WhatsApp Group Join Now
Telegram Group Join Now

Shiva Rajkumar Birthday : ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ( Dr Rajkumar and parvathamma) ನವರ ಜೇಷ್ಠ ಪುತ್ರ ಶಿವ ರಾಜಕುಮಾರ್ (Shivraj Kumar) ಚಿಕ್ಕಂದಿನಿಂದಲೂ ತಮ್ಮ ತಂದೆಯಂತೆ ನಟನಾಗಬೇಕೆಂಬ ಆಸೆಯಿಂದ ಓದನ್ನು ಮುಗಿಸಿದ ಬಳಿಕ ಪೂರ್ಣ ಪ್ರಮಾಣದ ನಾಯಕನಾಗಿ ಆನಂದ್ (Anand) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅಂದಿನಿಂದ ಇಂದಿನವರೆಗೂ ಹ್ಯಾಟ್ರಿಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಹೌದು ಗೆಳೆಯರೇ ಕನ್ನಡ ಸಿನಿಮಾ ರಂಗದ ಎನರ್ಜಿಟಿಕ್ ಹೀರೋ (energetic Hero) ಎಂದೇ ಕರೆಯಲ್ಪಡುವ ಶಿವಣ್ಣ 60 ವರ್ಷ ವಯಸ್ಸಾದರೂ ಕೂಡ ಅಷ್ಟೇ ಮಾಸ್ ಅಂಡ್ ಕ್ಲಾಸ್ ಆಗಿ ಅಭಿನಯಿಸುತ್ತ ತೆರೆಯ ಮೇಲೆ ಲಾಂಗ್ ಹಿಡಿದು ಬಂದರೆ ಅಭಿಮಾನಿಗಳು ತಮ್ಮ ತುಂಬು ಹೃದಯದ ಪ್ರೀತಿಯನ್ನು ಶಿಳ್ಳೆ, ಚಪ್ಪಾಳೆ ಕೇಕೆಯ ಮೂಲಕ ತೋರ್ಪಡಿಸುತ್ತಾರೆ. ಬಾಲ ನಟನಾಗಿ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಶಿವಣ್ಣ ಆನಂದ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಸ್ಯಾಂಡಲ್ವುಡ್ ಪ್ರವೇಶ ಮಾಡಿದರು.

Today Shiva Rajkumar Birthday Celebration

ಆನಂತರ ತೆರೆಕಂಡ ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಎರಡು ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ (blockbuster hit) ಆಗುತ್ತದೆ. ಶಿವಣ್ಣ ಇಂದು 120ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಂಗಾರಪ್ಪನವರ ಮುದ್ದಿನ ಮಗಳಾದ ಗೀತಾ (Geeta) ಅವರೊಂದಿಗೆ 1986ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಮುದ್ದಾದ ದಂಪತಿಗಳಿಗೆ ನಿರೂಪಮ ಮತ್ತು ನಿವೇದಿತ (Nirupama and Nivedita) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಸಿನಿ ಬದುಕಿನಿಂದ ದೂರ ಉಳಿದು ತಮ್ಮ ವೈಯಕ್ತಿಕ ಬದುಕಿನಲ್ಲಿ ಬಹಳ ಸಂತೋಷವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುವಂತಹ ಶಿವ ರಾಜಕುಮಾರ್ (Shivraj Kumar) ಅವರ ಮದುವೆ ಫೋಟೋಗಳು ಸದ್ಯ ಭಾರಿ ವೈರಲಾಗುತ್ತಿದ್ದು, ಶಿವಣ್ಣನ ಮದುವೆಯಲ್ಲಿ ಯಾವೆಲ್ಲ ಸೆಲೆಬ್ರಿಟಿಗಳು ಆಗಮಿಸಿ ಶುಭ ಕಾರ್ಯಕ್ಕೆ ಸಾಕ್ಷಿಯಾಗಿದ್ದರು ಎಂಬುದನ್ನು ಈ ಪುಟದ ಮುಖಾಂತರ ಕಂಡುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: