ನನ್ನ ಮುಖದಲ್ಲಿ ನಗು ಮೂಡಿಸಿದ ವ್ಯಕ್ತಿ ಎನ್ನುತ್ತ ರಮ್ಯಾ ರಾಹುಲ್ ಗಾಂಧಿಯವರ ಫೋಟೋ ಶೇರ್ ಮಾಡಿದ್ಯಾಕೆ??

0

ಕೆಲ ಕಾರಣಾಂತರಗಳಿಂದಾಗಿ ಸಿನಿಮಾ ರಂಗ ಹಾಗೂ ರಾಜಕೀಯ ಬದುಕಿನಿಂದ ದೂರವಾಗಿ ತಮ್ಮ ಕುಟುಂಬಸ್ಥರು ಹಾಗೂ ಮುದ್ದದ ನಾಯಿ ಮರಿಗಳೊಂದಿಗೆ ಸೆಟಲ್ ಆಗಿದ್ದಂತಹ ರಮ್ಯಾ(Ramya) ಅವರು ಕಳೆದ ಒಂದುವರೆ ವರ್ಷದ ಹಿಂದೆ ಪುನೀತ್ ರಾಜಕುಮಾರ್(Puneeth Rajkumar) ಅವರ ಅಂತ್ಯದರ್ಶನದ ಸಂದರ್ಭದಲ್ಲಿ ಎಲ್ಲರ ಮುಂದೆ ಬಂದರು.

ಹೀಗೆ ಅಂದಿನಿಂದ ಇಂದಿನವರೆಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಹಳ ಆಕ್ಟಿವ್ ಆಗಿ ಇರುವಂತಹ ರಮ್ಯಾ(Ramya) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನನ್ನ ಮುಖದಲ್ಲಿ ಮತ್ತೆ ನಗು ಮರಳಿಸಿದ ವ್ಯಕ್ತಿ ಎಂದು ಹೇಳುತ್ತೇನೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಯವರ ಫೋಟೋ ಶೇರ್ ಮಾಡಿದ್ದಾರೆ.

Actress Ramya Shared Rahul Gandhi Photos

ಕೇಂದ್ರ ನಾಯಕ ರಾಹುಲ್ ಗಾಂಧಿ ಅವರಿಗೆ ಜೂನ್ 19ನೇ ಹುಟ್ಟು ಹಬ್ಬದ ವಿಶೇಷ ದಿನವಾಗಿದ್ದು, ಈ ಕಾರಣದಿಂದ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ರಾಹುಲ್ ಗಾಂಧಿಯವರ ಫೋಟೋಗಳನ್ನು ಶೇರ್ ಮಾಡಿ ವಿಭಿನ್ನವಾಗಿ ವಿಶ್ ಮಾಡಿದರು. ಅದರಲ್ಲಿ ನಟಿ ರಮ್ಯಾ ಮಾಡಿದಂತಹ ಬರ್ತಡೆ ವಿಶ್ ಬಾರಿ ಸುದ್ದಿಗೊಳಗಾಗಿತ್ತು.

ಹೌದು ಸ್ನೇಹಿತರೆ ಕಾಂಗ್ರೆಸ್ ಪಕ್ಷದ (Congress party) ಮೂಲಕ ರಾಜಕೀಯ ಪ್ರವೇಶ ಮಾಡಿದಂತಹ ರಮ್ಯಾ(Ramya) ಅವರು ಶಾಸಕಿಯಾಗಿಯೂ ಕಾರ್ಯನಿರ್ವಹಿಸಿದರು. ಹೀಗೆ ಕೆಲ ಕಾರಣಾಂತರಗಳಿಂದ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರವನ್ನು ತೊರೆದಿರುವ ರಮ್ಯಾ(Ramya ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ (comeback) ಮಾಡಿದಂತೆ ರಾಜಕೀಯ(politics) ದಲ್ಲಿಯೂ ಸಕ್ರಿಯರಾಗಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ರಾಹುಲ್ ಗಾಂಧಿಯವರ 53ನೇ ವರ್ಷದ ಹುಟ್ಟುಹಬ್ಬಕ್ಕೆ ‘ಕರುಣೆಯ ಕಣ್ಣುಗಳಿಂದ ಜಗತ್ತನ್ನು ನೋಡಲು ಕಲಿಸಿದವರು, ನನ್ನ ಮುಖದಲ್ಲಿ ಮತ್ತೆ ನಗುವನ್ನು ತರಿಸಿದವರು” ಎಂಬ ಪದಗಳಿಂದ ವರ್ಣಿಸುತ್ತಾ ಹ್ಯಾಪಿ ಬರ್ತಡೆ ಎಂಬ ಕ್ಯಾಪ್ಷನ್ ಬರೆದು ರಾಹುಲ್ ಅವರೊಂದಿಗಿನ ಫೋಟೋಗಳನ್ನು ಶೇರ್ ಮಾಡುತ್ತಾ ಎಂದು ಹುಟ್ಟು ಹಬ್ಬದ ಶುಭಾಶಯಗಳು(Birthday wishes) ಕೋರಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಬಾರಿ ವೈರಲಾಗುತ್ತಿದ್ದು, ನೆಟ್ಟಿಗರು ಮತ್ತೆ ಇವರಿಬ್ಬರನ್ನು ಒಟ್ಟಾಗಿ ಕಂಡು ವಿಧವಿಧವಾಗಿ ಕಮೆಂಟ್ ಮಾಡತೊಡಗಿದ್ದಾರೆ.

Leave A Reply

Your email address will not be published.

error: Content is protected !!
Footer code: