ಇಂದಿನ ದಿನಗಳಲ್ಲಿ ಎಲ್ಲರೂ ರೆಡಿಮೇಡ್ ಆಹಾರಕ್ಕೆ ಮೊರೆ ಹೋಗುತ್ತಿದ್ದೇವೆ ಜೊತೆಗೆ ಒತ್ತಡದ ಜೀವನ ಶೈಲಿಯನ್ನು ಅನುಸರಿಸುತ್ತಿದ್ದೇವೆ ಈ ಕಾರಣದಿಂದ ಬೇಗನೆ ಸಣ್ಣ ವಯಸ್ಸಿಗೆ ಸೊಂಟ, ಮಂಡಿ, ಕೈ ಕಾಲು ನೋವು ಕಾಣಿಸಿಕೊಳ್ಳುತ್ತದೆ ಇದರಿಂದ ಪ್ರತಿದಿನ ನೋವನ್ನು ಅನುಭವಿಸಬೇಕು. ಮಂಡಿ, ಸೊಂಟ ನೋವಿಗೆ ಮನೆ ಮದ್ದಿದೆ, ಈ ಮನೆ ಮದ್ದನ್ನು ಹೇಗೆ ತಯಾರಿಸುವುದು ಹಾಗೂ ಅದಕ್ಕೆ ಬೇಕಾಗುವ ಸಾಮಗ್ರಿಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಇಂದಿನ ಆಧುನಿಕ ದಿನಗಳಲ್ಲಿ ಚಿಕ್ಕವರಿಗೂ ಮಂಡಿ ನೋವು, ಸೊಂಟ ನೋವು, ಕೈ ಕಾಲು ನೋವು ಬರುತ್ತದೆ. ಎದ್ದರೆ ಕುಳಿತುಕೊಳ್ಳಲು ಆಗುವುದಿಲ್ಲ, ಕುಳಿತರೆ ಏಳಲು ಆಗುವುದಿಲ್ಲ ಇದಕ್ಕೆಲ್ಲ ನಾವು ಅನುಸರಿಸುವ ಆಹಾರ ಕ್ರಮ, ಜೀವನ ಶೈಲಿ ಕಾರಣವಾಗಿದೆ. ಕ್ಯಾಲ್ಶಿಯಂ ಕೊರತೆಯಿಂದಾಗಿ ಮಂಡಿ, ಸೊಂಟ ನೋವು ಬರುತ್ತದೆ. ಕೆಲವರಿಗೆ ವೇಟ್ ಜಾಸ್ತಿ ಇರುವುದರಿಂದ ಮಂಡಿ ನೋವು ಬರುತ್ತದೆ. ವಯಸ್ಸಾಗುತ್ತಿದ್ದಂತೆ ಮೂಳೆಗಳಲ್ಲಿ ಸವಕಳಿ ಕಂಡುಬರುತ್ತದೆ. ಹೆಚ್ಚಿನ ಜನರಿಗೆ ಚಳಿಗಾಲದ ಸಮಯದಲ್ಲಿ ಸೊಂಟ ನೋವು, ಮಂಡಿ ನೋವು ಕಾಣಿಸುತ್ತದೆ. ಕೆಲವರು ಮಂಡಿ ನೋವು, ಸೊಂಟ ನೋವಿಗೆ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಾರೆ ಅತಿಯಾಗಿ ಟ್ಯಾಬ್ಲೆಟ್ ತೆಗೆದುಕೊಂಡರೆ ಆರೋಗ್ಯಕ್ಕೆ ಒಳ್ಳೆಯದಲ್ಲ.
ಮಂಡಿ, ಸೊಂಟ, ಕೈ ಕಾಲು ನೋವಿಗೆ ಮನೆ ಮದ್ದಿದೆ ಇದನ್ನು ಅಪ್ಲೈ ಮಾಡಿದರೆ ಕಡಿಮೆ ಸಮಯದಲ್ಲಿ ನೋವು ನಿವಾರಣೆಯಾಗುತ್ತದೆ. ಒಂದು ಲೋಟ ಹಾಲಿಗೆ ಒಂದು ಎಸಳು ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಹಾಕಿ ಕುದಿಸಿ ಕುಡಿಯುವುದರಿಂದ ಮಂಡಿ, ಸೊಂಟ, ಕೈ ಕಾಲು ನೋವನ್ನು ನಿವಾರಣೆ ಮಾಡಿಕೊಳ್ಳಬಹುದು. ಪದೆ ಪದೆ ಶೀತ ಆಗುತ್ತಿದ್ದರೆ ಅಸಿಡಿಟಿ ಆಗುತ್ತಿದ್ದರೆ ಬೆಳಗ್ಗೆ ಬೆಳ್ಳುಳ್ಳಿ ತಿನ್ನುವುದರಿಂದ ಶೀತ, ಅಸಿಡಿಟಿ ಕಡಿಮೆ ಆಗುತ್ತದೆ. ಪ್ರತಿದಿನ ಬೆಳಗ್ಗೆ 1-2 ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ, ತೂಕ, ಬೊಜ್ಜನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಎರಡು ಗಡ್ಡೆ ಬೆಳ್ಳುಳ್ಳಿ, 50 ಗ್ರಾಂ ಸಾಸಿವೆ ಎಣ್ಣೆ, ಎರಡು ಸ್ಪೂನ್ ಅಜವಾನ. ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆಯಬೇಕು ಸಾಸಿವೆ ಎಣ್ಣೆಗೆ ಬೆಳ್ಳುಳ್ಳಿ, ಅಜವಾನ ಹಾಕಿ ಸಣ್ಣ ಉರಿಯಲ್ಲಿ 2 ನಿಮಿಷ ಬಿಸಿ ಮಾಡಬೇಕು ತಣ್ಣಗಾದ ನಂತರ ಗಾಜಿನ ಬಾಟಲ್ ಅಥವಾ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ಹಾಕಿಕೊಳ್ಳಬೇಕು. ಸಾಸಿವೆ ಎಣ್ಣೆಗೆ ನೋವನ್ನು ಶಮನ ಮಾಡುವ ಶಕ್ತಿಯಿದೆ. ಅಜವಾನ ನೋವನ್ನು ಬೇಗ ಕಡಿಮೆ ಮಾಡುತ್ತದೆ. ನೋವಿರುವ ಜಾಗಕ್ಕೆ ಎಣ್ಣೆಯನ್ನು ಅಪ್ಲೈ ಮಾಡಿ ಲೈಟ್ ಆಗಿ ಮಸಾಜ್ ಮಾಡಬೇಕು ಇದರಿಂದ ನೋವು ಕಡಿಮೆಯಾಗುತ್ತದೆ. ಆದಷ್ಟು ಮೆಟ್ಟಿಲು ಹತ್ತುವುದನ್ನು ಕಡಿಮೆ ಮಾಡಬೇಕು, ಖರಿದ ಆಹಾರವನ್ನು ಸೇವಿಸಬಾರದು, ಪೇನ್ ಕ್ಯೂಲರ್ ಮಾತ್ರೆಯನ್ನು ತೆಗೆದುಕೊಳ್ಳಬಾರದು. ಈ ಮೇಲಿನ ಅಂಶಗಳನ್ನು ಅನುಸರಿಸಿದರೆ ಖಂಡಿತವಾಗಿಯೂ ಸೊಂಟ, ಮಂಡಿ, ಕೈ ಕಾಲು ನೋವು ಬರುವುದಿಲ್ಲ.