್ಣನ ಪುಣ್ಯ ಭೂಮಿಯ ಬಳಿ ತೆರಳಿದಂತ ಧ್ರುವ ಸರ್ಜಾ(Druva Sarja) ಸಮಾಧಿಯ ಪಕ್ಕದಲ್ಲಿ ಮಲಗಿ ಕಣ್ಣೀರು ಹಾಕಿರುವ ಫೋಟೋಸ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕರೋನ ಎಂಬ ಸಾಂಕ್ರಾಮಿಕ ರೋಗವು ಅಬ್ಬರಿಸಿ ಬೊಬ್ಬೆರಿವ ಸಮಯದಲ್ಲಿ ನಟ ಚಿರಂಜೀವಿ ಸರ್ಜಾ(Chiranjeevi Sarja) ಅವರಿಗೆ ಜೂನ್ 7ನೇ ತಾರೀಕು 2020 ರಂದು ತಮ್ಮ ಮನೆಯವರೊಂದಿಗೆ ಕಾಲ ಕಳೆಯುತ್ತಿರುವಾಗಲೇ ಹೃದಯಾಘಾತ ಸಂಭವಿಸುತ್ತದೆ. ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಚಿರಂಜೀವಿ ಸರ್ಜಾ ಅವರ ಪ್ರಾಣ ಪಕ್ಷಿ ಹಾರಿಹೋಗಿದ್ದು, ಈ ಸುದ್ದಿ ಇಡೀ ಕರ್ನಾಟಕಕ್ಕೆ ಅಘಾತವಾದ ನೋವು ತಂದಿದ್ದು,

ಈ ನೋವಿನಿಂದ ಹೊರಬರುವ ಪ್ರಯತ್ನ ಮಾಡುತ್ತಿರುವ ಮೇಘನಾ ರಾಜ್ ಮತ್ತು ಧ್ರುವ ಸರ್ಜಾ ಯಾವುದೇ ಸಂದರ್ಶನಗಳಲ್ಲಿ ಭಾಗಿಯಾದರು ಚಿರು ಕುರಿತು ಮಾತನಾಡದೆ ತಮ್ಮ ಸಂದರ್ಶನವನ್ನು ಮುಗಿಸುವುದಿಲ್ಲ. ಹೀಗಿರುವಾಗ ಅಣ್ಣನನ್ನು ಬಹಳ ಹಚ್ಚಿಕೊಂಡಿದ್ದಂತಹ ಧ್ರುವ ಸರ್ಜಾ ಅವರಿಗೆ ಈ ಒಂದು ನೋವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಕನಕಪುರ ಬಳಿ ಇರುವ ನೆಲಗುಳಿಯ ಧ್ರುವ ಸರ್ಜಾ ಅವರ ಫಾಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅವರ ಪುಣ್ಯಭೂಮಿಯಿದ್ದು, ಅಲ್ಲಿಗೆ ಹೋಗಿ ಧ್ರುವ ಸರ್ಜಾ ಗಾಢವಾಗಿ ನಿದ್ರೆಗೆ ಜಾರಿರುವಂತಹ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ. ತಮ್ಮ ಅಣ್ಣನ ಸಮಾಧಿಯ ಮೇಲೆ ಮಲಗಿರುವುದನ್ನು ಕಂಡಂತಹ ಅಭಿಮಾನಿಗಳು ಅವರನ್ನು ಎಬ್ಬಿಸುವಾಗ ಈ ವಿಡಿಯೋ ಮಾಡಿದ್ದು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಭಿನ್ನವಾಗಿ ಕಾಮೆಂಟ್ ಮಾಡುತ್ತಾ ಧ್ರುವ ಸರ್ಜಾ(Druva Sarja) ಅವರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದಾರೆ. ಅಕ್ಟೋಬರ್ ಆರನೇ ತಾರೀಕು ಚಿರಂಜೀವಿ ಸರ್ಜಾ(Chiranjeevi Sarja) ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಕೊನೆ ಸಿನಿಮಾ ರಾಜ ಮಾರ್ತಾಂಡ ತೆರಿಗೆ ಬರುತ್ತಿದ್ದು, ಸಿನಿಮಾದ ಡಬ್ಬಿಂಗ್ ಕೆಲಸಗಳು ಬಾಕಿ ಇದ್ದ ಕಾರಣ ಅಣ್ಣನ ಚಿತ್ರಕ್ಕೆ ಧ್ರುವ ಸರ್ಜಾ(Druva Sarja) ಅವರೇ ದ್ವನಿ ಡಬ್ಬಿಂಗ್ ಪೂರ್ಣ ಮಾಡಿದ್ದಾರೆ.

ಧ್ರುವ ಸರ್ಜಾ ಅಭಿನಯದ ಮಾರ್ಟಿನ್(Martin) ಚಿತ್ರ ಕೂಡ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಂದಿದೆ. ಹೀಗೆ ಸರ್ಜಾ ಕುಟುಂಬದ ಮೂರು ಚಿತ್ರ ಈ ವರ್ಷದಲ್ಲಿ ತೆರೆ ಕಾಣುತ್ತಿದ್ದು, ಅಷ್ಟೇ ತುಂಬು ಹೃದಯದ ಪ್ರೀತಿಯನ್ನು ನೀಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.

error: Content is protected !!
Footer code: