ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಜೀವನದಲ್ಲಿ ಏಳಿಗೆ ಆಗೋದಿಲ್ಲ

0

ಮಲಗುವ ದಿಕ್ಕಿನ ಬಗ್ಗೆ ಹಲವಾರು ಜನರು ಹಲವಾರು ರೀತಿಯಲ್ಲಿ ಹೇಳುತ್ತಾರೆ ಈ ದಿಕ್ಕಿನಲ್ಲಿ ಮಲಗಿದರೆ ಹೀಗಾಗುತ್ತದೆ ಆ ದಿಕ್ಕಿನಲ್ಲಿ ಮಲಗಿದರೆ ಹಾಗಾಗುತ್ತದೆ ಎಂದು, ಇದರಿಂದ ಸಾಕಷ್ಟು ಜನರು ಗೊಂದಲಕ್ಕೆ ಒಳಗಾಗಿರುತ್ತಾರೆ ಯಾವ ದಿಕ್ಕಿನಲ್ಲಿ ತಲೆ ಹಾಕಿ ಮಲಗಬೇಕು ಎಂದು, ಒಬ್ಬೊಬ್ಬರು ಒಂದೊಂದು ದಿಕ್ಕನ್ನು ಹೇಳುತ್ತಾರೆ ಇದರಿಂದ ಬಹಳ ಗೊಂದಲವಾಗಿರುತ್ತದೆ ಇಂತಹ ಗೊಂದಲಗಳಿಗೆ ಈ ಲೇಖನದ ಮೂಲಕ ಉತ್ತರ ಕೊಡಲಾಗುತ್ತದೆ ಯಾವ ದಿಕ್ಕಿನಲ್ಲಿ ತಲೆ ಹಾಕಿ ಮಲಗಬೇಕು ಮತ್ತು ಯಾವ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ತಲೆಹಾಕಿ ಮಲಗಬಾರದು ಎಂಬುದನ್ನು ಈ ಲೇಖನವನ್ನು ಓದಿ ತಿಳಿದುಕೊಳ್ಳಿ,

ಯಾವ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದರೆ ತೊಂದರೆಗಳು ಕಡಿಮೆಯಾಗುತ್ತವೆ ಅದೃಷ್ಟವೂ ಲಭಿಸುತ್ತದೆ ಮತ್ತು ಯಾವ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದರೆ ಸಮಸ್ಯೆಗಳು ಹೆಚ್ಚಾಗುತ್ತವೆ ಇಂದು ನೋಡುವುದಾದರೆ, ಮಾರ್ಕಂಡೇಯನ ಪುರಾಣದ ಪ್ರಕಾರ ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಈ ಎರಡು ದಿಕ್ಕುಗಳಿಗೆ ತಲೆಹಾಕಿ ಮಲಗಬಾರದು ಈ ವಿಷಯದ ಬಗ್ಗೆ ಬಹಳ ವಿಶೇಷವಾಗಿ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಯಾವ ಎರಡು ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಒಳ್ಳೆಯದಾಗುತ್ತದೆ ಎಂದರೆ ನೀವು ಮಲಗುವಾಗ ಯಾವಾಗಲೂ ತಲೆಯನ್ನು ಅಗಸ್ಯನ ದಿಕ್ಕಿಗೆ ಹಾಕಿ ಮಲಗಬೇಕು, ಅಗಸ್ಯನ ದಿಕ್ಕು ಎಂದರೆ ದಕ್ಷಿಣ ದಿಕ್ಕು, ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಕು

ಹೀಗೆ ಮಲಗುವುದರಿಂದ ವಿಶೇಷವಾದ ಫಲಗಳು ನಿಮಗೆ ದೊರೆಯುತ್ತವೆ. ಇದರ ಜೊತೆಗೆ ಇನ್ನೊಂದು ದಿಕ್ಕು ಯಾವುದೆಂದರೆ ಪೂರ್ವ ದಿಕ್ಕು ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಹೀಗೆ ಮಲಗಿದರೆ ಬಹಳ ಒಳ್ಳೆಯದು, ಮಲಗುವಾಗ ದಕ್ಷಿಣ ಮತ್ತು ಪೂರ್ವಕ್ಕೆ ತಲೆ ಹಾಕಿ ಮಲಗುವುದರಿಂದ ಸುಖ ಪ್ರಾಪ್ತಿಯಾಗುತ್ತದೆ, ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಜ್ಞಾಪಕ ಶಕ್ತಿಯೂ ವೃದ್ಧಿಯಾಗುತ್ತದೆ ಯಾರು ದಕ್ಷಿಣ ದಿಕ್ಕಿಗೆ ತಲೆಯನ್ನು ಹಾಕಿ ಮಲಗುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೋ ಅವರಿಗೆ ಬುದ್ಧಿಶಕ್ತಿಯು ಹೆಚ್ಚಾಗಿರುತ್ತದೆ

ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಇನ್ನು ಪೂರ್ವಕ್ಕೆ ತಲೆ ಹಾಕಿ ಮಲಗಿದರೆ ಸಂಪತ್ತು ವೃದ್ಧಿಯಾಗುತ್ತದೆ, ನೀವು ಮಲಗುವ ದಿಕ್ಕು ತಪ್ಪಾಗಿದ್ದರೆ ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಸುಖ-ಸಂಪತ್ತು ನಿಮ್ಮ ಬಳಿ ಉಳಿಯುವುದಿಲ್ಲ ಆದ್ದರಿಂದ ನೀವು ಮಲಗುವ ದಿಕ್ಕಿನ ಮೇಲೆ ನಿಮಗೆ ಅದೃಷ್ಟಗಳು ಉಂಟಾಗುತ್ತದೆ. ಆದ್ದರಿಂದ ಈ ಎರಡು ದಿಕ್ಕುಗಳಿಗೆ ತಲೆಯನ್ನು ಹಾಕಿ ಮಲಗುವುದರಿಂದ ಜ್ಞಾಪಕಶಕ್ತಿ ಬುದ್ಧಿಶಕ್ತಿಯು ಹೆಚ್ಚಾಗುತ್ತದೆ ಮತ್ತು ಸುಖ ಸಂಪತ್ತು ವೃದ್ಧಿಯಾಗುತ್ತದೆ.

ಇದೇ ಮಾರ್ಕಂಡೇಯನ ಪುರಾಣದ ಪ್ರಕಾರ ಯಾವುದೇ ಕಾರಣಕ್ಕೂ ಎರಡು ದಿಕ್ಕುಗಳಿಗೆ ತಲೆಯನ್ನು ಹಾಕಿ ಮಲಗಬಾರದು ಅದೇ ಉತ್ತರ ಮತ್ತು ಪಶ್ಚಿಮ ದಿಕ್ಕು, ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು ಎಲ್ಲಾ ರೀತಿಯ ಕಷ್ಟಗಳು ಒಂದರ ಮೇಲೊಂದಂತೆ ಬೆಂಬಿಡದೆ ಕಾಡುತ್ತವೆ, ಜ್ಞಾಪಕಶಕ್ತಿಯು ಕುಂದುತ್ತದೆ, ನಿಮ್ಮ ಬುದ್ಧಿಶಕ್ತಿಯೇ ನಿಮ್ಮ ಮಾತನ್ನು ಕೇಳುವುದಿಲ್ಲ, ಅನಾವಶ್ಯಕವಾಗಿ ಕಲಹಗಳು ಉಂಟಾಗುತ್ತದೆ, ಕಷ್ಟಗಳು ಹೆಚ್ಚಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು. ಇನ್ನು ಎರಡನೆಯದಾಗಿ ಪಶ್ಚಿಮ ದಿಕ್ಕು ಈ ದಿಕ್ಕಿಗೂ ಸಹಾ ಯಾವುದೇ ಕಾರಣಕ್ಕೂ ತಲೆಹಾಕಿ ಮಲಗಬಾರದು,

ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದರೆ ಸಾಲದ ಬಾಧೆ ಹೆಚ್ಚಾಗುತ್ತದೆ, ಸಾಲದ ಮೇಲೆ ಸಾಲುಗಳು ಬರುತ್ತವೆ, ಸಾಲದ ಸುಳಿಯಿಂದ ನೀವು ಹೊರಬರಲು ಸಾಧ್ಯವೇ ಆಗುವುದಿಲ್ಲ ಆದ್ದರಿಂದ ಪಶ್ಚಿಮ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆಯನ್ನು ಹಾಕಿ ಮಲಗಬಾರದು. ಆದ್ದರಿಂದ ಈ ಎರಡು ದಿಕ್ಕುಗಳಲ್ಲಿ ತಲೆಯನ್ನು ಹಾಕಿ ಮಲಗಬಾರದು ಎಂದು ಹೇಳಲಾಗುತ್ತದೆ. ಮಾರ್ಕಂಡೇಯನ ಪುರಾಣದಲ್ಲಿ ಈ ವಿಷಯಗಳನ್ನು ಬಹಳ ವಿಶೇಷವಾಗಿ ಮತ್ತು ವಿವರವಾಗಿ ತಿಳಿಸಲಾಗಿದೆ, ಇದು ನಮ್ಮ ಹಿಂದೂ ಸಮುದಾಯದ ಆಚಾರ ವಿಚಾರಗಳಿಂದ ಬಂದಂತಹ ನಿಯಮಗಳು ಆಗಿರುವುದರಿಂದ ಮಲಗುವ ವಿಚಾರದಲ್ಲಿ ತಪ್ಪದೇ ಈ ನಿಯಮವನ್ನು ಪಾಲಿಸಬೇಕು, ಯಾವುದೇ ಕಾರಣಕ್ಕೂ ಉತ್ತರ ಮತ್ತು ಪಶ್ಚಿಮ ದಿಕ್ಕಿಗೆ ತಲೆಹಾಕಿ ಮಲಗಬಾರದು ಇದು ಒಳ್ಳೆಯದಲ್ಲ

ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ಹಾಗೂ ದಕ್ಷಿಣ ಮತ್ತು ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಉತ್ತಮವಾದ ಫಲಗಳು ಲಭಿಸುತ್ತದೆ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ ಜ್ಞಾನ ವೃದ್ಧಿಯಾಗುತ್ತದೆ ಸಂಪತ್ತುಗಳು ವೃದ್ಧಿ ಆಗುತ್ತದೆ ಅದೃಷ್ಟವು ನಿಮಗೆ ಲಭಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಹ ನೀವೇನಾದರೂ ಮಲಗುವ ದಿಕ್ಕುಗಳಲ್ಲಿ ತಪ್ಪನ್ನು ಮಾಡುತ್ತಿದ್ದರೆ ಅದನ್ನು ಇಂದಿಗೆ ನಿಲ್ಲಿಸಿ ನಾವು ಹೇಳಿರುವ ಈ ಎರಡು ದಿಕ್ಕುಗಳಲ್ಲಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ ಇದರಿಂದ ನಿಮ್ಮ ಜೀವನದಲ್ಲಿ ಉತ್ತಮ ಸುಧಾರಣೆಗಳು ಉತ್ತಮ ಬದಲಾವಣೆಗಳು ಕಂಡುಬರುತ್ತವೆ.

Leave A Reply

Your email address will not be published.

error: Content is protected !!
Footer code: