WhatsApp Group Join Now
Telegram Group Join Now

ಕಳೆದ ಕೆಲವು ದಿನಗಳಿಂದ ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್ 2 ಬಾರಿ ಸಂಚಲನಕ್ಕೆ ಗ್ರಾಸವಾಗುತ್ತಿದೆ. ಹೌದು ಮನೆಯವರೆಲ್ಲರೂ ಕುಳಿತು ವೀಕ್ಷಿಸುವಂತಹ ಈ ಕಾರ್ಯಕ್ರಮದಲ್ಲಿ 30 ಸೆಕೆಂಡುಗಳ ಕಾಲ ಹಿಂದಿ ಕಿರುತೆರೆ ನಟ ಜಾಡ್ ಹದಿದ್(Jad Hadid) ಆಕಾಂಕ್ಷ ಪೂರಿ (Akanksha Puri)ಗೆ ಚುಂಬಿಸಿದ್ದಾರೆ. ಈ ವಿಡಿಯೋ ಸದ್ಯ ನೋಡುಗರ ಕೋಪಕ್ಕೆ ಗ್ರಹಾಸವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯಾದಂತಹ ಅ-ಸಭ್ಯ ವರ್ತನೆ ಮಾಡಲು ಅವಕಾಶ ನೀಡಿರುವ.

ಬಿಗ್ ಬಾಸ್ ತಂಡದ ವಿರುದ್ಧ ಹಾಗೂ ಆ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಅವರ ವಿರುದ್ಧ ನೆಟ್ಟಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೌದು ಸ್ನೇಹಿತರೆ ಕಳೆದ ಕೆಲವು ದಿನಗಳ ಹಿಂದಷ್ಟೇ ಜಾಡ್ ಹದಿದ್(Jad Hadid) ಮತ್ತು ಆಕಾಂಕ್ಷ ಪೂರಿ (Akanksha Puri) ನಡುವೆ ಉತ್ತಮವಾದ ಬಾಂಧವ್ಯ ಬೆಳೆಯುತ್ತಿತ್ತು. ಇದು ಅಭಿಮಾನಿಗಳಿಗೂ ಕೂಡ ಬಹಳ ಇಷ್ಟವಾಗುತ್ತಿತ್ತು.

ಜೊತೆಗೆ ಎಲ್ಲಾ ಆಟೋಟಿಕೆಗಳಲ್ಲಿಯೂ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಹೊಂದಿಕೊಂಡಿರುತ್ತಾರೆ. ಅಲ್ಲದೆ ಇವರಿಬ್ಬರ ಸ್ನೇಹದ ಹೆಸರಿನಲ್ಲಿ ಸಾಕಷ್ಟು ಪ್ಯಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿದೆ. ಹೀಗಿರುವಾಗ ಕಳೆದ ಕೆಲ ದಿನಗಳ ಹಿಂದಿನ ಸಂಚಿಕೆಯಲ್ಲಿ ಜಾಡ್ ಆಕಾಂಕ್ಷ ಪೂರಿ (Akanksha Puri)ಳನ್ನು ಜೈಲಿನಿಂದ ಬಿಡಿಸುವ ಸಲುವಾಗಿ ಅವಿನಾಶ್(Avinash) ಸವಾಲ್ ಒಂದನ್ನು ಹಾಕಿದರು.

ಹೀಗೆ ಆ ಸವಾಲಿನಲ್ಲಿ ಆಕಾಂಕ್ಷಳಿಗೆ 30 ಸೆಕೆಂಡುಗಳ(30second)ಗಳ ಕಾಲ ಕಿಸ್ ಮಾಡುವಂತೆ ಜಾಡಿಗೆ ಹೇಳಲಾಯಿತು. ಇದನ್ನು ಒಪ್ಪಿಕೊಂಡ ಇಬ್ಬರು ಹುಬ್ಬೆರುವಂತೆ ತುಟಿಗೆ ತುಟಿ ಸೇರಿಸಿ ಚುಂಬಿಸಿದ್ದಾರೆ. ಮೊದಲಿಗೆ ಇತರ ಸ್ಪರ್ಧಿಗಳೆಲ್ಲ ಇವರಿಬ್ಬರೂ ಈ ಸವಾಲನ್ನು ಮಾಡುವುದಿಲ್ಲ ಎಂದು ಭಾವಿಸಿದ್ದರು.

ಆದರೆ ಹೇಳಿದೊಡನೆ ಈಗಾಗಲೇ ಮದುವೆಯಾಗಿ ನಾಲ್ಕು ವರ್ಷದ ಮಗುವಿರುವಂತಹ ಜಾಡ್ ಆಕಾಂಕ್ಷಗಳಿಗೆ ಚುಂಬಿಸುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋ ವೂಟ್ ಆಪ್ನಲ್ಲಿ ಟೆಲಿಕಾಸ್ಟ್ ಆದ ಬೆನ್ನಲ್ಲೇ ನೋಡುಗರ ಮಿಶ್ರ ಪ್ರತಿಕ್ರಿಯೆಗೆ ಗ್ರಾಸವಾಗಿದ್ದು, ವೀಕೆಂಡ್(weekend) ನಲ್ಲಿ ಸಲ್ಮಾನ್ ಖಾನ್ ಕೂಡ ಜಾಡ್(Jad) ಹಾಗೂ ಆಕಾಂಕ್ಷ ಪೂರಿ (Akanksha Puri)ರಿಗೆ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: