ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅವರ ಬಾಲ್ಯದ ಫೋಟೋಸ್!! ಆಗಿನ ಕಾಲದಲ್ಲೇ ನಟಿ ಸುಮಲತಾ ಮತ್ತು ಜಲೀಲನ ಕ್ಯೂಟ್ ಲವ್ ಸ್ಟೋರಿ ಹೇಗೆ ಇತ್ತು ಗೊತ್ತಾ??

0

ಸ್ಯಾಂಡಲ್ ವುಡ್ನ ಕ್ಯೂಟ್ ಕಪಲ್ ಎಂಬ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸುವಂತಹ ನಟ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ (Ambareesh & Sumalatha) ಅವರ ಲವ್ ಸ್ಟೋರಿ(Love story) ಅದೆಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ. ಆಗಿನ ಕಾಲಕ್ಕೆ ರೆಬಲ್ ಲವ್ ಬರ್ಡ್ಸ್ ಎಂದು ಕರೆಯಲ್ಪಡುತ್ತಿದ್ದ ಸುಮಲತಾ ಹಾಗೂ ಅಂಬರೀಶ್ ಪ್ರೀತಿಸಿದ್ದು ಹೇಗೆ? ಎಂಬುದನ್ನು ನಾವಿವತ್ತು ಈ ಪುಟದ ಮುಖಾಂತರ ಮೀಸ ಹೊರಟಿದ್ದೇವೆ. ನಿಮಗೂ ಈ ಮಾಹಿತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ರೆಬೆಲ್ ಜೋಡಿಗಳ ಲವ್ ಸ್ಟೋರಿ ಕೇಳಿ.

ಹೌದು ಗೆಳೆಯರೇ ನಟ ಅಂಬರೀಶ್ ಮತ್ತು ಸುಮಲತಾ ಆಹುತಿ(Ahuthi) ಎಂಬ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿರುವಾಗ ಇಬ್ಬರ ನಡುವೆ ಸ್ನೇಹ ಮೊಳಕೆಯೊಡೆತ್ತದೆ ಆದರೆ ಈ ಸಿನಿಮಾ ಮುಗಿದ ನಂತರ ಸಂಪರ್ಕ ಮಾಡಲು ಯಾರ ಬಳಿಯೂ ಫೋನ್ ಇರಲಿಲ್ಲ, ಅಂಬರೀಶ್(Ambareesh) ಅವರು ಬೆಂಗಳೂರಿನಲ್ಲಿದ್ದರೆ ಸುಮಲತಾ (sumalatha) ಅವರು ಚೆನ್ನೈನಲ್ಲಿ ವಾಸವಿರುತ್ತಾರೆ.

ಹೀಗೆ ಹಲವು ದಿನಗಳ ಕಾಲ ಭೇಟಿಯನ್ನೇ ಮಾಡದೆ ಪರಸ್ಪರ ಒಬ್ಬರಿಗೊಬ್ಬರು ಪ್ರೇಮ ನಿವೇದನೆಯನ್ನು ಮಾಡಿಕೊಳ್ಳದೆ ಸುಮ್ಮನಿರುತ್ತಾರೆ. ಅನಂತರ ನ್ಯೂ ಡೆಲ್ಲಿ (New Delhi) ಎಂಬ ಸಿನಿಮಾದಲ್ಲಿ ಮತ್ತೆ ಒಟ್ಟಾಗಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ ಅಂಬರೀಶ್- ಸುಮಲತಾ ಇಬ್ಬರು ಪರಸ್ಪರ ತಮ್ಮ ಪ್ರೀತಿಯನ್ನು ತೋರ್ಪಡಿಸಿಕೊಂಡರು.

ಹೀಗೆ ಶೂಟಿಂಗ್ ಸಮಯದಲ್ಲಿ ಬಿಡುವು ಸಿಕ್ಕಾಗಲೆಲ್ಲ ಜೋಡಿಹಕ್ಕಿಗಳಾಗಿ ಓಡಾಡುತ್ತಿದ್ದ ಸುಮಲತಾ (sumalatha) ಹಾಗೂ ಅಂಬರೀಶ್ ಸಾಕಷ್ಟು ಕಡೆಗಳಲ್ಲಿ ಸುತ್ತಾಡಿ ಅದರ ಜೊತೆಗೆ ತಮ್ಮ ಕರಿಯರ್ನತ್ತಲು ಗಮನ ಹರಿಸಿ ಪ್ರೀತಿಸಿ ಎರಡು ವರ್ಷಗಳಾದ ಬಳಿಕ ಮದುವೆಯಾಗುವ ನಿರ್ಧಾರ ಮಾಡುತ್ತಾರೆ.

ಇಷ್ಟು ಬೇಕು ನನಗೆ ಮದುವೆ ಆಗೋಕೆ ಇಷ್ಟವಿಲ್ಲ ಎಂದು ಸದಾ ಅಂಬಿ ಮದುವೆಯನ್ನು ದೂರ ಹಾಕುತ್ತಾ ಬರುತ್ತಿದ್ದರು, ಆದರೆ ಅದೊಂದು ದಿನ ಸುಮಲತಾ (sumalatha) ಏಕಾಏಕಿ ತಮ್ಮ ಮನೆಯಿಂದ ಬಟ್ಟೆ ಬರೆಯನ್ನು ತೆಗೆದುಕೊಂಡು ಬಂದು ಅಂಬರೀಶ್ ಅವರ ಮುಂದೆ ನಿಂತು ನನ್ನನ್ನು ಮದುವೆಯಾಗ್ತಿಯೋ ಇಲ್ವೋ ಎಂದು ಕೇಳಿಕೊಳ್ಳುತ್ತಾರೆ. ಇದಕ್ಕೆ ತಳವಳಗೊಂಡಂತಹ ಅಂಬಿ ದೇವರ ಮುಂದೆ ನಿಂತು ಸುಮಲತಾ ಅವಲ ಕೊರಳಿಗೆ ತಾಳಿ ಕಟ್ಟಿದರು.

ಅಲ್ಲಿಂದ ಶುರುವಾದ ಇವರ ದಾಂಪತ್ಯ ಜೀವನ ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಸಾಗಿತು, ಈ ಜೋಡಿಗಳಿಗೆ ಅಭಿಷೇಕ್ ಅಂಬರೀಶ್(Abhishek Ambareesh) ಎಂಬ ಮುದ್ದಾದ ಮಗನು ಜನಿಸಿದರು. ಅವರ ಕೆಲ ಕ್ಯೂಟ್ ಚೈಲ್ಡ್ ವುಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಅಂಬಿ ತಮ್ಮ ಮಗನನ್ನು ಹೇಗೆಲ್ಲಾ ಮುದ್ದಾಡುತ್ತಾ ಬೆಳೆಸಿದ್ದಾರೆ ಎಂಬುದಕ್ಕೆ ಈ ಫೋಟೋಗಳು ಸಾಕ್ಷಿಯಾಗಿವೆ.

Leave A Reply

Your email address will not be published.

error: Content is protected !!
Footer code: