ಸಿಹಿ ಸುದ್ದಿ ಹಂಚಿಕೊಂಡ ದಿವ್ಯಾ ಉರುಡುಗ ಮತ್ತು ಅರವಿಂದ್! ಸದ್ಯದಲ್ಲೇ ಹಸೆಮಣೆ ಏರುವ ಸಾಧ್ಯತೆ!!

0

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್(biggboss) ಸೀಸನ್ ಎಂಟರ ಸೆಟ್ನಲ್ಲಿ ಮೊದಲ ಬಾರಿಗೆ ಪರಸ್ಪರ ಭೇಟಿ ಮಾಡಿ ಸದ್ಯ ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಹಕ್ಕಿಗಳೆನಿಸಿಕೊಂಡಿರುವ ದಿವ್ಯ ಉರುಡುಗ (Divya Uruduga) ಹಾಗೂ ಅರವಿಂದ್ ಕೆಪಿ (Arvind KP) ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಟ್ರೆಂಡ್ನಲ್ಲಿ ಈ ಮುದ್ದಾದ ಜೋಡಿ ಹಕ್ಕಿಗಳಿಗೆ ವಿಶೇಷವಾದ ಅಭಿಮಾನಿ ಬಳಗವೇ ಸೃಷ್ಟಿಯಾಗಿದ್ದು, ಇವರಿಬ್ಬರ ಹೆಸರಿನಲ್ಲಿ ಅರ್ವಿಯ(Arviya) ಎಂಬ ಫಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿದೆ.

ಪ್ರತಿನಿತ್ಯ ಒಂದಲ್ಲ ಒಂದು ಕ್ಯೂಟ್ ಮೆಮೊರಿಸ್ಗಳನ್ನು ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡುವ ದಿವ್ಯ ಹಾಗೂ ಅರವಿಂದ್ ನೆನ್ನೆ ಅಷ್ಟೇ ಇಬ್ಬರೂ ಒಟ್ಟಾಗಿ ರೆಸ್ಟೋರೆಂಟ್ ಒಂದರಲ್ಲಿ ಸಮಯ ಕಳೆದಿರುವ ಕೆಲ ಫೋಟೋಗಳನ್ನು ನಟಿ ದಿವ್ಯ ಉರುಡುಗ (Divya Uruduga) ಶೇರ್ ಮಾಡಿದರು. ಸದ್ಯ ಆ ಫೋಟೋ ಬಾರಿ ವೈರಲಾಗುತ್ತಿದ್ದು, ನೆಟ್ಟಿಗರು ಈಗಲಾದರೂ ಬೇಗ ಗುಡ್ ನ್ಯೂಸ್ ಕೊಡ್ರೋ ಎಂದು ಅರ್ವಿಯರ ಕಾಲೆಳೆದಿದ್ದಾರೆ.

Divya Uruduga Aravind Kp Marriage

ಹೌದು ಗೆಳೆಯರೇ ಪರಸ್ಪರ ಭೇಟಿ ಇಲ್ಲದಿದ್ದರೂ ಬಿಗ್ ಬಾಸ್(Big boss) ಕಾರ್ಯಕ್ರಮದಲ್ಲಿ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಾ ಒಬ್ಬರ ಕಷ್ಟಗಳನ್ನು ಮತ್ತೊಬ್ಬರು ಆಲಿಸುತ್ತಾ ಬಹಳ ಖುಷಿ ಖುಷಿಯಾಗಿ ಹಸನ್ಮುಕಿತನದಿಂದ ಮನೆಯಲ್ಲಿ ಓಡಾಡಿಕೊಂಡಿದ್ದಂತಹ ಈ ಜೋಡಿಗಳು ಅಲ್ಪಾವಧಿಯಲ್ಲಿಯೇ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ.

ಹೌದು ಗೆಳೆಯರೆ ಒಬ್ಬರಿಗೊಬ್ಬರು ತೋರುತ್ತಿದ್ದಂತಹ ಗೌರವ ಪ್ರೀತಿ ಎಲ್ಲವೂ ಯುವಜನತೆಯ ಮನಸ್ಸನ್ನು ಗೆದ್ದಿತ್ತು, ಸಿಕ್ಕರೆ ಅರವಿಂದ್(Arvin’s) ಹಾಗೂ ದಿವ್ಯ(Divya) ತರ ಪಾರ್ಟ್ನರ್ ಸಿಗಬೇಕು ಎಂದು ಅದೆಷ್ಟೋ ಜನರ ಬಾಯಲ್ಲಿ ಬಂದಿದ್ದಿದೆ. ಹೀಗೆ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಸಪೋರ್ಟ್ ಮಾಡುತ್ತ ಬಹಳ ಅನ್ಯೋನ್ಯವಾಗಿ ಓಡಾಡಿಕೊಂಡಿರುವ ಈ ಜೋಡಿಗಳು ಯಾವಾಗ ಮದುವೆಯಾಗಲಿದ್ದಾರೆ ಎಂದು ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಒಬ್ಬರಲ್ಲ ಒಬ್ಬರು ಕಮೆಂಟ್ ಮೂಲಕ ಕೇಳುತ್ತಲೇ ಇರುತ್ತಾರೆ.

ಇದ್ಯಾವುದಕ್ಕೂ ದಿವ್ಯ ಅವರಿಂದಾಗಲಿ ಅಥವಾ ಅರವಿಂದ ಅವರಿಂದಾಗಲಿ ಉತ್ತರ ಸಿಕ್ಕಿಲ್ಲ. ಹೀಗಿರುವ ನೆನ್ನೆ ಅಷ್ಟೇ ನಟಿ ದಿವ್ಯ ಉರುಡುಗ (Divya Uruduga) instagram ಖಾತೆಯಲ್ಲಿ ಶೇರ್ ಮಾಡಿದ್ದು, ಈ ಫೋಟೋಗಳೆಲ್ಲವೂ ಬಾರಿ ವೈರಲಾಗುತ್ತಿದ್ದು ಫುಡ್ ಫ್ರೆಂಡ್ಸ್ ಅಂಡ್ ಪನ್ ಕಯಂಡಾ ಡೇ ಎಂಬ ಆಪ್ಷನ್ ಬರೆದು ನಟಿ ಮಯೂರಿ ಹಾಗೂ ಸ್ನೇಹಿತೆ ಶ್ರೇಯ ಬಾಬು ಅವರೊಂದಿಗೆನ ಫೋಟೋಗಳನ್ನು ಶೇರ್ ಮಾಡಿದ್ದಾರೆ.

Leave A Reply

Your email address will not be published.

error: Content is protected !!
Footer code: