ಸ್ಯಾಂಡಲ್ ವುಡ್ನ ಆರುಮುಗಂ ರವಿಶಂಕರ್ ಅವರ ಪತ್ನಿ ಯಾರು, ಹೇಗಿದ್ದಾರೆ, ಇವರ ಸುಂದರ ಕುಟುಂಬ ನೋಡಿ!!

0

ಸ್ಯಾಂಡಲ್ ವುಡ್ನ ಆರುಮುಗಂ ರವಿಶಂಕರ್ ಅವರ ಪತ್ನಿ ಯಾರು, ಹೇಗಿದ್ದಾರೆ ನೋಡಿ.ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕೆಂಪೇಗೌಡ (Kempegowda) ಸಿನಿಮಾದ ಮೂಲಕ ತಮ್ಮ ಸಿನಿ ಬದುಕಿನ ವರ್ಚಸ್ಸನ್ನು ಬದಲಿಸಿಕೊಂಡಂತಹ ನಟ ರವಿಶಂಕರ್ (Ravishankar) ಯಾರಿಗೆ ತಾನೇ ತಿಳಿಯದಿರಲು ಸಾಧ್ಯವಿಲ್ಲ ಹೇಳಿ? ತಮ್ಮ ಅತ್ಯದ್ಭುತ ಡೈಲಾಗ್ ಡೆಲಿವರಿ.

ಕಣ್ಣಂಚಿನ ಅಭಿನಯದ ಮೂಲಕವೇ ಎದುರಿಗಿರುವವರನ್ನು ನಡಗಿಸುವಂತಹ ಅಭಿನಯ ಮಾಡುವ ಇವರು ತಮ್ಮ ನಟನೆಯ ಮೂಲಕವೇ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿನಯಿಸಿ 300ಕ್ಕೂ ಹೆಚ್ಚು ಪಾತ್ರಗಳಿಗೆ ಜೀವ ತುಂಬಿದ್ದಾರೆ ಹಾಗೂ ಡಬ್ಬಿಂಗ್ ಆರ್ಟಿಸ್ಟ್(Dubbing artist) ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಹೌದು ಗೆಳೆಯರೇ 1991ರಲ್ಲಿ ಹಳ್ಳಿ ಕೃಷ್ಣ ಡೆಲ್ಲಿ ರಾಧಾ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದ ಆರುಮುಗಂ(Arumuga) ಅಲಿಯಾಸ್ ರವಿಶಂಕರ್ (Ravishankar) ಅವರು ಒಂದೊಳ್ಳೆ ಬ್ರೇಕ್ಗಾಗಿ ಎದುರು ನೋಡುತ್ತಿದ್ದಾಗ ಕಿಚ್ಚ ಸುದೀಪ್(Kiccha sudeep) ಅವರ ಕೆಂಪೇಗೌಡ ಸಿನಿಮಾ ಮಹತ್ತರವಾದ ಯಶಸ್ಸನ್ನು ತಂದು ಕೊಡ್ತು.

ಹೀಗೆ ಇಲ್ಲಿಂದ ತಮ್ಮ ವೃತ್ತಿ ಬದುಕಿನ ಬೇರೆಯದೇ ಪರ್ವವನ್ನು ಸೃಷ್ಟಿಸಿಕೊಂಡಂತಹ ರವಿಶಂಕರ್ ಅವರು ಎದೆಗಾರಿಕೆ, ವಿಕ್ಟರಿ, ಬಹುದೂರ್, ಮಾಣಿಕ್ಯ, ಅಧ್ಯಕ್ಷ, ಚಾರುಲತಾ, ದಂಡುಪಾಳ್ಯ, ಬಚ್ಚನ್, ವರದನಾಯಕ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಬಹು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡು ಕನ್ನಡದ ಕಡಕ್ ವಿಲ್ಲನ್ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡರು.

ಇನ್ನು ತಮಿಳು ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿಯು ಬೇಡಿಕೆ ಪಡೆದಿರುವ ಈ ನಟ ಸುಚಿಲ್(Suchel) ಎಂಬ ಪಂಜಾಬಿ ಮಹಿಳೆಯನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗಳಿಗೆ ಅದ್ವೇ(Adwe) ಎಂಬ ಮಗನಿದ್ದು, ಮುಂದಿನ ದಿನಗಳಲ್ಲಿ ತನ್ನ ತಂದೆಯಂತೆ ಆತ ಕೂಡ ಸಿನಿಮಾರಂಗದಲ್ಲಿ ಘರ್ಜಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ದಂಪತಿಯ ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೀವು ಕೂಡ ಈ ಪುಟದ ಮುಖಾಂತರ ಆರುಮುಗಂ ಪತ್ನಿ ಹೇಗಿದ್ದಾರೆ ಎಂಬುದನ್ನು ಕಣ್ಣು ತುಂಬಿಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!
Footer code: