viral News: ಪ್ರೀತಿಸಿ ದಂಪತಿಯ ಜೀವನಕ್ಕೆ ಕಾಲಿಟ್ಟ ಸಲಿಂಗಿ ಜೋಡಿಗಳ ಮದುವೆಯ ಅಪರೂಪದ ಕ್ಷಣಗಳು!

0

Viral News: ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಪ್ರೀತಿ ಕುರುಡು ಎಂಬ ಮಾತು ಅಕ್ಷರಶಃ ನಿಜವಾಗುತ್ತಿದೆ ಯಾರು ಯಾವಾಗ ಯಾರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ ಎಂಬುದನ್ನು ಊಹಿಸಲು ಕೂಡ ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಲಿಂಗಕಾಮಿಗಳ ಮದುವೆ ವಿಚಾರಗಳು ನಮ್ಮ ಭಾರತ ದೇಶದಲ್ಲಿ ಹೆಚ್ಚಾಗಿ ಸುದ್ದಿಯಾಗುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆ ಇಬ್ಬರು ಹೆಣ್ಣು ಮಕ್ಕಳು ಪ್ರೀತಿಸಿ ಮದುವೆಯಾಗಿ ಒಂದು ಮುದ್ದಾದ ಮಗುವನ್ನು ಪಡೆದಂತಹ ವಿಚಾರ ಬಾರಿ ಚರ್ಚೆಗೆ ಗ್ರಾಸವಾಗಿತ್ತು.

ಆದರೆ ಈಗ ನಮ್ಮ ಮಹಾರಾಷ್ಟ್ರದಲ್ಲಿ (Maharashtra) ನಡೆದಿರುವಂತಹ ಸಲಿಂಗಕಾಮಿಗಳ ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ. ಅವಿನಾಶ್ ಮತ್ತು ವರುಣ್ ದಂಪತಿಗಳು ಕಳೆದ ಆರು ವರ್ಷಗಳಿಂದ ಪ್ರೀತಿಸಿ ತಮ್ಮ ಪ್ರೀತಿಗೆ ಮನೆಯವರೆಲ್ಲರ ಒಪ್ಪಿಗೆ ಸಿಗುವವರೆಗೂ ಕಾದು ಅನಂತರ ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಗೆಳೆಯರೇ ಈ ಕುರಿತಾದ ವಿಚಾರವನ್ನು ಸ್ವತಃ ವರುಣ್(Varun) ಅವರೇ ತಮ್ಮ instagram ಖಾತೆಯಲ್ಲಿ ಬರೆದುಕೊಂಡಿದ್ದು,

ನಾನು ಭಾರತಕ್ಕೆ ಬಂದಾಗ ಅವಿನಾಶ್(Avinash) ಅವರನ್ನು ಭೇಟಿ ಮಾಡಿದೆ ಭೇಟಿ ಪರಸ್ಪರ ಸ್ನೇಹಕ್ಕೆ ತಿರುಗಿ ನಾನು ಗಂಭೀರವಾಗಿ ಸಂಗಾತಿಯ ಹುಡುಕಾಟದಲ್ಲಿದ್ದಾಗ 37 ವರ್ಷದ ಅವಿನಾಶ್ ಅವರಿಂದ ಪ್ರೇಮ ನಿವೇದನೆ ಬಂದಾಗ ನಾನು ಬರೋಬ್ಬರಿ ಆರು ವರ್ಷಗಳ ಕಾಲ ಪ್ರೀತಿಸಿ. ನಮ್ಮಿಬ್ಬರ ಪ್ರೀತಿಗೆ ಮನೆಯವರೆಲ್ಲರ ಒಪ್ಪಿಗೆ ದೊರಕುವವರೆಗೂ ಕಾದೆವು. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಸುಂದರ ಸಮಯ ನಮಗಾಗಿ ಒದಗಿ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ಈ ಜೋಡಿಗಳು ಬಿಹಾರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಅದರ ಕೆಲಸ ಸುಂದರ ಕ್ಷಣಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ಷಪಡಿಸಿದ್ದಾರೆ. ಸದ್ಯ ಈ ಫೋಟೋಗಳನ್ನು ಹಂಚಿಕೊಳ್ಳದ ಕೆಲವೇ ಕೆಲವು ಗಂಟೆಗಳಲ್ಲಿ 1.2 ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯೇ ಹರಿದು ಬರುತ್ತಿದೆ‌. ಇವರಿಬ್ಬರ ಮದುವೆ ಫೋಟೋಗಳನ್ನು ಕಂಡಂತಹ ನೆಟ್ಟಿಗರು ನೂರು ಕಾಲ ಸುಖವಾಗಿ ಬಾಳಿ ಎಂದು ಶುಭ ಹಾರೈಸಿದ್ದಾರೆ.

Leave A Reply

Your email address will not be published.

error: Content is protected !!