Nishvika Naidu: ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಫೋಟೋ ತೆಗಿಸಿಕೊಂಡ ನಿಶ್ವಿಕ ನಾಯ್ಡು!

0

ಸ್ನೇಹಿತರೆ, ಅಮ್ಮ ಐ ಲವ್ ಯು(Amma I Love You) ಸಿನಿಮಾದ ಮೂಲಕ ನಟ ಚಿರಂಜೀವಿ ಸರ್ಜಾ ಅವರೊಂದಿಗೆ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದಂತಹ ನಿಷ್ವಿಕ ನಾಯ್ಡ(Nishvika Naidu) ಇಂದು ತಮ್ಮ ಯಶಸ್ವಿ ಸಿನಿಮಾಗಳಿಂದ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಅಮೋಘ ಸೌಂದರ್ಯ ಅದ್ಭುತ ನಟನೆ, ಹೀಗೆ ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡುವಂತಹ ಅಭಿನಯ ಮಾಡಿ ಎಲ್ಲರ ಗಮನ ಸೆಳೆಯುವ ನಿಷ್ವಿಕ ನಾಯ್ಡ(Nishvika Naidu) ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು,

ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಪೋಸ್ಟ್ ಮಾಡುತ್ತ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುತ್ತಾರೆ. ಸದಾ ವ್ಯಾಯಾಮ ಯೋಗ ವರ್ಕೌಟ್ ಎನ್ನುತ್ತಾ ತಮ್ಮ ಅಭಿಮಾನಿಗಳಿಗೂ ಫಿಟ್ನೆಸ್ ಕುರಿತಾದ ಕೆಲ ಟಿಪ್ಸ್ ಗಳನ್ನು ನೀಡುತ್ತಾ ಒಡನಾಟದಲ್ಲಿದ್ದ ನಿಶ್ವಿಕಾ ಏಕಾಏಕಿ ಸಾಂಪ್ರದಾಯಿಕ ಉಡುಗೆ ಧರಿಸಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿ ಕೊಂಡಿರುವ ಕೆಲ ಅಪರೂಪದ ಚಿತ್ರರಂಗಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಹೌದು ಗೆಳೆಯರೇ ನೇರಳೆ ಮತ್ತು ಕೆಂಪು ಬಣ್ಣದ ಕಾಂಬಿನೇಷನ್ ಉಡುಪನ್ನು ಧರಿಸಿ ಸಿದ್ಧರಾಮಯ್ಯನವರ ಪಕ್ಕದಲ್ಲಿ ನಿಂತು ಫೋಟೋಗೆ ನಗುತ್ತಾ ಪೊಸ್ ನೀಡಿದ್ದು ಮನೆಯ ಕಾರ್ಯಕ್ರಮ ಒಂದರಲ್ಲಿ ಸಿದ್ದರಾಮಯ್ಯನವರನ್ನು(Siddraamaiah) ಅತಿಥಿಯಾಗಿ ಆಹ್ವಾನಿಸಿರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಅದರಂತೆ ತಮ್ಮ ತಾಯಿ ಹಾಗೂ ಕುಟುಂಬಸ್ಥರ ಜೊತೆ ಗ್ರೂಪ್ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿರುವ ನಿಶ್ವಿಕ ನಾಯ್ಡ(Nishvika Naidu) ಜೋಕಾಲಿಯ ಮೇಲೆ ಕುಳಿತು ಮನೆಯವರೊಂದಿಗೆ ಆನಂದದ ಸಮಯವನ್ನು ಕಳೆಯುತ್ತಿರುವುದು ಈ ಮೂಲಕ ತಿಳಿದು ಬಂದಿದೆ.

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲಾಗುತ್ತಿದ್ದು, ಸಿದ್ದು ಹಾಗೂ ನಿಷ್ವಿಕಾರನ್ನು ಒಂದೇ ಫ್ರೇಮ್ ನಲ್ಲಿ ಕಂಡ ನೆಟ್ಟಿಗರು ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇದನ್ನೂ ಓದಿ Nikhil Kumaraswamy: ಬಾರಿ ವೈರಲ್ ಆಗ್ತಿದೆ ದೊಡ್ಮನೆಯಾ ಮುದ್ದಾದ ಬಾಲಕೃಷ್ಣನ ಫೋಟೋಸ್, ಮಗನಿಗೆ ಕೃಷ್ಣನ ವೇಷ ಹಾಕಿಸಿ ಸಂತಸ ಪಟ್ಟ ನಿಖಿಲ್ ಕುಮಾರಸ್ವಾಮಿ ದಂಪತಿಗಳು!

Leave A Reply

Your email address will not be published.

error: Content is protected !!
Footer code: