ಈ 8 ಬಗೆಯ ಸಸ್ಯಗಳು ಮನೆಯಲ್ಲಿ ನೆಮ್ಮದಿ, ಧನ ಸಂಪತ್ತು ವೃದ್ದಿಯಾಗುವಂತೆ ಮಾಡುವುದು

0

ನಮ್ಮ ಸುತ್ತ ಮುತ್ತಲಿನ ವಾತಾವರಣದಲ್ಲಿರುವ ವೈವಿಧ್ಯಮಯ ಗಿಡ ಮರಗಳು ಒಂದೊಂದು ವಿಶೇಷತೆಯನ್ನು ಹೊಂದಿರುತ್ತವೆ. ಕೆಲವು ಗಿಡಗಳನ್ನು ಮನೆಯಲ್ಲಿ ಅಥವಾ ಮನೆಯ ಸುತ್ತ ಮುತ್ತ ನೆಡುವುದರಿಂದ ಆರೋಗ್ಯದ ದೃಷ್ಟಿಯಿಂದ, ಹಣಕಾಸಿನ ದೃಷ್ಟಿಯಿಂದ ಒಳ್ಳೆಯದಾಗುತ್ತದೆ. ಕೆಲವು ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಮನೆಯಲ್ಲಿ ನೆಮ್ಮದಿ, ಧನ ಸಂಪತ್ತು ವೃದ್ದಿಯಾಗುತ್ತದೆ. ಆ 8 ಗಿಡಗಳು ಯಾವುವು ಎಂದು ಈ ಲೇಖನದ ಮೂಲಕ ತಿಳಿಯೋಣ.

ನಮ್ಮ ಮನೆಯ ಸುತ್ತ ಗಿಡಗಳನ್ನು ಬೆಳೆಸುವುದರಿಂದ ನಮಗೆ ಹಲವು ರೀತಿಯಲ್ಲಿ ಪ್ರಯೋಜನಗಳಿವೆ. ಮರಗಳು ನಮಗೆ ಶುದ್ಧವಾದ ಆಕ್ಸಿಜನ್ ಕೊಡುತ್ತವೆ. ಕೆಲವು ಸಸ್ಯಗಳು ನಮ್ಮ ಕಷ್ಟಗಳಿಗೆ ಸಹಾಯ ಮಾಡುತ್ತವೆ. ಹಿಂದೂ ಧರ್ಮದಲ್ಲಿ ಸಸ್ಯಗಳಿಗೆ ಪೂಜೆಯನ್ನು ಮಾಡುತ್ತೇವೆ. ನಮ್ಮ ಜೀವನದಲ್ಲಿ ಹಣದ ಸಮಸ್ಯೆ ಕಂಡುಬಂದರೆ ನಕಾರಾತ್ಮಕ ಶಕ್ತಿ ಇದ್ದರೆ ಇಂತಹ ಸಮಸ್ಯೆಗಳಿಂದ ಸಸ್ಯಗಳು ನಮ್ಮನ್ನು ರಕ್ಷಣೆ ಮಾಡುತ್ತವೆ ಆದ್ದರಿಂದ ಮನೆಯ ಸುತ್ತ ಸಸ್ಯಗಳನ್ನು ನೆಡುವುದರಿಂದ ಪ್ರಯೋಜನವಿದೆ. ಶ್ರೀಮಂತರು ಸಹ ಗಿಡಗಳನ್ನು ಮನೆಯ ಒಳಗೆ ಅಥವಾ ಹೊರಗೆ ನೆಡುತ್ತಾರೆ, ಈ ಸಸ್ಯಗಳಿಂದಲೆ ಅವರಿಗೆ ಜೀವನದಲ್ಲಿ ಯಶಸ್ಸು ಸಿಕ್ಕಿರುತ್ತದೆ. ಕೆಲವು ಗಿಡಗಳು ಮನೆಯ ಸುತ್ತ ನೆಟ್ಟರೆ ಮನೆಗೆ ಒಳ್ಳೆಯದಾಗುತ್ತದೆ.

ಮೊದಲನೆ ಗಿಡ ಅಶೋಕ ಮರ ಈ ಮರವನ್ನು ಮನೆಯ ಹತ್ತಿರ ನೆಡುವುದರಿಂದ ಮನೆಗೆ ಶೋಭೆ. ಕಷ್ಟಗಳನ್ನು ದೂರ ಮಾಡುವಲ್ಲಿ ಸಹಾಯ ಮಾಡುತ್ತದೆ. ಮನೆಯಲ್ಲಿ ದುಃಖವಿದ್ದರೆ ಈ ಗಿಡ ಹೀರಿಕೊಳ್ಳುವ ಕೆಲಸ ಮಾಡುತ್ತದೆ. ಎರಡನೆ ಸಸ್ಯ ಮಣಿ ಪ್ಲಾಂಟ್ ಈ ಗಿಡವನ್ನು ಮನೆಯ ಒಳಗೆ ಪೋಟ್ ನಲ್ಲಿ ಇಟ್ಟುಕೊಂಡರೆ ಮನೆಯಲ್ಲಿ ಧನ ಸಂಪತ್ತು ವೃದ್ದಿಯಾಗುವಂತೆ ಮಾಡುತ್ತದೆ. ಮೂರನೇ ಗಿಡ ತುಜಾ ಪ್ಲಾಂಟ್ ಈ ಗಿಡವನ್ನು ಮನೆಯ ಮುಂದೆ ನೆಡುವುದರಿಂದ ಮನೆಯ ವಾತಾವರಣ ಶುದ್ಧ ವಾಗಿರುತ್ತದೆ. ಕೆಟ್ಟ ಶಕ್ತಿಯಿಂದ ಕುಟುಂಬವನ್ನು ರಕ್ಷಿಸುವ ಕೆಲಸವನ್ನು ಈ ಗಿಡ ಮಾಡುತ್ತದೆ ಅಲ್ಲದೆ ಧನ ಸಂಪತ್ತನ್ನು ತರುತ್ತದೆ.

ನಾಲ್ಕನೆ ಗಿಡ ಕುಬೇರ ಕಣ ಈ ಸಸ್ಯ ಮನೆಯಲ್ಲಿ ಯಾವಾಗಲೂ ಧನ ಸಂಪತ್ತು ವೃದ್ದಿಯಾಗುವಂತೆ ಮಾಡುತ್ತದೆ. ಈ ಸಸ್ಯ ತನ್ನ ಆಕಾರವನ್ನು ಹೆಚ್ಚಿಸುತ್ತಾ ಹೋಗುತ್ತದೆ ಈ ಗಿಡದಿಂದ ಧನ ಸಂಪತ್ತು ಹೆಚ್ಚಾಗುತ್ತದೆ. ಐದನೇ ಗಿಡ ಕಬ್ಬು ಅರಿಶಿಣ ಮನೆಯಲ್ಲಿ ಕಬ್ಬು ಅರಿಶಿಣ ಇದ್ದರೆ ತಾಯಿ ಲಕ್ಷ್ಮೀ ದೇವಿ ಚುಂಬಕದ ರೀತಿ ಕೆಲಸ ಮಾಡುತ್ತದೆ ಇದರಿಂದ ಆಕರ್ಷಣೆಯಾಗುತ್ತ ಬರುತ್ತದೆ. ಮನೆಯಲ್ಲಿ ಕಬ್ಬು ಅರಿಶಿಣ ಗಿಡವನ್ನು ಬೆಳೆಸುವುದರಿಂದ ಧನ ಸಂಪತ್ತು ವೃದ್ದಿಯಾಗುತ್ತದೆ. ಏಳನೆ ಗಿಡ ವಿಷ್ಣು ಅಥವಾ ಲಕ್ಷ್ಮೀ ಕಮಲವಾಗಿದೆ. ವಿಷ್ಣು ಕಮಲವನ್ನು ಮನೆಯಲ್ಲಿ ನೆಟ್ಟರೆ ಭಗವಂತ ವಿಷ್ಣು ಹಾಗೂ ಲಕ್ಷ್ಮೀ ದೇವಿಯು ಆಶೀರ್ವಾದ ಒಟ್ಟಿಗೆ ಸಿಗುತ್ತದೆ. ಭಗವಂತ ವಿಷ್ಣು ಹಾಗೂ ತಾಯಿ ಲಕ್ಷ್ಮೀ ದೇವಿಯ ಆಶೀರ್ವಾದ ಇದ್ದರೆ ಜೀವನದಲ್ಲಿ ಯಾವುದೇ ವಿಷಯಕ್ಕೂ ಕೊರತೆ ಇರುವುದಿಲ್ಲ.

ನಾಗದೂರ್ಣ ಸಸ್ಯ ಈ ಸಸ್ಯ ಸರ್ಪಗಳಿಂದ ಕಾಪಾಡುತ್ತದೆ. ಈ ಗಿಡವನ್ನು ಮನೆಯ ಸುತ್ತ ನೆಟ್ಟರೆ ಕೇವಲ ಸರ್ಪ ಮಾತ್ರವಲ್ಲದೆ ಹಲವು ವಿಷ ಕೀಟಗಳಿಂದ ರಕ್ಷಿಸುತ್ತದೆ. ಕ್ಷಮಿ ಸಸ್ಯ ಈ ಸಸ್ಯದ ಎಲೆಯನ್ನು ತಾಯಿ ದುರ್ಗಾ ಮಾತಾ ಅಥವಾ ತಾಯಿ ಲಕ್ಷ್ಮೀ ದೇವಿಗೆ ಅರ್ಪಿಸಿದರೆ ನಿಮ್ಮ ಬೇಡಿಕೆಗಳು ಈಡೇರುತ್ತವೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಮನೆಗೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಗಿಡಗಳನ್ನು ಬೆಳೆಸಿ ನೀವು ಬೆಳೆಯಿರಿ.

Leave A Reply

Your email address will not be published.

error: Content is protected !!
Footer code: