ಸ್ಯಾಂಡಲ್ವುಡ್ ಸ್ಟಾರ್ಸ್ ಜೊತೆ ಲಕ್ಕಿ ಹೀರೋಯಿನ್ ಸ್ಪರ್ಶ ರೇಖಾ, ಸುಂದರವಾದ ಫೋಟೋಸ್ ಇಲ್ಲಿವೆ ನೋಡಿ!!

0

ನಟ ಸುದೀಪ್ ಅವರ ಚೊಚ್ಚಲ ಸಿನಿಮಾ ಸ್ಪರ್ಶ (Sparsha) ಹಾಗೂ ನಟ ದರ್ಶನ್ ಅವರ ಮೊದಲ ಚಿತ್ರ ಮೆಜೆಸ್ಟಿಕ್(Megestic) ಎರಡರ ನಾಯಕ ನಟಿಯಾಗಿ ಅದೊಂದು ಕಾಲದಲ್ಲಿ ಬಹು ದೊಡ್ಡ ಮಟ್ಟದ ಸಕ್ಸಸ್ ಖಂಡಿದ್ದ ನಟಿ ಸ್ಪರ್ಶ ರೇಖಾ ಅವರನ್ನು ಲಕ್ಕಿ ಹೀರೋಯಿನ್ ಎಂದೆ ಕನ್ನಡ ಸಿನಿಮಾ ರಂಗ ಗುರುತಿಸಲು ಪ್ರಾರಂಭ ಮಾಡಿತ್ತು. ಈ ನಟಿ ಜೊತೆಗೆ ಅಭಿನಯಿಸಿದಂತಹ ಇಬ್ಬರು ಸ್ಟಾರ್ ಕಲಾವಿದರು ಸಿನಿಮಾ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಮಟ್ಟದ ಹೆಸರನ್ನು ಕಂಡುಕೊಳ್ಳುವಂತಾಯಿತು.

ಹೀಗೆ 2000 ಇಸವಿಯಿಂದ ಸಿನಿಮಾ ರಂಗದಂದ ಸಕ್ರಿಯರಾಗಿರುವ ನಟಿ ರೇಖಾ(Rekha) ಅವರು ಪದವಿ ಓದುತ್ತಿರುವಾಗಲೇ ಯಾರೆ ನೀ ಅಭಿಮಾನಿ(Yare nee abhimani) ಎಂಬ ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ದೊರಕುತ್ತದೆ. ಹೀಗೆ ೨೦೦೦ ಇಸವಿಯಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟು ಅನಂತರ ಸುದೀಪ್ (Sudeep) ನಟನೆಯ ಸ್ಪರ್ಶ ಸಿನಿಮಾದ ಸುಮಾ ಆಗಿ ಅಭಿನಯಿಸಿ ಆಗಿನ ಕಾಲದ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

ಅದರಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಮೆಜೆಸ್ಟಿಕ್(Megestic) ಸಿನಿಮಾದಲ್ಲಿ ಅಭಿನಯಿಸಿದ ಈ ನಟಿ ಸಂದೇಶ್ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಿನಿಮಾ ರಂಗದಿಂದ ಕಣ್ಮರೆಯಾದರು. ಸದ್ಯ 2017ರಲ್ಲಿ ತೆರೆಕಂಡ ಶ್ರೀಕಾಂತ, ದೇವ್ರೌವನೇ ಬಿಡು ಗುರು ಎಂಬ ಸಿನಿಮಾದ ಮೂಲಕ ಕಂಬ್ಯಾಕ್ ಮಾಡುವ ಪ್ರಯತ್ನದಲ್ಲಿದ್ದಂತಹ ರೇಖಾ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.

ಸಾಕಷ್ಟು ಸಿನಿಮಾಗಳ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರೇಖಾ ಅವರು ಸೀಸನ್ 4ರ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಕಾಲಿಡುವ ಮೂಲಕ ರೇಖಾ ಹಾಗೂ ಸುದೀಪರವರ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡುವಂತಹ ಭಾಗ್ಯ ಕಲ್ಪಿಸಿ ಕೊಟ್ಟರು.

ಸ್ಯಾಂಡಲ್ ವುಡ್ನ ಎಲ್ಲಾ ಸ್ಟಾರ್ಸ್ ಜೊತೆ ಉತ್ತಮವಾದ ಒಡನಾಟ ಬೆಳಸಿಕೊಂಡಿರುವ ರೇಖಾ (rekha) ರಾಕಿಂಗ್ ಸ್ಟಾರ್ ಯಶ್, ರಿಷಬ್ ಶೆಟ್ಟಿ, ಪುನೀತ್ ರಾಜಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಕ್ಲಿಕ್ಕಿಸಿಕೊಂಡಿರುವ ಕೆಲ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತದೆ.

Leave A Reply

Your email address will not be published.

error: Content is protected !!