ಪತ್ನಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ ಮಾತಿನ ಮಲ್ಲ ಅಕುಲ್ ಬಾಲಾಜಿ! ಅಬ್ಬ ಇದರ ಬೆಲೆ ಎಷ್ಟು ಗೊತ್ತಾ..

0

ಸ್ನೇಹಿತರೆ, ತಮ್ಮ ಚಿಟಪಟ ಮಾತಿನ ಮೂಲಕ ಹಲವಾರು ವರ್ಷಗಳಿಂದ ಕನ್ನಡ ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮಾತಿನ ಮಲ್ಲ,ಯಶಸ್ವಿ ಆಂಕರ್ ಎಂದೆ ಗುರುತಿಸಿಕೊಂಡಿರುವಂತಹ ಅಕುಲ್ ಬಾಲಾಜಿ(Akul Balaji) ನಮ್ಮ ತಮಾಷನಿಯ ಮಾತು ಹಾಗೂ ಅದ್ಭುತ ನಿರೂಪಣಾ ಶೈಲಿಯ ಮೂಲಕ ಒಂದಲ್ಲ ಒಂದು ಕಾರ್ಯಕ್ರಮವನ್ನು ಹೋಷ್ಟ್ ಮಾಡುತ್ತ ಸದಾ ಸುದ್ದಿಯಲ್ಲಿ ಇರುತ್ತಾರೆ. ಹೀಗಿರುವಾಗ ತಮ್ಮ ವೈಯಕ್ತಿಕ ವಿಚಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಅಕುಲ್ (Akul) ಬಾರಿ ವೈರಲ್ ಆಗುತ್ತಿದ್ದು,

ತಮ್ಮ ಪ್ರೀತಿಯ ಪತ್ನಿಗೆ ದುಬಾರಿ ಬೆಲೆ ಬಾಳುವಂತ ಕಾರುವೊಂದನ್ನು ಉಡುಗೊರೆಯಾಗಿ ನೀಡಿರುವ ಮಾಹಿತಿ ತಿಳಿದು ಬಂದಿದೆ. ಹೌದು ಗೆಳೆಯರೇ ಈ ವಿಡಿಯೋವನ್ನು ಅಕುಲ್ ಬಾಲಾಜಿ ಅವರ ಪತ್ನಿ ಜೋ(Joo) ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. BYD ಎರಡು ಆವೃತ್ತಿಗಳನ್ನು ಹೊಂದಿರುವಂತಹ ಚೀನಾ ಮೂಲದ ಕಾರಾಗಿದ್ದು, ಕಾರ್ಬನ್ ಫುಟ್ ಪ್ರಿಂಟನ್ನು (Carbon Footprint) ಕಡಿಮೆ ಮಾಡುವ ಸಲುವಾಗಿ ಮನೆಗೆ ಇವಿ ಎಲೆಕ್ಟ್ರಿಕ್ ಕಾರನ್ನು(electric car) ಖರೀದಿಸಬೇಕು ಎಂಬ ಆಸೆ ಅಕುಲ್ ಪತ್ನಿ ಜೋಗೆ ಇತ್ತಂತೆ ಇದನ್ನು

ಅರಿತಂತಹ ಅಕುಲ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನೂ ಮೂಲಗಳ ಮಾಹಿತಿಯ ಪ್ರಕಾರ ಈ E6 ಬಿವೈಡಿನ ಬೆಲೆಯು ಬರೋಬ್ಬರಿ 29.15 ಲಕ್ಷ ರೂಪಾಯಿ ಆಗಿದ್ದು, ಗ್ರೇ ಬಣ್ಣದ ಕಾರಿನ ಮುಂದೆ ನಿಂತು ಪತಿ-ಪತ್ನಿ ಇಬ್ಬರು ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಕುಲ್ ಪತ್ನಿ ಇಷ್ಟು ಸುಂದರವಾದ ಸರ್ಪ್ರೈಸ್ ಕೊಟ್ಟಿದ್ದಕ್ಕೆ ಧನ್ಯವಾದಗಳು ನನ್ನ ಪ್ರೀತಿ ಎಂಬ ಕ್ಯಾಪ್ಶನ್ ಬರೆದು ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ಈ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿತ್ತು, ಮದುವೆಯಾಗಿ ಹಲವು ವರ್ಷಗಳಾದರೂ ಇಂದಿಗೂ ಕೂಡ ಬಹಳ ಕ್ಯೂಟ್ ಅದ ಸರ್ಪ್ರೈಸ್ ಗಳನ್ನು ನೀಡುತ್ತಾ ಪ್ರೀತಿಯನ್ನು ಇನ್ನಷ್ಟು ಬಿಗಿಗೊಳಿಸುತ್ತಿರುವ ಈ ದಂಪತಿಗಳ ಮೇಲೆ ಅದ್ಯಾರ ದೃಷ್ಟಿಯು ಬೀಳದೆ ಇರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

Leave A Reply

Your email address will not be published.

error: Content is protected !!
Footer code: