ಹಾಸಿಗೆ ಮೇಲೆ ಕುಳಿತು ಊಟ ಮಾಡುವವರು ಖಂಡಿತ ನೋಡಿ

0

ಕೆಲವರು ಅಕಾಲಿಕ ಮರಣಕ್ಕೆ ಒಳಗಾಗುತ್ತಾರೆ, ಇನ್ನು ಕೆಲವರಿಗೆ ಧನ ಸಂಪತ್ತು ಹೆಚ್ಚಿರುತ್ತದೆ ಆದರೆ ಸಂತಾನ ಸೌಭಾಗ್ಯ ಇರುವುದೆ ಇಲ್ಲ ಇನ್ನು ಕೆಲವರು ಶಿಷ್ಯವಿದ್ದಾಗಲೆ ಮರಣ ಹೊಂದುತ್ತಾರೆ ಇದಕ್ಕೆಲ್ಲಾ ಕಾರಣವೇನು ಎಂಬುದನ್ನು ಒಂದು ಕಥೆಯ ಮೂಲಕ ವಿವರವಾಗಿ ಲೇಖನದಲ್ಲಿ ತಿಳಿಯೋಣ

ಒಂದು ಬಾರಿ ಯಮಲೋಕದಲ್ಲಿ ಯಮರಾಜರು ಹಾಗೂ ಚಿತ್ರಗುಪ್ತರ ನಡುವೆ ಒಂದು ಚರ್ಚೆ ನಡೆಯುತ್ತದೆ. ಚಿತ್ರಗುಪ್ತರು ಯಮರಾಜರಿಗೆ ಒಂದು ಪ್ರಶ್ನೆಯನ್ನು ಮಾಡುತ್ತಾರೆ ಅದೇನೆಂದರೆ ಯಾವ ಕಾರಣಕ್ಕಾಗಿ ಮನುಷ್ಯರಿಗೆ ಅಕಾಲಿಕ ಮೃತ್ಯು ಆಗುತ್ತದೆ, ಯಾವ ಮನುಷ್ಯರಿಗೆ ಸಂತಾನ ಸುಖ ಸಿಗುವುದಿಲ್ಲ. ಕೆಲವರ ಮೃತ್ಯು ಶಿಶುವಿದ್ದಾಗಲೆ ಆಗುತ್ತದೆ ಇದಕ್ಕೆ ಕಾರಣವೇನು ಎಂದು ಕೇಳುತ್ತಾರೆ. ಆಗ ಯಮರಜನು ಇದಕ್ಕೆಲ್ಲ ಕಾರಣ ಮನುಷ್ಯನ ಹವ್ಯಾಸವಾಗಿದೆ, ಅವರ ಆಚರಣೆಗೆ ಅನುಸಾರವಾಗಿ ಸುಖ ದುಃಖ ಸಿಗುತ್ತದೆ.

ಅಕಾಲಿಕ ಮೃತ್ಯುವಿನ ಕಾರಣದ ಬಗ್ಗೆ ಒಂದು ಕಥೆಯನ್ನು ಯಮರಾಜರು ಚಿತ್ರಗುಪ್ತರಿಗೆ ಹೇಳುತ್ತಾರೆ. ಮಧ್ಯದೇಶದಲ್ಲಿ ಒಂದು ಸುಂದರವಾದ ನಗರವಿತ್ತು ಅಲ್ಲಿ ಒಬ್ಬ ಶ್ರೀಮಂತ ವ್ಯಕ್ತಿಯಿದ್ದ ಆತನ ಹೆಸರು ಆತ್ಮಾರಾಮ ವ್ಯಾಪಾರಿಯಾಗಿದ್ದನು. ಈತ ಬಹಳ ಶ್ರಮ ಪಡುವ ವ್ಯಕ್ತಿ ಆಗಿದ್ದನು ತನ್ನ ಶ್ರಮದಿಂದ ಹಣವನ್ನು ಗಳಿಸುತ್ತಿದ್ದನು. ಆತ್ಮರಾಮನಿಗೆ 3 ಗಂಡುಮಕ್ಕಳಿದ್ದರು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದರು ಹಾಗೂ ಮಕ್ಕಳ ಮದುವೆಯಾಗಿತ್ತು ಮೂವರು ಗಂಡುಮಕ್ಕಳು ಆತ್ಮರಾಂ ಅವರಿಗೆ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದರು.

ಆತ್ಮರಾಂ ಅವರ ಮೊದಲ ಮಗ ಕಿಶನ್ ತಿಳುವಳಿಕಸ್ಥ ಹಾಗೂ ಬುದ್ಧಿವಂತನು ಆಗಿದ್ದನು ತಂದೆಯ ಎಲ್ಲಾ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು. ಇನ್ನೊಬ್ಬ ಮಗ ಹೊಲ ಗದ್ದೆಗಳನ್ನು ನೋಡಿಕೊಳ್ಳುತ್ತಿದ್ದ. ಮೂರನೆ ಮಗ ವಿದ್ಯಾಭ್ಯಾಸ ಮಾಡುತ್ತಿದ್ದನು. ಹೀಗೆ ಹಲವು ವರ್ಷಗಳು ಕಳೆದವು ಆತ್ಮರಾಂನ ಕೊನೆಯ ದಿನಗಳು ಸಮೀಪವಾದಂತೆ ಸಂಪತ್ತನ್ನು ಭಾಗ ಮಾಡಲು ಮುಂದಾದನು ಆತ ತನ್ನ ಮೂವರು ಮಕ್ಕಳಿಗೆ ಸಮನಾಗಿ ಸಂಪತ್ತನ್ನು ಹಂಚುತ್ತಾನೆ.

ಆತ್ಮರಾಂ ಅವರ ಮೃತ್ಯುವಿನ ನಂತರ ಮಕ್ಕಳು ತಮಗೆ ಸಿಕ್ಕ ಸಂಪತ್ತನ್ನು ನಿರ್ವಹಿಸುತ್ತಾರೆ. ಮಕ್ಕಳು ಪ್ರತಿ ವರ್ಷ ತಮ್ಮ ತಮ್ಮ ಮನೆಯಲ್ಲಿ ತಂದೆಯ ಶ್ರಾದ್ಧವನ್ನು ಮಾಡುತ್ತಿದ್ದರು. ಆತ್ಮರಾಂ ಅವರ ಮೊದಲ ಮಗನಿಗೆ ಮೂವರು ಸುಂದರವಾದ ಗಂಡುಮಕ್ಕಳು ಜನಿಸಿದರು. ಇನ್ನೊಬ್ಬ ಮಗನಿಗೆ ಎರಡು ಗಂಡುಮಕ್ಕಳು ಹಾಗೂ ಒಂದು ಮಗಳು ಜನಿಸುತ್ತಾಳೆ. ಮೂರನೆ ಮಗನಿಗೆ ಸಂತಾನ ಭಾಗ್ಯ ಇರುವುದಿಲ್ಲ ಹಲವು ವರ್ಷಗಳು ಕಳೆದರೂ ಅವರಿಗೆ ಸಂತಾನ ಪ್ರಾಪ್ತಿಯಾಗುವುದಿಲ್ಲ ಇದರಿಂದ ಚಿಕ್ಕ ಮಗನು ನಿರಾಶನಾಗುತ್ತಾನೆ.

ಅನಾರೋಗ್ಯದ ಕಾರಣ ಸಂಪತ್ತನ್ನು ಬಳಸಿ ದೂರದಿಂದ ವೈದ್ಯರನ್ನು ಕರೆಸುತ್ತಿದ್ದರು ಅಣ್ಣಂದಿರು ಇವರಿಗೆ ಸಹಾಯ ಮಾಡಿದರು ಆದರೂ ಪ್ರಯೋಜನ ಇರಲಿಲ್ಲ. ನಿಧಾನಕ್ಕೆ ಚಿಕ್ಕ ಮಗನು ಅಣ್ಣಂದಿರ ಏಳಿಗೆಯನ್ನು ನೋಡಿ ಅಸೂಯೆ ಪಡುತ್ತಾರೆ. ನಂತರ ಅವರ ಅಕಾಲಿಕ ಮೃತ್ಯು ಆಗುತ್ತದೆ ಯಮಧರ್ಮ ರಾಜನು ಅವರ ಬಳಿ ಬಂದು ಕರೆದುಕೊಂಡು ಯಮಲೋಕಕ್ಕೆ ಹೋಗಿ ಯಮರಾಜನ ಮುಂದೆ ನಿಲ್ಲಿಸುತ್ತಾರೆ.

ಚಿಕ್ಕ ಮಗನು ಯಮಧರ್ಮನ ಬಳಿ ನಾನು ಏನು ಪಾಪ ಮಾಡಿದ್ದೆ ನಾನು ಒಳ್ಳೆಯ ವ್ಯಕ್ತಿಯಾಗಿದ್ದೆ ಆದರೂ ಈ ಸ್ಥಿತಿ ನನಗೆ ಏಕೆ ಬಂತು ಎಂದು ಕೇಳುತ್ತಾನೆ. ಆಗ ಯಮರಾಜನು ಮೂರ್ಖನೆ ನಿನ್ನ ಕೆಟ್ಟ ಹವ್ಯಾಸದಿಂದ ನಿನಗೆ ಈ ಸ್ಥಿತಿ ಬಂದಿದೆ. ಶಾಸ್ತ್ರದ ಪ್ರಕಾರ ಮನುಷ್ಯನು ತನ್ನ 5 ಅಂಗಗಳನ್ನು ಸ್ವಚ್ಛಗೊಳಿಸಿದ ನಂತರ ಊಟವನ್ನು ಮಾಡಬೇಕು, ತಮ್ಮ ಎರಡು ಕಾಲುಗಳನ್ನು, ಎರಡು ಕೈಗಳನ್ನು ತೊಳೆದುಕೊಂಡು ಊಟವನ್ನು ಮಾಡಬೇಕು ಇದರಿಂದ ಮನುಷ್ಯನ ಶರೀರದಿಂದ ರೋಗಗಳು ದೂರವಿರುತ್ತದೆ,

ನೀನು ಸ್ನಾನ ಮಾಡದೆ ಊಟ ಮಾಡಿರುವೆ. ಊಟ ಮಾಡುವ ಮೊದಲು ಎಲ್ಲರೂ ದೇವರಿಗೆ ಧನ್ಯವಾದಗಳನ್ನು ತಿಳಿಸಬೇಕು ಹಾಗೂ ಜಗತ್ತಿನ ಎಲ್ಲಾ ಜೀವಿಗಳಿಗೆ ಊಟ ಸಿಗಲಿ ಎಂದು ಪ್ರಾರ್ಥಿಸಬೇಕು, ಅನ್ನ ದೇವರಿಗೆ ನಮಸ್ಕರಿಸಿ ಊಟವನ್ನು ಮಾಡಿದರೆ ಪಾಪ ಬರುವುದಿಲ್ಲ ಇದ್ಯಾವುದನ್ನು ನೀನು ಮಾಡಿಲ್ಲ ಎಂದು ಯಮರಾಜನು ಹೇಳುತ್ತಾನೆ. ನೆಲದ ಮೇಲೆ ಕುಳಿತುಕೊಂಡು ಊಟ ಮಾಡಬೇಕು ಹಾಸಿಗೆಯ ಮೇಲೆ ಕುಳಿತು ಊಟ ಮಾಡಿದರೆ ಶರೀರ ರೋಗಕ್ಕೆ ಬಲಿಯಾಗುತ್ತದೆ ಹಾಗೂ ಆಯಸ್ಸು ಕಡಿಮೆಯಾಗುತ್ತದೆ ನೀನು ಹಾಸಿಗೆ ಮೇಲೆ ಕುಳಿತುಕೊಂಡು ಊಟ ಮಾಡುತ್ತಿದ್ದೆ ಅದಕ್ಕೆ ನಿನಗೆ ಈ ಸ್ಥಿತಿ ಬಂದಿದೆ ಎನ್ನುತ್ತಾರೆ ಯಮರಾಜನು.

ಮನೆಯ ಹೊಸ್ತಿಲ ಮೇಲೆ ಕುಳಿತುಕೊಂಡು ಸಹ ಊಟ ಮಾಡಬಾರದು ಹೊಸ್ತಿಲಿನ ಮೇಲೆ ಕುಳಿತುಕೊಂಡು ಊಟ ಮಾಡಿದರೆ ಧನ ಸಂಪತ್ತು ನಷ್ಟವಾಗುತ್ತದೆ. ಆಹಾರದ ತಟ್ಟೆಯ ಮೇಲೆ ದಾಟಿ ಹೋದರೆ ಅಥವಾ ತಟ್ಟೆಗೆ ಕಾಲಿನಿಂದ ಸ್ಪರ್ಶ ಮಾಡಿದರೆ ತಟ್ಟೆಯಲ್ಲಿರುವ ಆಹಾರವನ್ನು ಸೇವಿಸಿದರೆ ಅಶುದ್ಧವಾಗುತ್ತದೆ. ಆಹಾರದಲ್ಲಿ ಕೂದಲು ಕಂಡು ಬಂದರೆ, ಅಂತಹ ಆಹಾರ ತ್ಯಾಜ್ಯವಾಗುತ್ತದೆ ಅದನ್ನು ಸೇವಿಸಬಾರದು. ಬೇರೆಯವರಿಗೆ ನೀಡಿದ ಆಹಾರವನ್ನು ಸೇವಿಸಬಾರದು ಒಂದು ವೇಳೆ ಬೇರೆಯವರಿಗೆ ನೀಡಿದ ಆಹಾರವನ್ನು ಸೇವಿಸಿದರೆ ತಾಯಿ ಅನ್ನಪೂರ್ಣೇಶ್ವರಿ ಸಿಟ್ಟಾಗುತ್ತಾಳೆ.

ಹಗಲಿನಲ್ಲಿ ಉತ್ತರ ದಿಕ್ಕಿಗೆ ಮುಖ ಮಾಡಿ ಮಲಮೂತ್ರ ವಿಸರ್ಜನೆ ಮಾಡಬೇಕು ರಾತ್ರಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಮಲಮೂತ್ರ ವಿಸರ್ಜನೆ ಮಾಡಬೇಕು. ಮರ, ನದಿ, ಗೋಶಾಲೆ, ಮಂದಿರ, ಸ್ಮಶಾನದ ಹತ್ತಿರ ಮಲಮೂತ್ರ ವಿಸರ್ಜನೆ ಮಾಡಬಾರದು. ಮನುಷ್ಯರು ನಿರ್ವಸ್ತ್ರವಾಗಿ ಸ್ನಾನ ಮಾಡಬಾರದು ಈ ಎಲ್ಲಾ ತಪ್ಪುಗಳನ್ನು ನೀನು ಮಾಡಿರುವೆ ಹೀಗಾಗಿ ನೀನು ಈ ಸ್ಥಿತಿಗೆ ಬಂದಿರುವೆ ಎಂದು ಯಮಧರ್ಮರಾಜರು ಹೇಳುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: