ಸಕ್ಕರೆ ಕಾಯಿಲೆ ಇದ್ದವರು ರಾಗಿ ಮುದ್ದೆ ಇವತ್ತೇ ತಿನ್ನಿ ಯಾಕೆಂದರೆ..

0

ರಾಗಿ ಮುದ್ದೆಯಲ್ಲಿರುವ ಈ ಪ್ರಯೋಜನವನ್ನು ನೀವು ಕೇಳಿದರೆ ಒಂದು ದಿನವೂ ಕೂಡ ರಾಗಿ ಮುದ್ದೆಯನ್ನು ತಪ್ಪಿಸುವುದಿಲ್ಲ.ರಾಗಿ ನಿರೋಗಿ ಎನ್ನುವ ಮಾತು ಸತ್ಯ, ನಮ್ಮ ಪೂರ್ವಜರೇ ಉದಾಹರಣೆ. ರಾಗಿಯನ್ನು ದಿನನಿತ್ಯ ತಿನ್ನುವುದರಿಂದ ಆರೋಗ್ಯ ತುಂಬಾ ಚೆನ್ನಾಗಿರುತ್ತೆ. ಇದರಲ್ಲಿ ವಿಟಮಿನ್ ಗಳು ಖನಿಜಾಂಶಗಳು ಜಿಂಕ್ ಹೀಗೆ ಹತ್ತು ಹಲವಾರು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ದಿನಾಲು ಸ್ವಲ್ಪವಾದರೂ ನೀವು ರಾಗಿಯನ್ನು ಉಪಯೋಗ ಮಾಡಲೇಬೇಕು.

ಮಧುಮೇಹದ ಸಮಸ್ಯೆ ಇರುವವರೆಂತೂ ರಾಗಿಯನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು. ರಾಗಿಯನ್ನು ದಿನಾಲು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ಹತೋಟಿಯಲ್ಲಿ ಇರುತ್ತದೆ ಇದು ಮಧುಮೇಹಿಗಳಿಗೆ ಬಹಳ ಉಪಯುಕ್ತ ಲಾಭವನ್ನು ತಂದುಕೊಡುತ್ತದೆ. ನಮ್ಮ ಪೂರ್ವಜರು ಯಾಕೆ ಆರೋಗ್ಯವಾಗಿರುತ್ತಿದ್ದರು ಅಂತ ಅಂದರೆ ಅವರು ದಿನನಿತ್ಯ ರಾಗಿ ಗಂಜಿ ಹೀಗೆ ರಾಗಿಯ ಆಹಾರವನ್ನೇ ತೆಗೆದುಕೊಳ್ಳುತ್ತಿದ್ದರು.

ಈಗಿನ ದಿನಮಾನಗಳಲ್ಲಿ ವಿದೇಶಿಗಳ ಆಹಾರ ವ್ಯವಸ್ಥೆಯನ್ನು ನಾವು ಉಪಯೋಗಿಸುತ್ತಿದ್ದೇವೆ ಹೆಚ್ಚಿನದಾಗಿ ಮೈದಾವನ್ನು ಸೇವಿಸುತ್ತಿದ್ದೇವೆ. ಈ ರೀತಿ ತಿನ್ನುವುದರಿಂದ ಅದು ಹೊಟ್ಟೆಯಲ್ಲಿ ಕರಗದೆ ಹಾಗೆ ಕೊಳೆತು ಅಲ್ಲಿಯೇ ವಿಷಕಾರಿಯಾಗಿ ರಕ್ತದೊಂದಿಗೆ ಸೇರಿಕೊಳ್ಳುತ್ತದೆ ಇದರಿಂದ ಹತ್ತು ಹಲವಾರು ರೀತಿಯ ಕಾಯಿಲೆಗಳಿಂದ ಮನುಷ್ಯನು ಬಳಲುತ್ತಿದ್ದಾನೆ. ನಾವು ಆರೋಗ್ಯವಾಗಿ ಇರಬೇಕು ಅಂತ ಅಂದ್ರೆ ಒಳ್ಳೆಯ ಆಹಾರ ಪದ್ಧತಿಯನ್ನು ರೂಡಿಸಿಕೊಳ್ಳಬೇಕು.

ಒಳ್ಳೆಯ ಆಹಾರ ಒಳ್ಳೆಯ ಆರೋಗ್ಯ ಎಂಬಂತೆ ನಮ್ಮ ದೇಹಕ್ಕೆ ಹೊಂದುವಂತಹ ಆರೋಗ್ಯಕರ ಆಹಾರವನ್ನು ನಾವು ತಿಂದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ರಾಗಿಗಿಂತ ಆರೋಗ್ಯಯುತವಾದ ಆಹಾರ ಬೇರೊಂದಿಲ್ಲ. ರಾಗಿಯಲ್ಲಿ ಕ್ಯಾಲ್ಸಿಯಂ ಕೂಡ ಇರುವುದರಿಂದ ಇದು ನಿಮ್ಮ ಮೂಳೆಗಳನ್ನ ಬಲಪಡಿಸುವಲ್ಲಿ ಬಹಳ ಸಹಾಯ ಮಾಡುತ್ತೆ ಮತ್ತು ಕಬ್ಬಿಣದ ಅಂಶ ಹೆಚ್ಚಾಗಿ ಇರುತ್ತದೆ. ನಿಮ್ಮ ಹಿಮೋಗ್ಲೋಬಿನ್ ಮಟ್ಟವನ್ನು ಕಾಯ್ದಿರಿಸುವಲ್ಲಿ ಸಹಾಯ ಮಾಡುತ್ತದೆ.

ರಾಗಿಯಲ್ಲಿ ಉತ್ತಮ ಕಾರ್ಬೋಹೈಡ್ರೇಟ್ಸ್ ಗಳು ಇರುವುದರಿಂದ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದರಲ್ಲಿರುವ ಅಮೀನೋ ಆಮ್ಲಗಳು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಮಧುಮೇಹವನ್ನು ಕಡಿಮೆ ಮಾಡುವಲ್ಲಿ ಇದು ಯಶಸ್ವಿ ಪಾತ್ರವನ್ನು ವಹಿಸುತ್ತದೆ. ರಾಗಿಯನ್ನು ದಿನಾಲು ನಿಮ್ಮ ಆಹಾರದೊಂದಿಗೆ ನಿಯಮಿತವಾಗಿ ತಿನ್ನುತ್ತಾ ಬನ್ನಿ. ಚಮತ್ಕಾರವನ್ನು ನೀವೇ ನೋಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!