Naramata Gowda: ನಟಿ ನಮ್ರತಾ ಗೌಡ ಅವರ ಹೊಸ ಮನೆ ಗೃಹಪ್ರವೇಶಕ್ಕೆ ಕನ್ನಡ ಕಿರುತೆರೆ ತಾರೆಯರ ಸಮಾಗಮ!

0

ಸ್ನೇಹಿತರೆ, ಪುಟ್ಟಗೌರಿ ಮದುವೆ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ನಾಗಿಣಿ ಧಾರಾವಾಹಿಯ ಮೂಲಕ ತಮ್ಮ ನಟನ ವೃತ್ತಿಯನ್ನು ಪ್ರಾರಂಭ ಮಾಡಿದಂತಹ ನಮ್ರತಾ ಗೌಡ(Naramata Gowda) ಇಂದು ಕನ್ನಡ ಕಿರುತೆರೆಯ ಬಹು ಬೇಡಿಕೆಯ ನಟಿ. ನೀಡಿದಂತಹ ಪಾತ್ರ ಅಚ್ಚು ಕಟ್ಟಾಗಿ ಜೀವ ತುಂಬುತ್ತಾ ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುವ ಈ ನಟಿ ಕಳೆದ ಕೆಲ ದಿನಗಳ ಹಿಂದಷ್ಟೇ ತಮ್ಮ ಸ್ನೇಹಿತೆ ಐಶ್ವರ್ಯ ಸಿಂಧೂಗಿ (Aishwarya Sindogi) ಅವರೊಂದಿಗೆ ಇಂಟರ್ನ್ಯಾಷನಲ್ ಪ್ರವಾಸ ಬಾಲಿಗೆ ಹಾರಿ ಬಿಕನಿ ಫೋಟೋಗಳನ್ನು

ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಬಾರಿ ಸುದ್ದಿಗೋಳಗಾಗಿದ್ದರು. ಆ ವರೆಗೂ ಕೇವಲ ನಾಗಿಣಿ ಅವತಾರದಲ್ಲಿ ದೇವಲೋಕದ ಕನ್ಯೆಯಾಗಿ ಕಣ್ಣು ತುಂಬಿಕೊಳ್ಳುತ್ತಿದ್ದಂತಹ ಅಭಿಮಾನಿಗಳು ಏಕಾಏಕಿ ನಟಿ ನಮ್ರತಾ ಗೌಡ ಅವರನ್ನು ಹಾಟ್ ಮೈ ಮಾಟದಲ್ಲಿ ಕಂಡು ಮೂಕವಿಸ್ಮಿತರಾಗಿದ್ದರು. ಹೀಗೆ ಇಷ್ಟು ದಿನಗಳ ಕಾಲ ತಮ್ಮ ಮಾದಕ ಫೋಟೋಶೂಟ್ ಹಾಗೂ ವಿಡಿಯೋಗಳಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸುದ್ದಿಗೊಳಗಾಗಿದ್ದ ನಮ್ರತಾ ಗೌಡ ಇದೀಗ ಹೊಸ ಮನೆಯನ್ನು ಖರೀದಿಸಿ

ಅದರ ಗೃಹಪ್ರವೇಶದ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಿ ಸದ್ದು ಮಾಡುತ್ತಿದ್ದಾರೆ. ಹೌದು ಗೆಳೆಯರೇ ಬೆಂಗಳೂರಿನ ಆರ್ ಆರ್ ನಗರದಲ್ಲಿ ನಟಿ ನಮ್ರತಾ ಗೌಡ ಹೊಸ ಮನೆ ಒಂದನ್ನು ಖರೀದಿಸಿ ಅದರ ಗೃಹಪ್ರವೇಶದ ಕಾರ್ಯಕ್ರಮವನ್ನು ತಮ್ಮ ಕುಟುಂಬಸ್ಥರು ಸ್ನೇಹಿತರು ಹಾಗೂ ಸಿನಿ ಸೆಲೆಬ್ರಿಟಿಗಳೊಂದಿಗೆ ಬಹಳ ಅದ್ದೂರಿಯಾಗಿ ನೆರವೇರಿಸಿದರು. ತಮ್ಮ ತಾಯಿ ಮಂಜುಳಾ ಹಾಗೂ ತಂದೆ ಶ್ರೀನಿವಾಸ್ ಅವರ ಜೊತೆ ಸೇರಿ ನಮ್ರತಾ ಗೌಡ ಪೂಜಾ ಕೈಂಕಾರಿಯಗಳನ್ನೆಲ್ಲ ಮುಗಿಸಿ ಫೋಟೋಗೆ ಬಹಳ ಮುದ್ದಾಗಿ ಫೋಸ್ ನೀಡಿದ್ದಾರೆ.

ಕಂದು ಬಣ್ಣದ ಸೀರೆ ಹುಟ್ಟು ಒಡವೆ ಆಭರಣಗಳನ್ನು ಧರಿಸಿ ಪೂಜಾ ಕೆಲಸಗಳನ್ನು ಮುಗಿಸಿದ ನಂತರ ಗುಲಾಬಿ ಬಣ್ಣದ ಸೀರೆಯಲ್ಲಿ ಫೋಟೋಗೆ ಫೋಸ್ ನೀಡಿರುವ ನಮ್ರತಾ ಗೌಡ(Naramata Gowda) ಈ ಒಂದು ಕಾರ್ಯಕ್ರಮಕ್ಕೆ ಕಿರುತೆರೆ ಮಿತ್ರರನ್ನು ಆಹ್ವಾನಿಸಿದ್ದರು. ಅದರಂತೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ಗೊಂಬೆ ಅಲಿಯಾಸ್ ನೇಹಾ ರಾಮಕೃಷ್ಣ, ಅನುಪಮಾ ಗೌಡ, ಕಿಶನ್ ಸೇರಿದಂತೆ ಮುದ್ದಾದ ಕಿರುತೆರೆ ಕಲಾವಿದರು ಆಗಮಿಸಿ ಶುಭ ಕೋರಿದರು.

Leave A Reply

Your email address will not be published.

error: Content is protected !!
Footer code: