ಶರೀರಕ್ಕೆ ಹಿಮೋಗ್ಲೋಬಿನ್ ಕಡಿಮೆಯಾಗದಂತೆ ಅರೋಗ್ಯ ಹೆಚ್ಚಿಸುವ ಮನೆಮದ್ದು

0

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ರಕ್ತಹೀನತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಅಂದರೆ ರಕ್ತದ ಕೊರತೆ ಉಂಟಾಗುತ್ತಿದೆ. ಅವರ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗುತ್ತಿದೆ. ಇದರಿಂದ ತುಂಬಾ ಸುಸ್ತಾಗುವುದು ಒತ್ತಡಕ್ಕೆ ಒಳಗಾಗುವುದು ಯಾವುದರಲ್ಲೂ ಆಸಕ್ತಿ ಇಲ್ಲದಂತೆ ಆಗುವುದು ನಿಶಕ್ತಿಯಿಂದ ಬಳಲುವುದು ಇದೆಲ್ಲಾ ಆಗುತ್ತದೆ. ಇದಕ್ಕೆಲ್ಲ ಕಾರಣ ಅವರ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಇಲ್ಲದಿರುವುದೇ ಕಾರಣವಾಗಿದೆ. ಯಾಕೆ ಹಿಮೋಗ್ಲೋಬಿನ್ ಕೊರತೆ ಉಂಟಾಗುತ್ತದೆ ಎಂದರೆ ಅವರು ಸೇವಿಸುವಂತಹ ಆಹಾರ ಪದಾರ್ಥಗಳಲ್ಲಿ ಕಬ್ಬಿಣಾಂಶದ ಕೊರತೆ ಇರುತ್ತದೆ. ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನದಾಗಿ ರಕ್ತಹೀನತೆ ಸಮಸ್ಯೆ ಕಂಡುಬರುತ್ತದೆ

ರಕ್ತದಲ್ಲಿ ಕೆಂಪು ರಕ್ತ ಕಣಗಳು ಮತ್ತು ಬಿಳಿರಕ್ತಕಣಗಳು ಎಂಬುದು ಇರುತ್ತವೆ. ಕೆಂಪುರಕ್ತಕಣಗಳು ಕಡಿಮೆಯಾಗುವುದರಿಂದ ರಕ್ತಹೀನತೆ ಉಂಟಾಗುತ್ತದೆ. ಅನೇಕ ಜನರಿಗೆ ತಮಗೆ ರಕ್ತಹೀನತೆ ಇದೆ ಎಂಬುದೇ ತಿಳಿಯುವುದಿಲ್ಲ ಅದನ್ನು ನಿರ್ಲಕ್ಷ ಮಾಡುತ್ತಾರೆ. ನಮಗೆ ತುಂಬಾ ಸುಸ್ತಾಗುತ್ತಿದೆ ಆಲಸ್ಯ ಉಂಟಾಗುತ್ತಿದೆ ಎಂದಾಗ ರಕ್ತ ಪರೀಕ್ಷೆಯನ್ನು ಮಾಡಿಸಬೇಕು ಆಗ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಯಾವ ಪ್ರಮಾಣದಲ್ಲಿ ಇದೆ ಎಂಬುದು ತಿಳಿದುಬರುತ್ತದೆ. ರಕ್ತಹೀನತೆ ಕಡಿಮೆಯಾದಾಗ ಅದನ್ನು ಸುಲಭವಾಗಿ ವೃದ್ಧಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಅದಕ್ಕೆ ತುಂಬಾ ಖರ್ಚು ಮಾಡಬೇಕಾದ ಅವಶ್ಯಕತೆ ಇಲ್ಲ ನಾವು ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿ ದೇಹದಲ್ಲಿ ರಕ್ತವನ್ನು ಉತ್ಪತ್ತಿ ಮಾಡಿಕೊಳ್ಳಬಹುದು.

ನಾವು ತಿನ್ನುವ ತರಕಾರಿಗಳು ಪದಾರ್ಥಗಳು ಅವುಗಳಲ್ಲಿಯೇ ರಕ್ತವನ್ನು ಉತ್ಪತ್ತಿ ಮಾಡುವಂತಹ ಶಕ್ತಿ ಇದೆ. ನಾವು ತಿನ್ನುವಂತಹ ಆಹಾರದಲ್ಲಿ ಕಬ್ಬಿಣಾಂಶ ಇದ್ದರೆ ರಕ್ತ ಉತ್ಪತ್ತಿಯಾಗುತ್ತದೆ. ವಾಹನವನ್ನು ಚಲಾಯಿಸುವುದಕ್ಕೆ ಪೆಟ್ರೋಲ್ ಹೇಗೆ ಅಗತ್ಯವೋ ನಮ್ಮ ದೇಹವು ಕೂಡ ಸುಲಲಿತವಾಗಿ ಕಾರ್ಯನಿರ್ವಹಿಸುವುದಕ್ಕೆ ರಕ್ತದ ಅವಶ್ಯಕತೆ ತುಂಬಾ ಇದೆ. ನಾವಿಂದು ದೇಹದಲ್ಲಿ ವೇಗವಾಗಿ ರಕ್ತ ಉತ್ಪತ್ತಿ ಮಾಡುವಂತಹ ಮನೆಮದ್ದನ್ನು ತಿಳಿಸಿ ಕೊಡುತ್ತೇವೆ. ನಾವು ಪ್ರತಿದಿನ ಮೆಂತೆಕಾಳನ್ನು ಸೇವನೆ ಮಾಡುವುದರಿಂದ ರಕ್ತವನ್ನು ಹೆಚ್ಚಿಸಿಕೊಳ್ಳಬಹುದು ಮೆಂತೆಯಲ್ಲಿ ಕಬ್ಬಿಣಾಂಶ ತುಂಬಾ ಇದೆ ಜೊತೆಗೆ ಫೈಬರ್ ಅಂಶವಿದೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಂತಹ ಗುಣವಿದೆ ನಮ್ಮ ಎಲುಬುಗಳನ್ನು ಗಟ್ಟಿ ಮಾಡುವಂತಹ ಶಕ್ತಿ ಮೆಂತೆಗಿದೆ.

ನಾವು ಪ್ರತಿದಿನ ಒಂದು ಚಮಚ ಮೆಂತೆಯನ್ನು ತೆಗೆದುಕೊಂಡು ಅದನ್ನು ರಾತ್ರಿ ನೀರಿನಲ್ಲಿ ನೆನೆಸಿಡಬೇಕು ಒಂದು ಚಮಚ ಮೆಂತೆಯನ್ನು ತೊಳೆದು ನೀರಿನಲ್ಲಿ ನೆನೆ ಹಾಕಬೇಕು. ರಾತ್ರಿಯೆಲ್ಲಾ ಮೆಂತೆ ಚೆನ್ನಾಗಿ ನೆನೆದು ನೀರು ಹಳದಿ ಬಣ್ಣಕ್ಕೆ ಬಂದಿರುತ್ತದೆ. ನೀರಿನಲ್ಲಿ ಮೆಂತೆಯ ಅಂಶ ಪೂರ್ಣವಾಗಿ ಬಿಟ್ಟಿರುತ್ತದೆ ಆ ನೀರು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಅದರಲ್ಲಿ ಕಬ್ಬಿಣದಂಶ ಹೆಚ್ಚಾಗಿ ಇರುತ್ತದೆ ನೀವು ಬೆಳಿಗ್ಗೆ ಎದ್ದ ತಕ್ಷಣ ಯಾವುದೇ ಆಹಾರವನ್ನು ಸೇವಿಸದೆ ಈ ಮೆಂತೆ ನೀರನ್ನು ಕುಡಿಯಬೇಕು.

ನಂತರ ನೆನೆಸಿದಂತಹ ಮೆಂತೆಕಾಳನ್ನು ಚೆನ್ನಾಗಿ ಅಗಿದು ತಿನ್ನಬೇಕು ಆಗ ನಿಮಗೆ ಪೂರ್ಣ ಪ್ರಮಾಣದ ಶಕ್ತಿ ದೊರೆಯುತ್ತದೆ. ಇದನ್ನು ನೀವು ಒಂದು ವಾರ ಮಾಡಿ ನೋಡಿದರೆ ನಿಮಗೆ ಇದರ ಪರಿಣಾಮ ತಿಳಿದುಬರುತ್ತದೆ. ಇದನ್ನು ನೀವು ನಿರಂತರವಾಗಿ ಒಂದು ತಿಂಗಳು ಸೇರಿಸಬಹುದು ಜೀವನಪೂರ್ತಿ ಸೇವಿಸುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ಮೆಂತೆಯನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುತ್ತದೆ ಈ ರೀತಿಯಾಗಿ ಮೆಂತೆಯನ್ನು ಸೇವಿಸುವುದರಿಂದ ರಕ್ತದೊತ್ತಡ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ. ಈ ರೀತಿ ಮೆಂತೆಯನ್ನು ಸೇವಿಸುವುದರಿಂದ ತುಂಬಾ ದಪ್ಪಗಿರುವವರು ಕ್ರಮೇಣವಾಗಿ ಸಣ್ಣದಾಗುತ್ತಾ ಬರುತ್ತಾರೆ. ಮೆಂತೆಯನ್ನು ನಾವು ದೋಸೆ ಮುಂತಾದ ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವುದರಿಂದ ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು.

ಇದರ ಜೊತೆಗೆ ನಾವು ಹಸಿ ತರಕಾರಿಗಳನ್ನು ಸೊಪ್ಪುಗಳನ್ನು ತಿನ್ನಬೇಕು ಡ್ರೈಫ್ರೂಟ್ಸ್ ಗಳನ್ನ ಸೇವನೆ ಮಾಡಬೇಕು ಬೀಟ್ರೋಟ್ ಕ್ಯಾರೆಟ್ ಕಿತ್ತಳೆ ಹಣ್ಣುಗಳ ಸೇವನೆಯನ್ನು ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

Leave A Reply

Your email address will not be published.

error: Content is protected !!