WhatsApp Group Join Now
Telegram Group Join Now

Rambha : ಸ್ನೇಹಿತರೆ, 80-90 ದಶಕದಲ್ಲಿ ಸಾಕಷ್ಟು ಸ್ಟಾರ್ ನಟ ನಟಿಯರು ಸಿನಿಮಾ ರಂಗವನ್ನು ಪ್ರವೇಶ ಮಾಡಿ ತಮ್ಮ ಅಮೋಘ ಅಭಿನಯದ ಮೂಲಕ ಸಿನಿಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ನಮ್ಮ ಅಂದದ ಮೈಮಾಟ, ಸುಂದರ ನಗು ಹಾಗೂ ಅದ್ಭುತ ಅಭಿನಯದ ಮೂಲಕ ಆಗಿನ ಪಡ್ಡೆ ಹುಡುಗರ ಮನಸ್ಸನ್ನು ಗೆದ್ದಿದಂತಹ ನಟಿ ರಂಭ (Rambha) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ?

ಸಿನಿ ಇಂಡಸ್ಟ್ರಿಯ ಬಂಗಡಿ ಮೀನು ಎಂದೇ ಪ್ರಸಿದ್ಧಿ ಪಡೆದಿದ್ದಂತಹ ಈ ನಟಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ ಪೀಕ್(peak)ನಲ್ಲಿ ಇದ್ದವರು. ಅವಕಾಶಗಳ ಸುರಿಮಳೆ ಇರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಂಭ ಮದುವೆಯಾದದ್ದು ಯಾರನ್ನ? ಇವರ ಕುಟುಂಬ ಹೇಗಿದೆ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

1992ರಲ್ಲಿ ನಿರ್ಮಾಣವಾದ ಒಕ್ಕಟಿ ಅಡಕ್ಕೂ (Okkati Adakku) ಎಂಬ ತೆಲುಗು ಸಿನಿಮಾದ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. 90ರ ದಶಕದಲ್ಲಿ ಜಗ್ಗೇಶ್ ಅವರ ಸರ್ವರ್ ಸೋಮಣ್ಣ(Server somanna) ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಮೂಲಕ ರಂಭಾ ಸ್ಯಾಂಡಲ್ವುಡ್ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಓ ಪ್ರೇಮವೇ ಪಾಂಚಾಲಿ ಸಾಹುಕಾರ ಬಾಬಾ ಬಾಮೈದ ಹೀಗೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು.

Actress Rambha Family Photos

ಹೀಗೆ ಎಲ್ಲಾ ಸಿನಿಮಾ ರಂಗದಲ್ಲಿಯೂ ತೊಡಗಿಕೊಂಡಿದ್ದ ರಂಭ ಬೇಡಿಕೆ ಇರುವಾಗಲೇ ಕೆನಡಾ ಮೂಲದ ಉದ್ಯಮಿ ಇಂದ್ರ ಕುಮಾರ್(Indrakumar) ಎಂಬುವರೊಂದಿಗೆ ಏಪ್ರಿಲ್ ಎಂಟನೇ ತಾರೀಕು 2010 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಲಾನ್ಯ, ಶಶಾ ಎಂಬ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಒಂದು ಮುದ್ದಾದ ಗಂಡು ಮಗು ಕೂಡ ಇದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಇರುವಂತಹ ರಂಭ(Ramba) ತಮ್ಮ ಸಕುಟುಂಬದ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳು ಬಾರಿ ವೈರಲ್ ಆಗುತ್ತಿದ್ದು, ನೈಂನ್ಟಿಸ್ ನಟಿಯನ್ನು ಕಣ್ಣು ತುಂಬಿಕೊಂಡಂತಹ ಅಭಿಮಾನಿಗಳು ಕಮೆಂಟ್ಗಳ ಸಾಗರವನ್ನೇ ಹರಿಸುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: