WhatsApp Group Join Now
Telegram Group Join Now

Sameer Acharya: ಸ್ನೇಹಿತರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್(Bigg Boss) 8ರ ಸ್ಪರ್ಧೆಯಾಗಿ ಮನೆಯನ್ನು ಪ್ರವೇಶಿಸಿ ತಮ್ಮ ಅದ್ಭುತ ಆಟಗಾರಿಕೆ ಹಾಗೂ ನಡೆಯಿಂದ ಕನ್ನಡಿಗರ ಮನಸ್ಸನ್ನು ಸೆಳೆದಂತಹ ಸಮೀರ್ ಆಚಾರ್ಯ(Sameer Acharya) ಒಂದಲ್ಲ ಒಂದು ವಿಚಾರದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ.

ಹೌದು ಗೆಳೆಯರೇ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆಯವರು ಸಮೀರ್ ಆಚಾರ್ಯ(Sameer Acharya) ಅವರ ಮೇಲೆ ಕೈ ಮಾಡಿ ಮನೆಯಿಂದ ಹೊರ ಬಂದಿದ್ದರು. ಈ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದಂತಹ ಸಮೀರ್ ಆಚಾರ್ಯ(Sameer Acharya) ಹಲವು ದಿನಗಳ ಕಾಲ ದೊಡ್ಮನೆಯಲ್ಲಿ ಉಳಿದುಕೊಂಡರು. ಇದಾದ ಬಳಿಕ ರಾಜ ರಾಣಿ ಕಾರ್ಯಕ್ರಮಕ್ಕೂ ಸ್ಪರ್ಧಿಯಾಗಿ ಭಾಗವಹಿಸಿದಂತಹ ಸಮೀರ್ ಆಚಾರ್ಯ ಮತ್ತು ಪತ್ನಿ ಶ್ರಾವಣಿ

ಹಲವು ಬಾರಿ ವೇದಿಕೆಯ ಮೇಲೆ ನಮಗೆ ಮಕ್ಕಳಾಗುತ್ತಿಲ್ಲ, ಹಿಂದೆ ಮಿಸ್ ಕ್ಯಾರೇಜ್ ಆಗಿ ನಾವು ಬಹಳ ಆಸೆ ಪಟ್ಟು ಬರಮಾಡಿಕೊಳ್ಳ ಬೇಕೆಂದುಕೊಂಡಿದ್ದಂತಹ ಮಗು ಹೊರಟು ಹೋಯಿತು ಎಂದು ಕಣ್ಣೀರು ಹಾಕಿದರು. ಇದಾದ ಬಹುದಿನಗಳ ನಂತರ ಶ್ರಾವಣಿ(Shravani) ಹೆಣ್ಣು ಮಗು ಒಂದಕ್ಕೆ ಜನ್ಮ ನೀಡಿದ್ದು, ಈ ಸಂತಸದ ಸುದ್ದಿಯನ್ನು ಸಮೀರ್ ಆಚಾರ್ಯ(Sameer Acharya) ಮತ್ತು ಶ್ರಾವಣಿ ತುಳಜಾ ಭವಾನಿ ಬಂದಳು ಎಂಬ ಕ್ಯಾಪ್ಚರ್ ಬರೆದು ಮಗುವಿನ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು.

ಹೀಗೆ ಬಿಡು ಸಿಕ್ಕಾಗಲ್ಲ ತಮ್ಮ ಮಗಳೊಂದಿಗೆ ರೀಲ್ಸ್ ವಿಡಿಯೋಗಳನ್ನು ಮಾಡಿ ಅದನ್ನು ತಮ್ಮ instagram ಹಾಗೂ facebook ಖಾತೆಯಲ್ಲಿ ಹಂಚಿಕೊಳ್ಳುವ ಸಮೀರ್ ಆಚಾರ್ಯ ಮತ್ತು ಶ್ರಾವಣಿ ಸದಾ ವೈರಲ್ ಆಗುತ್ತಿರುತ್ತಾರೆ. ಇದೀಗ ಈ ದಂಪತಿಗಳ ಮುದ್ದು ಮಗಳ ನಾಮಕರಣದ ಫೋಟೋಸ್ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು, ಅಭಿಮಾನಿಗಳು ಸದಾ ಹೀಗೆ ಖುಷಿಯಿಂದ ಇರಿ ಎಂದು ಕಮೆಂಟ್ ಮಾಡುತ್ತಾ ಸುಂದರ ಕುಟುಂಬವನ್ನು ಹರಸಿ ಹಾರೈಸುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: