ಕನಸಿನ ರಾಣಿ ಮಾಲಾಶ್ರೀ ಮನೆಯ ಗೌರಿ ಗಣೇಶ ಹಬ್ಬದ ಸಂಭ್ರಮ ಹೇಗಿತ್ತು ಗೊತ್ತಾ? ಇಲ್ಲಿವೆ ಫೋಟೋಸ್

0

Malashree: ಸ್ನೇಹಿತರೆ ಕಳೆದ ಕೆಲವು ದಿನಗಳಿಂದ ನಟಿ ಮಾಲಾಶ್ರೀ ಮತ್ತು ಅವರ ಮಗಳು ಆರಾಧನಾ ರಾಮ್ (Aradhana Ram) ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದು ಆಗಾಗ ತಮ್ಮ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಮಾಡುವಂತಹ ಸಂಭ್ರಮವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿರುತ್ತಾರೆ. ಕೇವಲ ಸಿನಿಮಾ ಕುರಿತಾದ ಅಪ್ಡೇಟ್ಸ್ಗಳಿಗಾಗಿ ಮಾತ್ರ instagram ಹಾಗೂ facebook ನಂತಹ ಜಾಲವನ್ನು ಬಳಸುತ್ತಿದ್ದಂತಹ ಮಾಲಾಶ್ರೀ (Malashree) ಅವರು ಆಗಾಗ ತಮ್ಮ ಹಾಗೂ ತಮ್ಮ ಮುದ್ದಿನ ಮಕ್ಕಳ ಫೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುತ್ತಾರೆ.

ಹೀಗೆ ಮೊನ್ನೆ ಇಷ್ಟೇ ನಾಡಿನ ಸಮಸ್ತ ಜನರು ಬಹಳ ಅದ್ದೂರಿಯಾಗಿ ಆಚರಿಸಿದಂತಹ ಗಣೇಶ ಚತುರ್ಥಿಯನ್ನು ಮನೆಯಲ್ಲಿ ಅರ್ಥಪೂರ್ಣವಾಗಿ ನೆರವೇರಿಸಿರುವ ಮಾಲಾಶ್ರೀ ಕುಟುಂಬ ಮನೆಗೆ ಪರಿಸರ ಸ್ನೇಹಿ ಗಣಪನನ್ನು ಬರಮಾಡಿಕೊಂಡು ದೇವರಿಗೆ ಹೂವು ಹಣ್ಣು ಹಂಪಲು ಹಾಗೂ ಸಿಹಿ ತಿಂಡಿಗಳನ್ನು ಅರ್ಪಿಸಿ ಪೂಜಾ ಕೈಂಕಾಲಗಳನ್ನೆಲ್ಲ ನೆರವೇರಿಸಿ ಅನಂತರ ಮಾಲಾಶ್ರೀ ತಮ್ಮ ಇಬ್ಬರೂ ಮಕ್ಕಳು ಹಾಗೂ ತಾಯಿಯೊಟ್ಟಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಹಬ್ಬದ ದಿನವೂ ಕೂಡ ಸರಳವಾಗಿ ಕುರ್ತ ಧರಿಸಿರುವ ಅಮ್ಮ ಮಗಳು ಫೋಟೋದಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದು ಆರಾಧನಾ ಗಣಪನಿಗೆ ಪ್ರೀತಿಯಿಂದ ಪೂಜೆ ಸಲ್ಲಿಸಿ ಬೇಡಿಕೊಳ್ಳುತ್ತಿರುವಂತಹ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ನಟಿ ಆರಾಧನಾ ರಾಮ್ (Aradhana Ram) ಅವರು ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಎಂಬ ಕ್ಯಾಪ್ಶನ್ ಬರೆದು ತಮ್ಮ ಫೋಟೋಗಳನ್ನು ಶೇರ್ ಮಾಡಲಾದ ಕೆಲವೇ ಕೆಲವು ಗಂಟೆಗಳಲ್ಲಿ ಸಾವಿರಾರು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬಂದಿದೆ.

ತಮ್ಮ ಡೆಬ್ಯೂ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರಂತಹ ಮೇರು ನಟರೊಂದಿಗೆ ನಟಿಸುತ್ತಿರುವಂತಹ ಆರಾಧನಾ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೊಳ್ಳೆ ಸಿನಿಮಾಗಳ ಅವಕಾಶ ಹರಸಿ ಬರಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.

error: Content is protected !!