Puneeth Rajkumar: ಪುನೀತ್ ರಾಜಕುಮಾರ್ ಹಾಗು ಅಶ್ವಿನಿ ಅವರ ಮದುವೆಯ ಅಪರೂಪದ ಫೋಟೋಸ್! ಇಲ್ಲಿವೆ ನೋಡಿ

0

ಸ್ನೇಹಿತರೆ, ಪುನೀತ್ ರಾಜಕುಮಾರ್(Puneeth Rajkumar) ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಕೂಡ ಅವರ ಕುರಿತಾದ ವಿಚಾರಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಹೀಗೆ ಅಪ್ಪು ಹೃದಯ ಘಾತದಿಂದಾಗಿ ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಕಳೆದರು ಯಾರಿಂದಲೂ ಕೂಡ ಪುನೀತ್ ರಾಜಕುಮಾರ್ ಭಾರದ ಲೋಕಕ್ಕೆ ತೆರಳಿದ್ದಾರೆ ಎಂಬ ಸತ್ಯವನ್ನು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಕ್ಕೆ ತಮ್ಮ ಒಳ್ಳೆಯ ಕಾರ್ಯಗಳ ಮೂಲಕ ಜನರ ಹೃದಯದ ಹಳದಲ್ಲಿ ಕುಳಿತುಬಿಟ್ಟಿದ್ದಾರೆ.

ಹೀಗಿರುವಾಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪುನೀತ್ ರಾಜಕುಮಾರ್ ಅವರ ಮದುವೆಯ ಅಪರೂಪದ ಚಿತ್ರಣಗಳು ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಹೌದು ಗೆಳೆಯರೇ ಓರ್ವ ಕಾಮನ್ ಫ್ರೆಂಡ್ ಮೂಲಕ ಆದಂತಹ ಅಪ್ಪು ಅಶ್ವಿನಿಯವರ ಪರಿಚಯ ಬರೋಬ್ಬರಿ 22 ವರ್ಷಗಳ ಸುಖ ಸಂಸಾರಿಕ ಜೀವನಕ್ಕೆ ನಾಂದಿ ಹಾಡಿತ್ತು.

ಪುನೀತ್ ರಾಜಕುಮಾರ್(Puneeth Rajkumar) ಮತ್ತು ಅಶ್ವಿನಿ ರೇವಂತ್(Ashwini Revanth) ಇಬ್ಬರಿಗೂ ಪರಿಚಯವಿದ್ದಂತಹ ಸ್ನೇಹಿತರೊಬ್ಬರ ಬರ್ತಡೆ ಪಾರ್ಟಿಯಲ್ಲಿ ಅಪ್ಪು ಹಾಗು ಅಶ್ವಿನಿ ಭೇಟಿ ಮಾಡುತ್ತಾರೆ. ಆನಂತರ ಬರೋಬ್ಬರಿ ಎಂಟು ತಿಂಗಳುಗಳ ಕಾಲ ಆತ್ಮೀಯವಾದ ಸ್ನೇಹಿತರಾಗಿದ್ದ ಇವರಿಬ್ಬರು ತಮ್ಮ ಮನಸ್ಸಿನೊಳಗಿದ್ದಂತಹ ಪ್ರೀತಿಯನ್ನು ಹೇಳಿಕೊಳ್ಳಲಾಗದೆ ಒದ್ದಾಡಿದರು. ಹೀಗೊಂದು ದಿನ ಪುನೀತ್ ರಾಜಕುಮಾರ್ ಅವರ ಮನಸ್ಸು ಮಾಡಿ ಅಶ್ವಿನಿ ಅವರನ್ನು ಭೇಟಿ ಮಾಡುವಂತೆ ಕರೆದು

ಹೂಗುಚ್ಛ ನೀಡಿ ಹೀಗೆ ಪುನೀತ್ ರಾಜಕುಮಾರ್(Puneeth Rajkumar) ಹಾಗೂ ಅಶ್ವಿನಿ ಅವರ ಪ್ರೀತಿಯನ್ನು ಮನೆಯವರೆಲ್ಲರೂ ಒಪ್ಪಿ ಡಿಸೆಂಬರ್ ಒಂದನೇ ತಾರೀಕು 1999 ರಂದು ಅದ್ದೂರಿಯಾಗಿ ಮದುವೆ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಒಂದು ಅಪರೂಪದ ಕ್ಷಣಕ್ಕೆ ರಾಜ್ ಕುಟುಂಬ, ಪುನೀತ್ ರಾಜಕುಮಾರ್ ಅವರ ಆತ್ಮೀಯ ಸ್ನೇಹಿತರು ಹಾಗೂ ಸಿನಿಮಾ ರಂಗ ಸಾಕ್ಷಿಯಾಗಿತ್ತು.

Leave A Reply

Your email address will not be published.

error: Content is protected !!