ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಅವರು ರಕ್ಷಿತ್ ಶೆಟ್ಟಿ ಕೈಗೆ ರಾಖಿ ಕಟ್ಟಿ ಕಾಲಿಗೆ ನಮಸ್ಕರಿಸಿದ ಸುಂದರ ಕ್ಷಣಗಳು! ಅಣ್ಣ ತಂಗಿಯ ಮುದ್ದಾದ ಫೋಟೋಸ್ ಇಲ್ಲಿವೆ!!

0

ಕನ್ನಡ ಚಿತ್ರರಂಗದ ಆತ್ಮೀಯ ಸ್ನೇಹಿತರು ಎಂದೊಡನೆ ನಮ್ಮೆಲ್ಲರಿಗೂ ವಿಷ್ಣು ದಾದಾ ಮತ್ತು ಅಂಬರೀಶ್ (Vishnu- Ambarish) ಅವರ ಕುಚಿಕು ಗೆಳೆತನ ನೆನಪಾಗಿಬಿಡುತ್ತದೆ. ಕೊನೆಯವರೆಗೂ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಒಬ್ಬರ ಏಳು-ಬೀಳುಗಳಲ್ಲಿ ಮತ್ತೊಬ್ಬರು ಹೆಗಲಾಗಿ ನಿಲ್ಲುತ್ತಾ ಯುವ ಜನತೆಗೆ ಸ್ನೇಹ ಎಂದರೆ ಹೇಗಿರಬೇಕು ಎಂಬುದನ್ನು ತೋರಿಸಿ ಕೊಟ್ಟಂತಹ ಮಹಾನ್ ಪುರುಷರು.

ಇವರಿಬ್ಬರ ಸ್ನೇಹಕ್ಕೆ ಸರಿದೂಗುವಂತಹ ಸ್ನೇಹವನ್ನು ಸ್ಯಾಂಡಲ್ವುಡ್ನ ಮತ್ಯಾವುದೇ ನಟರಲ್ಲಿಯೂ ಎಷ್ಟು ದಿನಗಳ ಕಾಲ ನಾವು ಕಂಡಿಯೇ ಇಲ್ಲ. ಆದರೆ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ(Rakshith shetty- Rishab Shetty) ಹಲವಾರು ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡುತ್ತ ಇಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಸಪೋರ್ಟ್ ಮಾಡುತ್ತಾ ಟ್ರೂ ಫ್ರೆಂಡ್ಶಿಪ್ ಅಂದ್ರೆ ಏನು ಎಂಬುದನ್ನು ಅಭಿಮಾನಿಗಳಿಗೆ ಅರ್ಥ ಮಾಡಿಸುತ್ತಿದ್ದಾರೆ.

ಅದಕ್ಕೆ ಕಳೆದ ಕೆಲವು ದಿನಗಳ ಹಿಂದೆ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಮೂವರು ಒಂದೇ ತಟ್ಟೆಯಲ್ಲಿ ಊಟ ಮಾಡುವ ಮೂಲಕ ತಮ್ಮಿಬ್ಬರ ಗೆಳೆತನ (Friendship) ಎಷ್ಟು ಮಧುರವಾಗಿದೆ ಎಂಬ ಸತ್ಯವನ್ನು ಅಭಿಮಾನಿಗಳಿಗೆ ಅರ್ಥ ಮಾಡಿಸಿದರು. ಹೌದು ಗೆಳೆಯರೇ ಈ ವಿಡಿಯೋ ಬಹು ದೊಡ್ಡ ಮಟ್ಟದಲ್ಲಿ ವೈರಲ್ ಕೂಡ ಆಗಿತ್ತು.

ರಿಷಬ್ ಶೆಟ್ಟಿ (Rishab shetty) ಅವರ ಮನೆಯಲ್ಲಿ ರಕ್ಷಿತ್ ಹಾಗೂ ಪ್ರಮೋದ್ ಶೆಟ್ಟಿ ಸೇರಿ ಒಟ್ಟಾಗಿ ಬರ್ತಡೆ ಸೆಲೆಬ್ರೇಶನ್ ಅನ್ನು ಅದ್ಧೂರಿಯಾಗಿ ಮಾಡಿದರು. ಅಲ್ಲದೆ ಇವರಿಬ್ಬರ ಗೆಳೆತನಕ್ಕೆ ನಟಿ ಶೀತಲ್ ಶೆಟ್ಟಿ (Sheetal Shetty) ಕೂಡ ಸಾಕ್ಷಿಯಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ನಟರಾದರು ಕೂಡ ಬಹಳ ಸಿಂಪಲ್ ಆಗಿ ಒಂದೇ ತಟ್ಟೆಯಲ್ಲಿ ಅದುವೇ ನೆಲದ ಮೇಲೆ ಕುಳಿತು ಮೂವರು ಸ್ಟಾರ್ ನಟರು ಊಟ ಮಾಡಿದಂತಹ ವಿಡಿಯೋವನ್ನು ಶೀತಲ್ ತಮ್ಮ (instagram) ಖಾತೆಯಲ್ಲಿ ಶೇರ್ ಮಾಡಿದರು.

ಈ ವಿಡಿಯೋ ಹೊರಬಂದ ಕೆಲವೇ ಕೆಲವು ನಿಮಿಷಗಳಲ್ಲಿಯೇ ಅಭಿಮಾನಿಗಳಿಂದ ಅದ್ಬುತ ರೆಸ್ಪಾನ್ಸ್ ದೊರಕಿತ್ತು. ಇವರಿಬ್ಬರ ಸ್ನೇಹಕ್ಕೆ ವಿಶೇಷ ಫ್ಯಾನ್ ಪೇಜ್ಗಳು ಕೂಡ ಕ್ರಿಯೇಟ್ ಆಗಿದೆ, ಇನ್ನು ರಕ್ಷಿತ್ ರಿಷಬ್ ಅವರೊಂದಿಗೆ ಮಾತ್ರವಲ್ಲದೆ ಅವರ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆಯೂ ಮಧುರವಾದ ಅಣ್ಣ ತಂಗಿ ಎಂಬ ಬಾಂಧವ್ಯವನ್ನು ಹೊಂದಿದ್ದು.

ಕಳೆದ ಕೆಲವು ದಿನಗಳ ಹಿಂದೆ ಪ್ರಗತಿ ರಕ್ಷಿತ್ ಅವರಿಗೆ ಆರತಿ ಬೆಳಗಿ ರಾಖಿ ಕಟ್ಟುವ ಮೂಲಕ ಅಣ್ಣನಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಕುರಿತದ ಕೆಲವು ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ನೀವು ಕೂಡ ರಕ್ಷಿತ್ (Rakshith) ಹಾಗೂ ಕುಟುಂಬದ ಒಡನಾಟ ಹೇಗಿದೆ ಎಂಬುದನ್ನು ಈ ಸುಂದರ ಫೋಟೋಗಳ ಮೂಲಕ ಕಣ್ತುಂಬಿಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!