ಬಾರಿ ವೈರಲ್ ಆಗ್ತಿದೆ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಮದುವೆ ಫೋಟೋಸ್! ಆಲ್ಬಮ್ ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ!

0

ಆಲ್ಬಮ್ ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ!ಕನ್ನಡ ಸಿನಿಮಾ ರಂಗದಲ್ಲಿ ನಟನಾಗಿ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಯಶಸ್ವಿ ಸಿನಿಮಾಗಳನ್ನು ನೀಡಿ ಅದೊಂದು ಕಾಲದಲ್ಲಿ ಉತ್ತುಂಗದ ಶಿಖರದಲ್ಲಿದ್ದಂತಹ ನಟ. ಇಂದಿಗೂ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿರುವ ರವಿಚಂದ್ರನ್ ಸದ್ಯ ತಮ್ಮ ಮಕ್ಕಳ ಸಿನಿ ಬದುಕಿನ್ತ ಗಮನ ಹರಿಸುತ್ತಿದ್ದಾರೆ.

ಹೌದು ಗೆಳೆಯರೇ ಈಗಾಗಲೇ ಯಶಸ್ವಿ ಸಿನಿಮಾಗಳ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದ್ದು, ಮುಂದಿನ ದಿನಗಳಲ್ಲಿ ತಂದೆಯಂತೆ ಯಶಸ್ಸು ಸಿಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ. ಇನ್ನು ರವಿಚಂದ್ರನ್ ಅವರ ದೊಡ್ಡ ಮಗ ಮನೋರಂಜನ್ ರವಿಚಂದ್ರನ್ (Manoranjan Ravichandran) 22 ಆಗಸ್ಟ್ 2022ರಂದು ತಮ್ಮ ಬಹುಕಾಲದ ಗೆಳತಿ ಸಂಗೀತ(Sangeetha) ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಅದ್ದೂರಿ ಮದುವೆ ಸಂಭ್ರಮಕ್ಕೆ ಸ್ಯಾಂಡಲ್ ವುಡ್ ನ ಸಾಕಷ್ಟು ಸಿನಿ ತಾರೆಯರು ಸಾಕ್ಷಿಯಾಗಿ ನವ ವಧು ವರರನ್ನು ಅರಸಿ ಆಶೀರ್ವದಿಸಿದರು. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾ (social media) ದಲ್ಲಿ ಬಾರಿ ವೈರಲ್ ಆಗುತ್ತಿದ್ದು, ನೀವು ಕೂಡ ರವಿಚಂದ್ರನ್ ಪುತ್ರನ ಮದುವೆಗೆ ಯಾರೆಲ್ಲಾ ಸ್ಟಾರ್ ಸೆಲೆಬ್ರಿಟಿಗಳು (star celebrities) ಆಗಮಿಸಿದ್ದರು ಎಂಬುದನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮನೋರಂಜನ್ ರವಿಚಂದ್ರನ್ (Manoranjan Ravichandran) ಹಾಗೂ ಸಂಗೀತರ ಅದ್ದೂರಿ ಮದುವೆ ಕಾರ್ಯಕ್ರಮಗಳು ಜರಗಿದ್ದವು, ಶುಭ ಮುಹೂರ್ತದಲ್ಲಿ ಮನೋರಂಜನ್ ಸಂಗೀತಾ (Sangeeta) ರ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು. ಈ ಸುಂದರಗಳಿಗೆಗೆ ರವಿಚಂದ್ರನ್ ಅವರ ಆಪ್ತರು, ಸ್ನೇಹಿತರು ಹಾಗೂ ಕುಟುಂಬಸ್ಥರು ಸಾಕ್ಷಿಯಾದರು.

ಸ್ಯಾಂಡಲ್ವುಡ್ನ ಸಿನಿ ತಾರೆಯರಾದ ಶಿವರಾಜ್ ಕುಮಾರ್, ಉಮಾಶ್ರೀ, ಅಕುಲ್ ಬಾಲಾಜಿ, ಮಾಸ್ಟರ್ ಆನಂದ್, ಹಂಸಲೇಖ, ಸಾನ್ವಿ ಶ್ರೀವತ್ಸವ ಮುಂತಾದ ಸ್ಟಾರ್ ನಟ ನಟಿಯರು ಬಂದು ನವ ವಧು ವರರನ್ನು ಆಶೀರ್ವದಿಸಿದರು. ಇನ್ನು ಈಗಾಗಲೇ ಸಾಹೇಬಾ, ಬೃಹಸ್ಪತಿ ಹಾಗೂ ಮೊಗ್ಗಿನಪೇಟೆಯಂತಹ ಸಿನಿಮಾಗಳನ್ನು ನೀಡಿರುವ.

ಮನೋರಂಜನ್ ರವಿಚಂದ್ರನ್ ತಮ್ಮ ತಂದೆಯವರ ರಣಧೀರ (Ranadheera) ಹಾಗೂ ಪ್ರೇಮಲೋಕ (Premaloka)ದಂತಹ ಸಿನಿಮಾಗಳ ರೀ ಕ್ರಿಯೇಟ್ (recreate) ಮಾಡುವ ಉದ್ದೇಶದಲ್ಲಿದ್ದಾರಂತೆ. ಮುಂದಿನ ದಿನಗಳಲ್ಲಿ ತಮ್ಮ ತಂದೆಯಂತೆಯೇ ಅದ್ಭುತ ಯಶಸ್ಸು ಕಾಣಲಿದ್ದಾರಾ? ಎಂಬುದನ್ನು ಕಾದುನೋಡಬೇಕಿದೆ.

Leave A Reply

Your email address will not be published.

error: Content is protected !!
Footer code: