Vinod Prabhakar: ಮುದ್ದಿನ ಮಡದಿಯೊಂದಿಗೆ ಗೌರಿ ಗಣೇಶ ಹಬ್ಬವನ್ನು ಆಚರಿಸಿದ ವಿನೋದ್ ಪ್ರಭಾಕರ್!

0

ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ಭರವಸೆಯ ನಟನೆಂದೆ ಪ್ರಖ್ಯಾತಿ ಪಡೆದಿರುವಂತಹ ವಿನೋದ್ ಪ್ರಭಾಕರ್(Vinod Prabhakar) ಅವರು ಸಾಂಪ್ರದಾಯಕ ಉಡುಗೆಯಲ್ಲಿ ಸಿದ್ದರಾಗಿ ಮನೆಯಲ್ಲಿ ಅದ್ದೂರಿಯಾಗಿ ಗಣೇಶ ಹಬ್ಬವನ್ನು ತಮ್ಮ ಹೆಂಡತಿ ಹಾಗೂ ಕುಟುಂಬಸ್ಥರೊಂದಿಗೆ ಆಚರಿಸಿದ್ದಾರೆ. ಸರ್ವರಿಗೂ ಗಣೇಶ ಹಬ್ಬದ ಶುಭಾಶಯಗಳು ಎಂದು ಕೋರಿದ್ದಾರೆ. ಕನ್ನಡ ಸಿನಿಮಾ ರಂಗದ ಮೇರು ನಟನಾಗಿ ಪ್ರಖ್ಯಾತಿ ಪಡೆದಿದ್ದ ಟೈಗರ್ ಪ್ರಭಾಕರವರು (Tiger Prabhakar) ಅದೆಂತ ಅಪ್ರತಿಮ ಕಲಾವಿದ ಎಂಬುದರ ಪರಿಚಯವನ್ನು ನಾವೇನು ಮಾಡಬೇಕಿಲ್ಲ.

ತಂದೆಯ ಹಾದಿಯನ್ನು ಹಿಡಿದಂತಹ ವಿನೋದ್ ಪ್ರಭಾಕರ್(Vinod Prabhakar) ಅವರು ದಿಲ್ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಅದ್ಭುತ ಯಶಸ್ಸನ್ನು ಕಂಡರು, ಟೈಸನ್, ಮರಿ ಟೈಗರ್, ಯಜಮಾನ, ನೆರಳು, ರಾಬರ್ಟ್, ಲಂಕಾಸುರ ಹೀಗೆ ಮುಂತಾದ ಯಶಸ್ವಿ ಸಿನಿಮಾಗಳನ್ನು ಕನ್ನಡಕ್ಕೆ ನೀಡಿ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿರುವ ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್(Vinod Prabhakar)

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದು ಆಗಾಗ ವಿಶೇಷ ಫೋಟೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗೆರ ಗಮನ ಸೆಳೆಯುತ್ತಿರುತ್ತಾರೆ. ಅದರಂತೆ ನಿನ್ನೆ ಇಡೀ ನಾಡಿನ ಅದ್ದೂರಿಯಾಗಿ ಆಚರಿಸಿದ ಗಣೇಶ ಹಬ್ಬವನ್ನು(Ganesh Festival) ತಮ್ಮ ಪತ್ನಿ ನಿಶಾ ವಿನೋದ್ ಪ್ರಭಾಕರ್(Nisha Vinod Prabhakar) ಅವರೊಂದಿಗೆ ಸೇರಿ ಸಂಭ್ರಮಿಸಿದ್ದು ಇಬ್ಬರು ಒಂದೇ ರೀತಿಯ ನೀಲಿ ಬಣ್ಣದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಕೈ ಮುಗಿಯುತ್ತಾ,

ಫೋಟೋಗೆ ಫೋಸ್ ನೀಡಿದ್ದಾರೆ. ಇನ್ನು ಪರಿಸರ ಸ್ನೇಹ ಗಣೇಶನನ್ನು ನಟ ವಿನೋದ್ ಪ್ರಭಾಕರ್(Vinod Prabhakar) ಮನೆಯಲ್ಲಿ ಕೂರಿಸಿ ಅದ್ದೂರಿಯಾಗಿ ಬಲೂನ್ಗಳನ್ನು ಬೆಳೆಸಿ ಡೆಕೋರೇಷನ್ ಮಾಡಿರುವುದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.

Leave A Reply

Your email address will not be published.

error: Content is protected !!
Footer code: