ಡಾಕ್ಟರ್ ವಿಷ್ಣುವರ್ಧನ್ (Vishnuvardhan) ಅವರ ಕಾಲದಿಂದಲೂ ಕನ್ನಡ ಸಿನಿಮಾರಂಗದಲ್ಲಿ ತೊಡಗಿಸಿಕೊಂಡು ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿರುವ ನಟಿ ಮೀನಾ(Meena) ಅವರು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಅಭಿನಯಿಸುತ್ತ ಬೇಡಿಕೆ ಹೊಂದಿರುವ ನಟಿಯಾಗಿದ್ದಾರೆ.

ಈಗಲೂ ಕೂಡ ಕೆಲ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತ ತಮ್ಮ ಅಭಿಮಾನಿ ಬಳಗವನ್ನು ರಂಜಿಸುತ್ತಿರುವ ಮೀನಾ ಅವರು ಆಗಾಗ ತಮ್ಮ ಮುದ್ದು ಮಗಳೊಂದಿಗೆ ಫೋಟೋಶೂಟ್ ಮಾಡಿಸಿ ಅವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಸದ್ಯ ಮೀನಾ ಮತ್ತು ನೈನಿಕ ವಿದ್ಯಾ ಸಾಗರ್(Ninika Vidyasagar) ಅವರ ಫೋಟೋ ಗ್ಯಾಲರಿ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

Actress Meena With Daughter

ಹೌದು ಗೆಳೆಯರೇ ನಟಿ ಮೀನಾ ಅವರು ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ಬೆಂಗಳೂರು ಮೂಲದ ಸಾಫ್ಟ್ವೇರ್ ಇಂಜಿನಿಯರ್ ವಿದ್ಯಾಸಾಗರ್(Vidyasagar) ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇತರ ನಟಿಯಂತೆ ಮದುವೆಯಾದ ಬಳಿಕ ಸಣ್ಣಪುಟ್ಟ ಕಿರಿಕ್ನಿಂದ ತಮ್ಮ ವೈಯಕ್ತಿಕ ಬದುಕನ್ನು ಹಾಳು ಮಾಡಿಕೊಳ್ಳುವ ಆಸ್ಪದಕ್ಕೆ ನಟಿ ಮೀನ ಮುಂದಾಗಲೇ ಇಲ್ಲ.

ಬದಲಿಗೆ ಬಹಳ ಪ್ರೀತಿಯಿಂದ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕಿಗೆ ಸಮನಾದ ಸಮಯ ಶ್ರದ್ಧೆ ಹಾಗೂ ಗೌರವ ನೀಡಿ ಎರಡನ್ನು ಸರಿದೂಗಿಸುವಲ್ಲಿ ಯಶಸ್ವಿಯಾದರು. ಆದರೆ ಕೆಲ ದಿನಗಳ ಹಿಂದೆ ವಿದ್ಯಾಸಾಗರ(Vidyasagar)ರವರು ಅಕಾಲಿಕ ಮರ’ಣ ಹೊಂದಿರುವ ವಿಚಾರ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಸದ್ಯ ಮಗಳ ಆರೈಕೆ ಹಾಗೂ ಪೋಷಣೆಯತ್ತ ತಮ್ಮ ಚಿತ್ತವನ್ನು ಹರಿಸುತ್ತಿರುವ ನಟಿ ಮೀನ ಆಗಾಗ ಮುದ್ದು ಮಗಳಾದ ನೈನಿಕ(Nainika) ವಿದ್ಯಾಸಾಗರ್ ಅವರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.

ಅಮ್ಮನಂತೆ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಕೊಂಡಿರುವ ನೈನಿಕ ತಳಪತಿ ವಿಜಯ ತಲಪತಿ(Vijay Thalapathi) ಯವರ ತೆರಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಾಯಿಯಂತೆಯೇ ಸಿನಿಮಾರಂಗದಲ್ಲಿ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *

error: Content is protected !!
Footer code: