WhatsApp Group Join Now
Telegram Group Join Now

ಸ್ನೇಹಿತರೆ ಸ್ಯಾಂಡಲ್ವುಡ್ನ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಮನೆಯಲ್ಲಿ ಆಚರಿಸಲಾದಂತಹ ಅದ್ದೂರಿ ಗೌರಿ ಗಣೇಶ ಹಬ್ಬದ ಸುಂದರ ಫೋಟೋಗಳನ್ನು ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು. ಅದರಂತೆ ಸಾಲು ಸಾಲು ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತ ಬಂದಿರುವ ನಿರೂಪಕ ನಿರಂಜನ್ ದೇಶಪಾಂಡೆ(Niranjan Deshpande) ಮನೆಯಲ್ಲಿಯೂ ಗೌರಿ ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಮಾಡಲಾಗಿದ್ದು,

ಸ್ವತಃ ನಿರಂಜನ್ ಅವರು ತಮ್ಮ ಪತ್ನಿಯೊಂದಿಗೆ ಹೋಗಿ ಗೌರಿ ಗಣೇಶನನ್ನು (Gowri-Ganesha) ಖರೀದಿಸಿ ಮನೆಗೆ ಆರತಿ ಬೆಳಗಿ ಬರಮಾಡಿಕೊಂಡು ಪ್ರತಿಷ್ಠಾಪಿಸಿ ತಮ್ಮ ಕುಟುಂಬಸ್ಥರೊಂದಿಗೆ ಸೇರಿ ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಹೌದು ಗೆಳೆಯರೇ ಸಾಂಪ್ರದಾಯಿಕ ಉಡುಗೆಯಲ್ಲಿ ಗಣೇಶನ ಪಕ್ಕದಲ್ಲಿ ನಿಂತು ದಂಪತಿಗಳು ಫೋಟೋ ಕ್ಲಿಕ್ಕಿಸಿಕೊಂಡು ಅದೆಲ್ಲವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದರು.

ಇದೆಲ್ಲದ ನಿರಂಜನ್ ತಮ್ಮ ಹೆಂಡತಿಯೊಂದಿಗೆ ಸೇರಿ ವಿಧವಿಧವಾದ ಹಬ್ಬದ ಅಡಿಗೆಯನ್ನು ಮಾಡಿ ಅದರ ರೀಲ್ಸ್ ವಿಡಿಯೋ ಒಂದನ್ನು ತಮ್ಮ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡು ಸಂಭ್ರಮಿಸಿದರು. ಹೀಗೆ ಸವರ್ಣ ದೀರ್ಘ ಸಂಧಿ, ಆಮ್ಲೆಟ್ ಮುಂತಾದ ಹಿಟ್ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ ನಲ್ಲಿ ಮಿಂಚಿದಂತಹ ನಟ ನಿರಂಜನ್ ದೇಶಪಾಂಡೆ(Niranjan Deshpande) ಅವರು ಸದ್ಯ ಸಾಲು ಸಾಲು ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಾ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಆಫರ್ ಗಳು ಇವರನ್ನು ಹರಸಿ ಬರಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

ಸದ್ಯ ನಿರಂಜನ್ ದೇಶಪಾಂಡೆ(Niranjan Deshpande) ಹಂಚಿಕೊಂಡಿರುವಂತಹ ವಿಜ್ಞಾ ನಿವಾರಕನಾ ಪೂಜೆಯ ಫೋಟೋಗಳಿಗೆ ಅಭಿಮಾನಿಗಳ ವತಿಯಿಂದ ಅದ್ಭುತ ರೆಸ್ಪಾನ್ಸ್ ದೊರಕುತ್ತಿದ್ದು ಯಾವುದೇ ಹಬ್ಬವನ್ನಾಗಲಿ ಬಹಳ ಅರ್ಥಪೂರ್ಣವಾಗಿ ಆಚರಿಸುವ ಈ ದಂಪತಿಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: