ಲೂಸ್ ಮಾದ ಯೋಗಿ ಅವರ ಮುದ್ದಾದ ಕುಟುಂಬ ಹೇಗಿದೆ ನೋಡಿ!!

0

ಕನ್ನಡ ಸಿನಿಮಾ ರಂಗದ ಬ್ಲಾಕ್ ಕೋಬ್ರಾ ವಿಜಯ್(Black cobra Vijay) ಅವರ ದುನಿಯಾ ಸಿನಿಮಾದಲ್ಲಿ ಲೂಸ್ ಮಾದ(loose mada) ಎಂಬ ಸಣ್ಣ ಪೋಷಕ ಪಾತ್ರದ ಮೂಲಕ 2007ರಲ್ಲಿ ಜನರಿಗೆ ಪರಿಚಯಗೊಂಡಂತಹ ಯೋಗೇಶ್ ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಆರಂಭಿಕ ದಿನಗಳಲ್ಲಿ ಸಾಕಷ್ಟು ನೆಗೆಟಿವ್ ಪಾತ್ರ(Negative roles)ಗಳ ಮೂಲಕವೇ ಗುರುತಿಸಿಕೊಂಡಿದ್ದರು. ಅನಂತರದ ಅಂಬಾರಿ(Ambari) ಸಿನಿಮಾ ಬಹುದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡುತ್ತದೆ.

ಹೌದು ಗೆಳೆಯರೇ ಚಿತ್ರದಲ್ಲಿನ ಇವರ ಅಭಿನಯಕ್ಕಾಗಿ ಅತ್ಯುತ್ತಮ ರಾಜ್ಯ ಚಲನಚಿತ್ರ ಪ್ರಶಸ್ತಿಯಾದ ಅತ್ಯುತ್ತಮ ನಟ ಅವಾರ್ಡನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ. ಅನಂತರ ತೆರೆಕಂಡ ಹುಡುಗರು, ಅಲೆಮಾರಿ, ಸಿದ್ಲಿಂಗು, ಯಾರೇ ಕೂಗಾಡಲಿ, ನಂದ ಲವ್ಸ್ ನಂದಿತಾ, ರಾವಣ, ಯೋಗಿ ದೇವದಾಸ್, ಕಾಲಾಯ ತಸ್ಮೈ ನಮಃ, ಪ್ರಿಯತಮೆ, ಅಂಬರ, ಜಿಂಕೆಮರಿ, ಲಂಬೋದರ, ಹೆಡ್ ಬೂಷ್ ಹೀಗೆ ಮುಂತಾದ ಸಿನಿಮಾಗಳ ಮೂಲಕ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಇನ್ನು ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡಂತಹ ಲೂಸ್ ಮಾದ ಯೋಗಿ(Yogi) ತಮ್ಮ ಬಹುಕಾಲದ ಗೆಳತಿ ಸಾಹಿತ್ಯ(Sanity’s) ಎಂಬುವವರನ್ನು ಹಲವರು ವರ್ಷಗಳ ಕಾಲ ಪ್ರೀತಿಸಿ. ಮನೆಯವರೆಲ್ಲರ ಒಪ್ಪಿಗೆ ದೊರಕಿದ ನಂತರ ಬೆಂಗಳೂರಿನ ಪ್ರತಿಷ್ಠಿತ ರೆಸಾರ್ಟ್(Resort) ಒಂದರಲ್ಲಿ ನವೆಂಬರ್ ಎರಡನೇ ತಾರೀಕು 2017 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ದಂಪತಿಗಳಿಗೆ ಸದ್ಯ ಶ್ರೀನಿಕಾ(Srinika) ಎಂಬ ಮುದ್ದಾದ ಮಗಳಿದ್ದು ಆಗಾಗ ನಟ ಯೋಗಿ ತಮ್ಮ ಮುದ್ದು ಮಗಳ ಹಾಗೂ ಪತ್ನಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಮಾಡುತ್ತಲೇ ಇರುತ್ತಾರೆ. ಹೀಗೆ ನೆನ್ನೆ ಎಷ್ಟೇ ಆದ ಹುಟ್ಟುಹಬ್ಬದ ವಿಶೇಷವಾಗಿ ಲೂಸ್ ಮಾದ ಯೋಗಿಯವರ ಕುಟುಂಬದ ಫೋಟೋಗಳು ಬಾರಿ ವೈರಲಾಗಿದ್ದವು. ಅದರಂತೆ ನೀವು ಸಹ ಈ ಪುಟದ ಮುಖಾಂತರ ನಟ ಲೂಸ್ ಮಾದ ಯೋಗಿ ಅವರ ಪತ್ನಿ ಹೇಗಿದ್ದಾರ? ಇವರ ಸುಂದರ ಕುಟುಂಬದ ಅಪರೂಪದ ಫೋಟೋಗಳು ಹೇಗಿದೆ ಎಂಬುದನ್ನು ನೋಡಬಹುದಾಗಿದೆ.

Leave A Reply

Your email address will not be published.

error: Content is protected !!