Sanjana Burli : ಡಾನ್ಸ್ ವಿಡಿಯೋವನ್ನು ಶೇರ್ ಮಾಡಿಕೊಂಡ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದೇ ಹೆಚ್ಚು. ಈ ವಿಚಾರದಲ್ಲಿ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ (Sanjana Burli) ಹೊರತಾಗಿಲ್ಲ. ಈ ಧಾರಾವಾಹಿಯಲ್ಲಿ ತನ್ನ ನಟನೆಯಿಂದಲೇ ಎಲ್ಲರಿಗೂ ಹತ್ತಿರವಾಗಿದ್ದಾರೆ.
ಹೌದು ಓದಿನ ಜೊತೆಗೆ ನಟನೆಯಲ್ಲಿ ತೊಡಗಿಸಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.ಇಲ್ಲಿಯವರೆಗೆ ಸಂಜನಾ ಬುರ್ಲಿ (Sanjana Burli) ಸಂಜನಾ 395 ಪೋಸ್ಟ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿಯ ಒಂದಲ್ಲ ಒಂದು ಪೋಸ್ಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿರುತ್ತದೆ. ಇತ್ತೀಚೆಗಷ್ಟೇ ನಟಿ ಸಂಜನಾ ಬುರ್ಲಿಯವರು ಡಾನ್ಸ್ ವಿಡಿಯೋ (Dance Video) ವನ್ನು ಶೇರ್ ಮಾಡಿಕೊಂಡಿದ್ದರು.
Sanjana Burli Dance Video Viral
ಹಸಿರು ಬಣ್ಣದ ಸೀರೆ ಉಟ್ಟು ಡಾನ್ಸ್ ಮಾಡಿದ್ದ ನಟಿಯ ಹಳೆಯ ಡ್ಯಾನ್ಸ್ ಗಿಂತ ಈಗಿನ ಡ್ಯಾನ್ಸ್ ನಲ್ಲಿ ಇಂಪ್ರೂಮೆಂಟ್ ಇದೆ ಎಂದಿದ್ದರು. ಆದರೆ ಇದೀಗ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಡಾನ್ಸ್ ವಿಡಿಯೋ ಶೇರ್ ಮಾಡಿಕೊಂಡಿದ್ದು, “ನನ್ನ ಮೂಳೆಯಲ್ಲಿ ಏನೋ ಮ್ಯಾಜಿಕ್ ಇದೆ, ವೃತ್ತಿಪರ ಡ್ಯಾನ್ಸರ್ ಅಲ್ಲ, ಆದರೆ ಭಾವೋದ್ರಿಕ್ತ ನೃತ್ಯಗಾರ್ತಿ”ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಗೆ ಮೂವತ್ತೊಂದು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ.ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿಯವರ ಹಿನ್ನೆಲೆಯನ್ನು ಗಮನಿಸಿದರೆ, ಇಂಜಿನಿಯರಿಂಗ್ (Engineering) ಓದುತ್ತಿದ್ದಾರೆ. ಓದಿನ ನಡುವೆ ಫ್ರೀ ಮಾಡಿಕೊಂಡು ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಓದು ಹಾಗೂ ನಟನೆ ಈ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುವ ನಟಿ ಸಂಜನಾ ಬುರ್ಲಿ ಅವಕಾಶಗಳು ಬರುತ್ತಲೇ ಇದೆ.
ಈಗಾಗಲೇ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ( Ramana Searching Ramana Missing), ನಾನ್ ವೆಜ್ (Non Veg) ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳು ತೆರೆ ಕಾಣಲಿದೆ.ಅದಲ್ಲದೆ, ಇತ್ತೀಚೆಗಷ್ಟೇ ಸ್ನೇಹಿತರೊಂದಿಗೆ ಕೊಡಗಿ (Coorg) ಗೆ ಪ್ರವಾಸ ಕೈಗೊಂಡಿದ್ದು, ಕೂರ್ಗ್ ನಲ್ಲಿಯೇ ತನ್ನ ಬರ್ತ್ಡೇ ಸೆಲೆಬ್ರೇಶನ್ ಮಾಡಿದ್ದರು. ಇನ್ನೊಂದೆಡೇ ಈಜು ಕೊಳ (Swimming Pool) ದಲ್ಲಿ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರು.
ಕೊಡಗಿನಲ್ಲಿ ಎಳೆಯ ಬೆಂಡೆಕಾಯಿಯನ್ನು ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ನೀಡಿದ್ದರು. ನಟಿಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಂಜನಾ ಬುರ್ಲಿಯವರಿಗೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬಾರಿ ಆಫರ್ ಗಳು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಬೇಡಿಕೆಯ ನಟಿಯಾಗುವುದರಲ್ಲಿ ಎರಡು ಮಾತಿಲ್ಲ.