ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ಫೋಟೋಸ್!!

0

ಚಂದನವನದ ಬಹುಬೇಡಿಕೆಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan). ಇಂದು ಸಿನಿಮಾರಂಗದಲ್ಲಿ ಖ್ಯಾತ ನಟನಾಗಿ ಗುರುತಿಸಿಕೊಳ್ಳಲು ನಟ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ನೀಡಿ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿರುವ ದರ್ಶನ್ ಅವರು ತಮ್ಮ ಸಹಾಯ ಮಾಡುವ ಗುಣದಿಂದಲೇ ಎಲ್ಲರಿಗೂ ಚಿರ ಪರಿಚಿತರು. ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಆಗಿ ಕರೆಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ನಟ.

ಆದರೆ ಇದೀಗ ದರ್ಶನ್ ಅವರ ಕುಟುಂಬದ ಫೋಟೋವೊಂದು ವೈರಲ್ ಆಗಿವೆ. ದರ್ಶನ್ ಅವರ ಕುಟುಂಬದ ಫೋಟೋದಲ್ಲಿ ದರ್ಶನ್ ಅವರ ತಾಯಿ, ಪತ್ನಿ ವಿಜಯಲಕ್ಷ್ಮಿ (Vijayalakshmi) ಹಾಗೂ ಮಗ, ಅದರ ಜೊತೆಗೆ ದರ್ಶನ್ ಸಹೋದರ ದಿನಕರ್ ತೂಗುದೀಪ (Dinakara Tugudeepa) ಅವರ ಪತ್ನಿ ಹಾಗೂ ಮಗ ಇರುವುದನ್ನು ಈ ಫೋಟೋದಲ್ಲಿನೋಡಬಹುದು. ಈ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲೈಕ್ಸ್ ಬಂದಿವೆ.

ನಟ ದರ್ಶನ್ ಅವರ ನಟನಾ ವೃತ್ತಿಯನ್ನು ಗಮನಿಸಿದರೆ 1990 ರ ದಶಕದ ಮಧ್ಯಭಾಗದಲ್ಲಿ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟರು. ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆಯಲ್ಲಿ ನಟಿಸಿದ್ದರು. ಆದರೆ 2001 ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ (Mejestic) ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಮೆಜೆಸ್ಟಿಕ್ ಸಿನಿಮಾದಿಂದಾಗಿ ಅವರ ಬದುಕಿನ ದಿಕ್ಕೇ ಬದಲಾಯಿತು.ಆದಾದ ಬಳಿಕ ದರ್ಶನ್ ತಮ್ಮ ಸಿನಿ ಬದುಕಿನಲ್ಲಿ ದರ್ಶನ್, ಕರಿಯಾ ,ನಮ್ಮ ಪ್ರೀತಿಯ ರಾಮು, ಕಲಾಸಿಪಾಳ್ಯ, ಗಜ, ಸಾರಥಿ ಮತ್ತು ಬುಲ್ ಬುಲ್ ನಂತಹ ಯಶಸ್ವಿಯಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಾರಥಿ ಮತ್ತು 2012 ರಲ್ಲಿ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ ( Sangolli Rayanna) ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಕರಿಂದ ಪ್ರಶಂಸೆ ಪಡೆದುಕೊಂಡರು. 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ (Tugudeepa Production) ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು ವಿಭಿನ್ನ ಸಿನಿಮಾಗಳನ್ನು ನೀಡುತ್ತಿದ್ದಾರೆ.ನಟ ದರ್ಶನ್ (Actor Darshan) ಅವರು ಕ್ರಾಂತಿ (Kranti) ಸಿನಿಮಾದ ಬಳಿಕ ಕಾಟೇರ (Katera) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ತರುಣ್ ಸುಧೀರ್ (Tarun Sudheer) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ರಾಕ್‌ಲೈನ್‌ ವೆಂಕಟೇಶ್ (Rockline Venkatesh) ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ. ಕಾಟೇರ’ ಚಿತ್ರದಲ್ಲಿ 70ರ ದಶಕದ ಕತೆ ಎನ್ನಲಾಗುತ್ತಿದ್ದು, ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ಈ ವರ್ಷದ ಕೊನೆಯಲ್ಲಿ ತೆರೆ ತರಲು ಪ್ಲಾನ್ ಮಾಡಲಾಗಿದೆ.

Leave A Reply

Your email address will not be published.

error: Content is protected !!