ಬಿಪಿ ಸಮಸ್ಯೆಯನ್ನು ಓಡಿಸುವ ಸಿಂಪಲ್ ಮನೆ ಔಷಧಿ ಇಲ್ಲಿದೆ

0

ಬಿಪಿ, ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಒಬ್ಬರಾದರೂ ಬಿಪಿ, ರಕ್ತದೊತ್ತಡ ಇರುವವರು ಕಂಡುಬರುತ್ತಾರೆ. ಬಿಪಿಯಿಂದ ಹೃದಯ ಖಾಯಿಲೆ, ಸ್ಟ್ರೋಕ್ ಇತ್ಯಾದಿ ಸಮಸ್ಯೆಗಳು ಬರುವ ಸಂಭವವಿದೆ. ಬಿಪಿಯನ್ನು ನಿಯಂತ್ರಣದಲ್ಲಿಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ನಾವು ಮನಸ್ಸು ಮಾಡಿದರೆ ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಬಿಪಿ ನಮ್ಮ ಹತ್ತಿರ ಸುಳಿಯದಂತೆ ಮಾಡಬಹುದು. ಬಿಪಿ ನಾವು ಅನುಸರಿಸುವ ಕೆಲವು ಕ್ರಮಗಳಿಂದ ಬರುತ್ತದೆ ಅಥವಾ ಹೆಚ್ಚಾಗುತ್ತದೆ. ನಾವು ತಿನ್ನುವ ಆಹಾರ ಪದ್ಧತಿ ಸರಿಯಾಗಿಲ್ಲದಿದ್ದರೆ, ಯಾವುದಾದರೂ ಚಿಂತೆ ಇದ್ದರೆ, ಬಹಳ ಬೇಗ ಕೋಪ ಮಾಡಿಕೊಂಡರೆ ಬಿಪಿ ಹೆಚ್ಚಾಗುತ್ತದೆ. ದಿನನಿತ್ಯ ಸೇವಿಸುವ ಆಹಾರ ಜಂಕ್ ಪುಡ್, ಖರಿದ ಆಹಾರ ಆಗಿದ್ದರೆ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಜಾಸ್ತಿ ಆಗಿದ್ದರೆ ಬಿಪಿ ಬರುವ ಸಾಧ್ಯತೆಗಳಿರುತ್ತದೆ. ಮಿತಿಮೀರಿ ಸ್ಮೋಕಿಂಗ್, ಡ್ರಿಂಕ್ಸ್ ಮಾಡುತ್ತಿದ್ದರೆ ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಬಿಪಿ ನಿಯಂತ್ರಣದಲ್ಲಿ ಇರುವುದಿಲ್ಲ. ಕೆಲವು ಆಹಾರ ಕ್ರಮಗಳಿಂದ ಬಿಪಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಪ್ರತಿದಿನ ಎರಡು ಬಾಳೆಹಣ್ಣು ತಿನ್ನಬೇಕು, ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶವಿದ್ದು ಇದು ನಮ್ಮ ಬಿಪಿಯನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.

ಬೀಟ್ರೂಟ್, ಕ್ಯಾರೇಟ್, ಆಪಲ್ ಜ್ಯೂಸ್ ಕುಡಿಯುವುದರಿಂದ ಬಿಪಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಪ್ರತಿದಿನ ಬೆಳಗ್ಗೆ ಈ ಜ್ಯೂಸ್ ಕುಡಿಯಬೇಕು, ರಕ್ತನಾಳಗಳಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವಂತೆ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ನೈಟ್ರಿಕ್ ಆಸಿಡ್ ಇದ್ದು ಅದು ನಮ್ಮ ದೇಹದ ಮಾಂಸಖಂಡಗಳನ್ನು ರಿಲ್ಯಾಕ್ಸ್ ಮಾಡುತ್ತದೆ, ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವಂತೆ ಮಾಡುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಎರಡು ಬೆಳ್ಳುಳ್ಳಿ ಎಸಳನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಮಿಕ್ಸ್ ಮಾಡಿ 5 ನಿಮಿಷ ಬಿಟ್ಟು ಅರ್ಧ ಅಥವಾ ಒಂದು ನಿಂಬೆ ಹಿಂಡಿ ಕುಡಿದರೆ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ ಅಲ್ಲದೆ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ಅದನ್ನು ಕರಗಿಸುವ ಶಕ್ತಿ ಬೆಳ್ಳುಳ್ಳಿ ನೀರಿಗಿದೆ.

ಅಗಸೆ ಬೀಜವನ್ನು ಪ್ರತಿದಿನ ಸೇವಿಸಬೇಕು ಅಗಸೆ ಬೀಜದಲ್ಲಿ ಒಮೆಗಾ ತ್ರಿ ಫ್ಯಾಟಿ ಆಸಿಡ್ ಇದೆ ಅದು ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ 2-3 ಚಮಚ ಅಗಸೆ ಬೀಜ ಸೇವಿಸಬೇಕು. ಅಗಸೆ ಬೀಜವನ್ನು ಪುಡಿ ಮಾಡಿ ಸೇವಿಸಬಹುದು. ಅಗಸೆಬೀಜದ ಚಟ್ನಿಪುಡಿಯನ್ನು ಬಳಸಬಹುದು ಇದರಿಂದ ಬಿಪಿ ಬರುವುದನ್ನು ತಡೆಯಬಹುದು. ಉತ್ತರ ಕರ್ನಾಟಕದ ಕಡೆಯಲ್ಲಿ ಅಗಸೆ ಬೀಜವನ್ನು ಹೆಚ್ಚು ಬಳಸುತ್ತಾರೆ. ಕರಿಬೇವು ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 10-15 ಕರಿಬೇವಿನ ಸೊಪ್ಪಿನ ಎಲೆಯನ್ನು ಕುದಿಸಿ ಆ ನೀರನ್ನು ಕುಡಿಯಬೇಕು. ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಮನಸನ್ನು ಸರಿಯಾಗಿ ಕಂಟ್ರೋಲ್ ಅಲ್ಲಿ ಇಟ್ಟುಕೊಂಡರೆ ಮಾತ್ರ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಪ್ರತಿದಿನ ಬೆಳಗ್ಗೆ ಸಂಜೆ 10 ನಿಮಿಷ ಧ್ಯಾನ ಮಾಡುವುದರಿಂದ ಮೆದುಳಿಗೆ ರಿಲ್ಯಾಕ್ಸ್ ಆಗಿ ರಕ್ತ ಸಂಚಾರ ಸರಾಗವಾಗುತ್ತದೆ. ಪ್ರತಿದಿನ ವಾಕಿಂಗ್, ವ್ಯಾಯಾಮ ಮಾಡುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಇದರ ಜೊತೆಗೆ ಉತ್ತಮ ಆಹಾರ ಕ್ರಮವನ್ನು ಅನುಸರಿಸುವುದರಿಂದ ಹಾಗೂ ಆಹಾರದಲ್ಲಿ ಉಪ್ಪನ್ನು ಕಡಿಮೆ ಬಳಸುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮೇಲೆ ತಿಳಿಸಿದ ಕ್ರಮಗಳನ್ನು ಅನುಸರಿಸಿ ಬಿಪಿಯನ್ನು ದೂರವಿರಿಸಿ.

Leave A Reply

Your email address will not be published.

error: Content is protected !!