Dhruva Sarja Daughter : ಅಪ್ಪ ಅಮ್ಮನ್ಗಿಂತ ಒಂದು ಪಟ್ಟು ಹೆಚ್ಚು ಮುದ್ದಾಗಿದ್ದಾಳೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಮಗಳು, ಮುದ್ದಾದ ಫೋಟೋಸ್ ಇಲ್ಲಿವೆ ನೋಡಿ!!

0

Dhruva Sarja Daughter : ಸ್ನೇಹಿತರೆ, ತಮ್ಮ ಅಪ್ರತಿಮ ಅಭಿನಯ, ಡೈಲಾಗ್ ಡೆಲಿವರಿ ಹಾಗೂ ಬಾಡಿ ಲ್ಯಾಂಗ್ವೇಜ್ ಮೂಲಕವೇ ಕೋಟ್ಯಂತರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ಆಕ್ಷನ್ ಧ್ರುವ ಸರ್ಜಾ(Dhruva Sarja) ಅಭಿನಯಿಸಿರುವುದು ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಾದರೂ ಕೂಡ ಇವರ ನಟನೆಗೆ ವಿಶೇಷವಾದ ಫ್ಯಾನ್ ಬೇಸ್ ಇದೆ.

ಹೌದು ಗೆಳೆಯರೇ ನಟಿ ರಾಧಿಕಾ ಪಂಡಿತ್ ಅವರ ಜೊತೆಗೆ ಅದ್ದೂರಿ ಸಿನಿಮಾದ ಮೂಲಕ ಡೆಬ್ಯೂ ಮಾಡಿ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಂಡಂತಹ ಧ್ರುವ ಸರ್ಜಾ(Dhruva Sarja) ನಂತರ ಬಹದ್ದೂರ್, ಭರ್ಜರಿ ಹಾಗೂ ಪೊಗರು ಎಂಬ ಸಿನಿಮಾಗಳನ್ನು ಮಾಡಿ ಕನ್ನಡದ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ. ವರ್ಷಗಳ ಹಿಂದೆ ತಮ್ಮ ಬಾಲ್ಯದ ಗೆಳತಿ ಪ್ರೇರಣ(Prerana) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Dhruva Sarja Daughter Photos

ಈ ದಂಪತಿಗಳಿಗೆ ಮುದ್ದು ಮಗಳು ಜನಿಸಿದ್ದು, ಅವರ ಫೋಟೋವನ್ನು ನಟ ದ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಸರ್ಜಾ ಕುಟುಂಬದ ಕುಡಿ ಹೇಗಿದ್ದಾಳೆ ಎಂಬುದನ್ನು ರಿವೀಲ್ ಮಾಡಿದರು. ಹೌದು ಗೆಳೆಯರೇ 2019 ರಂದು ಮನೆಯವರೆಲ್ಲರ ಒಪ್ಪಿಗೆ ಪಡೆದು ಕನ್ನಡ ಸಿನಿಮಾ ರಂಗದ ಸಾಕ್ಷಿಯಾಗಿ ಧ್ರುವ ಮತ್ತು ಪ್ರೇರಣ ಬೆಂಗಳೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದರು.

ಅನಂತರದ ದಿನಗಳಲ್ಲಿ ಎದುರಾದ ಚಿರಂಜೀವಿ ಸರ್ಜಾ(Chiranjeevi Sarja) ಅವರ ಸಾವು ತಮ್ಮನಿಗೆ ಅಘಾತವಾದ ನೋವನ್ನು ತಂದು ಕೊಟ್ಟಿತ್ತು. ಹೀಗಾಗಿ ಯಾವುದೇ ಖಾಸಗಿ ಕಾರ್ಯಕ್ರಮಗಳಾಗಲ್ಲಿ ಸಿನಿಮಾದಲ್ಲಾಗಲ್ಲಿ ಕಾಣಿಸಿಕೊಳ್ಳುತ್ತಲೇ ಇರಲಿಲ್ಲ. ಆದರೀಗ ಮತ್ತೆ ಧ್ರುವ ಸರ್ಜಾ(Dhruva Sarja) ಯಶಸ್ವಿ ಸಿನಿಮಾಗಳನ್ನು ನೀಡುತ್ತಿದ್ದ ಸಿನಿಬದುಕಿನಲ್ಲಿ ತೊಡಗಿಕೊಂಡಿದ್ದು.

ಮಾರ್ಟಿನ್ (Martin) ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿ ಬಿಜಿಯಿದ್ದಾರೆ, ಇದರ ನಡುವೆ ವೈಯಕ್ತಿಕ ಬದುಕಿನತ್ತ ಹೆಚ್ಚಿನ ಗಮನ ಹರಿಸುವ ದ್ರುವ ತಮ್ಮ ಮುದ್ದು ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಹೌದು ಗೆಳೆಯರೇ ಮಗು ಜನಿಸಿ ಏಳು ತಿಂಗಳಾದ ಬಳಿಕ ಆಕೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಧ್ರುವ ಮತ್ತು ಪ್ರೇರಣ(Prerana) ‘ನನ್ನ ಮಗಳು(My daughter) ಎಂಬ ಕ್ಯಾಪ್ಶನ್(caption) ಬಳಸಿ ಮಾಡಿರುವಂತಹ ವಿಭಿನ್ನವಾದ ಫೋಟೋಶೂಟ್ಗಳನ್ನೆಲ್ಲ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಈ ಫೋಟೋಗಳು ರಿವೀಲ್ ಆಗುತ್ತಾ ಇದ್ದಹಾಗೆ ಅಭಿಮಾನಿಗಳ ವತಿಯಿಂದ ಭರ್ಜರಿ ಪ್ರತಿಕ್ರಿಯೆ ದೊರಕುತ್ತಿದ್ದು, ಧ್ರುವ ಸರ್ಜಾ(Dhruva Sarja) ಅವರ ಮಗಳ ಅಂದ ಚಂದವನ್ನು ಕಮೆಂಟ್ ಬಾಕ್ಸ್ ಮೂಲಕ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ, ನೀವು ಕೂಡ ಈ ಪುಟದ ಮುಖಾಂತರ ನಟ ದ್ರುವ ಹಾಗೂ ಪ್ರೇರಣ(Prerana) ದಂಪತಿಗಳ ಮುದ್ದು ಮಗಳು ಹೇಗಿದ್ದಾಳೆ ಎಂಬುದನ್ನು ಕಣ್ತುಂಬಿಕೊಳ್ಳಬಹುದು.

Leave A Reply

Your email address will not be published.

error: Content is protected !!
Footer code: