Sihi Kahi Chandru : ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಕಾಮಿಡಿ ಕಿಲಾಡಿಗಳು ನಯನ, ಬಸರಿ ಬಯಕೆಯನ್ನು ಈಡೇರಿಸಿದ ಸಿಹಿ ಕಹಿ ಚಂದ್ರು!!

0

Sihi Kahi Chandru : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು(Comedy Kiladigalu) ಎಂಬ ಕಿರುತೆರೆ ಶೋ ಮೂಲಕ ಕನ್ನಡಿಗರಿಗೆ ಪರಿಚಯಗೊಂಡಂತಹ ಪ್ರತಿಭೆ ನಯನ ತಮ್ಮ ಹಾಸ್ಯ ಪ್ರಜ್ಞೆಯ ಮೂಲಕವೇ ಸಾಕಷ್ಟು ಅವಕಾಶಗಳ ಜೊತೆಗೆ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಹೀಗೆ ಕಳೆದ ಕೆಲವು ವರ್ಷಗಳ ಹಿಂದಷ್ಟೇ ಮನೆಯವರು ನೋಡಿದ ಹುಡುಗನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ನಟಿ ಮದುವೆಯಾದದ್ದು ಯಾರನ್ನ? ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರ? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ಹೊರಟಿದ್ದೇವೆ.

ಹೀಗಾಗಿ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ 19 ಏಪ್ರಿಲ್ 2018 ರಂದು ಶರತ್ ಶರು(Sharath sharu) ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಯನ ಅವರಿಗೆ ಸಾಕಷ್ಟು ರಿಯಾಲಿಟಿ ಶೋಗಳ ಅವಕಾಶ ದೊರಕುತ್ತದೆ. ಹೀಗೆ ವೈಯಕ್ತಿಕ ಹಾಗೂ ವೃತ್ತಿ ಬದುಕು ಎರಡನ್ನು ಮ್ಯಾರೇಜ್ ಮಾಡಿಕೊಂಡು ಕಾಮಿಡಿ ಕಿಲಾಡಿಗಳು ಎಂಬ ಹಾಸ್ಯ ರಿಯಾಲಿಟಿ ಶೋನಲ್ಲಿ ಹಲವಾರು ಸೀಸನ್ಗಳಲ್ಲಿ ಕಾಣಿಸಿಕೊಂಡ ನಯನ(Nayana) ಅವರು.

ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀ ರೇಣುಕಾ ಎಲ್ಲಮ್ಮ(Sri Renuka Yellamma) ಸೀರಿಯಲ್ನಲ್ಲಿ ಬಹುಮುಖ್ಯ ಪಾತ್ರ ಒಂದರಲ್ಲಿ ಅಭಿನಯಿಸುತ್ತಿದ್ದಾರೆ. ಇದಲ್ಲದೆ ಶಾರ್ಟ್ ಮೂವಿಗಳ ಮೂಲಕ ಯೂಟ್ಯೂಬ್ ಚಾನೆಲ್ ನಲ್ಲಿಯೂ ಸದ್ದು ಮಾಡುತ್ತಿರುವ ನಯನ(Nayana) ಅವರು ನೆನ್ನೆ ಅಷ್ಟೇ ಸಿಹಿ ಕಹಿ ಚಂದ್ರು ನಡೆಸಿಕೊಡುವ ಬೊಂಬಾಟು ಭೋಜನ ಕಾರ್ಯಕ್ರಮಕ್ಕೆ ಬಂದು ಬಸರಿ ಬಯಕೆಯನ್ನು ತೀರಿಸಿಕೊಂಡರು.

ಹೌದು ಗೆಳೆಯರೇ ಅವರಿಗೆ ಚಂದ್ರು ಅವರ ಕೈಯಲ್ಲಿ ರುಚಿಕರವಾದ ಅಡುಗೆ ತಿನ್ನಬೇಕೆಂಬ ಬಯಕೆ ಇತ್ತಂತೆ. ಇದಕ್ಕೆ ಚಂದ್ರು(Chandru) ಅವರು ರುಚಿಕರವಾದ ಪಾನಿಪುರಿ ಮಾಡಿಕೊಡುವ ಮೂಲಕ ಬಸರಿ ಬಯಕೆಯನ್ನು ತೀರಿಸಿದ್ದಾರೆ. ಹೀಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಶರತ್ ಮತ್ತು ನಯನ ದಂಪತಿಗಳಿದ್ದು ಆಗಾಗ ತಮ್ಮ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳೊಡನೆ ಒಡನಾಟದಲ್ಲಿರುತ್ತಾನೆ.

Leave A Reply

Your email address will not be published.

error: Content is protected !!
Footer code: