ಒಬ್ಬ ಹೆಣ್ಣು ತನ್ನ ಗಂಡನ ಬಳಿ ಕೆಲವು ಗುಣಗಳನ್ನು ಬಯಸುತ್ತಾಳೆ. ಮದುವೆಯಾಗುವ ಹೆಣ್ಣು ತನ್ನ ಗಂಡನ ಬಗ್ಗೆ ತನ್ನದೆ ಆದ ಕನಸನ್ನು ಕಟ್ಟಿಕೊಂಡಿರುತ್ತಾಳೆ. ಕನಸಿನಲ್ಲಿರುವಂತಹ ಗಂಡ ಸಿಕ್ಕರೆ ಬಹಳ ಸಂತೋಷದಿಂದ ಅವನ ಜೊತೆ ಜೀವನ ಸಾಗಿಸುತ್ತಾಳೆ. ಹಾಗಾದರೆ ಗಂಡನಲ್ಲಿ ಇರಬೇಕಾದ ಕೆಲವು ಗುಣಗಳನ್ನು ಈ ಲೇಖನದಲ್ಲಿ ನೋಡೋಣ
ಅನ್ಯರ ಮುಂದೆ ಗಂಡನಾದವನು ಹೆಂಡತಿಯನ್ನು ಬಯ್ಯಬಾರದು. ಹೆಂಡತಿಯ ಮುಂದೆ ಗಂಡನು ಬೇರೆ ಹೆಣ್ಣಿನ ಬಗ್ಗೆ ಹೊಗಳಬಾರದು. ಬೇರೆಯವರ ಹೆಂಡತಿ ಸುಂದರವಾಗಿದ್ದಳು ಎಂದು ಯೋಚನೆ ಮಾಡುವ ಬದಲು ಇರುವುದರಲ್ಲೆ ಸಂತೋಷ ಪಡಬೇಕು, ಅನ್ಯೋನ್ಯ ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ ಸೌಂದರ್ಯ ಮುಖ್ಯ ಅಲ್ಲ. ಮನಸಿಗೆ ನೋವಾಗುವಂತೆ ಮಾತನಾಡಬಾರದು. ಗಂಡನು ಹೆಂಡತಿ ಮಾಡಿದ ಅಡುಗೆಯ ಬಗ್ಗೆ ಕೊರತೆಯನ್ನು ಹೇಳಬಾರದು. ಮನೆಯಲ್ಲಿ ಹೆಂಡತಿಯ ಜೊತೆ ಜಗಳ ಆದರೆ ಗಂಡನು ಸಮಾಧಾನ ಮಾಡದೆ ಇರಬಾರದು. ಗಂಡನು ಹೆಂಡತಿಗೆ ಚಿಕ್ಕ ಚಿಕ್ಕ ಸಹಾಯ ಮಾಡುವುದು, ಚಿಕ್ಕ ಚಿಕ್ಕ ಆಸೆಯನ್ನು ಈಡೇರಿಸಬೇಕು, ಹೆಂಡತಿ ಕೂಡ ಚಿಕ್ಕ ವಿಷಯವನ್ನು ದೊಡ್ಡದು ಮಾಡಬಾರದು. ನನಗಿರುವ ಕಷ್ಟ ಹೆಂಡತಿಗೂ ಇರುತ್ತದೆ ಎಂದು ಗಂಡನು ಅರಿಯಬೇಕು.
ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಕೋಪ ಮಾಡಿಕೊಳ್ಳಬಾರದು, ಮಕ್ಕಳ ಮುಂದೆ ಯಾರಿಗೂ ಬೈಯ್ಯಬಾರದು. ಯಾವ ಜಾಗದಲ್ಲಿ ಯಾರ ಮುಂದೆಯೂ ಹೆಂಡತಿಯನ್ನು ನಿಂದಿಸಬಾರದು. ಅಮ್ಮನ ಬಳಿ ತೋರಿಸುವ ಪ್ರೀತಿ ಹೆಂಡತಿಯ ಬಳಿ ತೋರಿಸಬೇಕು. ಹುಷಾರಿಲ್ಲದೆ ಇದ್ದಾಗ ಹೆಂಡತಿಯ ಜೊತೆ ಇದ್ದು ನೋಡಿಕೊಳ್ಳಬೇಕು. ಮುಖ್ಯವಾದ ಸಮಾರಂಭಗಳಿಗೆ ಹೆಂಡತಿಯನ್ನು ಜೊತೆ ಕರೆದುಕೊಂಡು ಹೋಗಬೇಕು. ಹೆಂಡತಿಯನ್ನು ಪ್ರೀತಿ ಮತ್ತು ಸಂತೋಷದಿಂದ ನೋಡಿಕೊಳ್ಳಬೇಕು. ಮುಖ್ಯವಾದ ವಿಷಯಗಳನ್ನು ಮುಚ್ಚಿಡದೆ ಎಲ್ಲವನ್ನು ಹೆಂಡತಿಯ ಜೊತೆ ಹೇಳಿಕೊಳ್ಳಬೇಕು ಮುಚ್ಚು ಮರೆ ಇರಬಾರದು. ಗಂಡನಿಗೆ ಹೆಂಡತಿಯ ಬಗ್ಗೆ ನಂಬಿಕೆ ಇರಬೇಕು. ಕುಟುಂಬದ ಮುಖ್ಯ ವಿಷಯಗಳನ್ನು ಹೆಂಡತಿಯ ಜೊತೆಗೂಡಿ ಚರ್ಚಿಸಬೇಕು. ವರ್ಷಕ್ಕೆ ಒಂದು ಸಲವಾದರೂ ಪ್ರವಾಸಕ್ಕೆ ಅಥವಾ ಹೊರಗಡೆ ಸುತ್ತಾಡುವುದಕ್ಕೆ ಕರೆದುಕೊಂಡು ಹೋಗಬೇಕು. ಹೆಂಡತಿ ಹೇಳುವ ಮಾತನ್ನು ಗಂಡನು ಸಮಾಧಾನದಿಂದ ಕೇಳಬೇಕು. ಹೆಂಡತಿಯ ಮಾತನ್ನು ಗೌರವಿಸಬೇಕು ವಾರಕ್ಕೆ ಒಂದು ಸಲವಾದರೂ ಮನಸ್ಸು ಬಿಚ್ಚಿ ಮಾತನಾಡಬೇಕು.
ಮಕ್ಕಳು ಹಾಗೂ ಕುಟುಂಬಕ್ಕೆ ಪ್ರಾಮುಖ್ಯತೆ ಕೊಡಬೇಕು. ಪ್ರತಿಯೊಂದು ಹೆಣ್ಣು ಬಯಸುವುದು ಅವಳು ಕಣ್ಣೀರು ಹಾಕದಂತೆ ಮನಸನ್ನು ಅರಿತು ಕಣ್ಣರೆಪ್ ನೋಡಿಕೊಳ್ಳುವ ಹಾಗೆ ನೋಡಿಕೊಳ್ಳಬೇಕು. ಅಂತಹ ಗಂಡ ಸಿಕ್ಕರೆ ಎಂತಹ ಕಷ್ಟವಾದರೂ ಹೆಣ್ಣು ಸಹಿಸಿಕೊಳ್ಳುತ್ತಾಳೆ, ಎಷ್ಟೆ ನೋವಾದರೂ ಸ್ವೀಕರಿಸುತ್ತಾಳೆ. ಅವಳ ಬಗ್ಗೆ ನೂರು ಜನ ನೂರು ಮಾತಾಡಲಿ ನಾನಿದ್ದೇನೆ ನಿನ್ನ ಜೊತೆ ಎಂಬ ಸಮಾಧಾನದ ಮಾತುಗಳನ್ನಾಡಿ ಅಪ್ಪಿ ಸಂತೈಸಿದರೆ ನೂರು ಜನರ ಮಾತನ್ನು ಧೈರ್ಯವಾಗಿ ಎದುರಿಸುತ್ತಾಳೆ ಹೆಣ್ಣಿನ ಮನಸಿಗೆ ಬೆಲೆ ಕಟ್ಟಬಾರದು. ಮೂರು ಗಂಟು ಹಾಕಿದ ತಕ್ಷಣ ತಂದೆ ತಾಯಿಯನ್ನು ಒಡಹುಟ್ಟಿದವರನ್ನು ಬಿಟ್ಟು ಹೊಸ ಮನೆತನಕ್ಕೆ ಹೊಸ ವಾತಾವರಣಕ್ಕೆ ಹೊಂದಿಕೊಂಡು ತನ್ನ ಕುಟುಂಬಕ್ಕೆ ಜೀವವನ್ನು ಮುಡಿಪಾಗಿಡುವ ಏಕೈಕ ವ್ಯಕ್ತಿ ಹೆಣ್ಣು. ಹೆಣ್ಣು ತನ್ನ ತವರು ಮನೆಯಲ್ಲಿದ್ದಾಗ ಯೋಚಿಸುವುದಿಲ್ಲ ಅದೆ ತನ್ನ ಗಂಡನ ಮನೆಯಲ್ಲಿ ಯೋಚಿಸುವುದರಲ್ಲಿಯೆ ತನ್ನ ಜೀವನವನ್ನು ಮುಗಿಸುತ್ತಾಳೆ. ಹೆಣ್ಣಿನ ಜೀವನ ಬಂಗಾರದಂತಿರಬೇಕು ಅಂದರೆ ಗಂಡನಾದವನು ಹೆಂಡತಿಗೆ ಬಂಗಾರದಂಥಹ ಪ್ರೀತಿಯನ್ನು ತೋರಿಸಬೇಕು, ಕೆಜಿಗಟ್ಟಲೆ ಬಂಗಾರ ತಂದುಕೊಟ್ಟರೂ ಹೆಣ್ಣು ಒಲಿಯುವುದಿಲ್ಲ, ಬಂಗಾರದಂತಹ ಪ್ರೀತಿ ತೋರಿದರೆ ಹೆಣ್ಣು ಒಲಿಯುತ್ತಾಳೆ.
ಹೆಣ್ಣಿಗೆ ಓದಿರುವ ಗಂಡ ಸಿಗಬಹುದು ಆದರೆ ಮನಸನ್ನು ಓದುವ ಗಂಡ ಸಿಕ್ಕರೆ ಅವಳ ಪುಣ್ಯ. ಗುಣವಂತನಾದ ಗಂಡನ ಜೊತೆ ಗುಡಿಸಲಿನಲ್ಲಿ ಬೇಕಾದರೂ ಇರಬಹುದು, ಅರ್ಥ ಮಾಡಿಕೊಳ್ಳದ ಗಂಡನ ಜೊತೆ ಅರಮನೆಯಲ್ಲಿ ಇರಲು ಸಾಧ್ಯವಿಲ್ಲ. ಮಗಳನ್ನು ಶ್ರೀಮಂತರ ಮನೆಗೆ ಕೊಟ್ಟರೆ ಸುಖವಾಗಿ ಇರುತ್ತಾಳೆ ಎನ್ನುವುದು ತಪ್ಪು, ಯಾವ ಮನೆಯಲ್ಲಿ ಹೆಣ್ಣನ್ನು ಗೌರವಿಸಿ ಶ್ರೀಮಂತಿಕೆಯಿಂದ ನೋಡಿಕೊಳ್ಳುವ ಮನೆಯಲ್ಲಿ ಹೆಣ್ಣು ಸುಖವಾಗಿರುತ್ತಾಳೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಸ್ನೇಹಿತೆಯಾಗಿ, ಪುತ್ರಿಯಾಗಿ, ಮಾರ್ಗದರ್ಶಿಯಾಗಿ ವಿವಿಧ ಸ್ತರಗಳಲ್ಲಿ, ವಿವಿಧ ರೂಪಗಳಲ್ಲಿ ಪುರುಷನ ಜೀವನದ ಉನ್ನತಿಗೆ ಕಾರಣಳಾದ ಹೆಣ್ಣಿನ ಪಾತ್ರ ಅವಿಸ್ಮರಣೀಯ. ಮಳೆ ಇಲ್ಲದ ವನ, ಮಹಿಳೆ ಇಲ್ಲದ ಜೀವನ ಬರಡು, ಪ್ರತಿಯೊಬ್ಬ ಹೆಣ್ಣನ್ನು ಗೌರವಿಸಿ. ಈ ಮೇಲಿನ ಎಲ್ಲ ಗುಣಗಳನ್ನು ಹೊಂದಿರುವ ಪುರುಷ ಮಾತ್ರ ಪರಿಪೂರ್ಣ ಗಂಡ ಆಗಲು ಸಾಧ್ಯ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513